ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ವೈದ್ಯ- ಇಂಜಿನಿಯರ್ ಕನಸೊತ್ತ ವಿದ್ಯಾರ್ಥಿಗಳಿಗೆ ಆಕಾಶ್ ಬೈಜೂಸ್‌ನಿಂದ ವಿವಿಧ ವಿದ್ಯಾರ್ಥಿ ವೇತನ…

Share Below Link

ಶಿವಮೊಗ್ಗ : ಆಕಾಶ್ ಬೈಜೂಸ್ ಏಪ್ರಿಲ್ ೨೦೨೪ರಲ್ಲಿ ಆರಂಭ ವಾಗಲಿರುವ ವೈದ್ಯರು ಮತ್ತು ಎಂಜಿನಿಯರ್ ಗಳಾಗಬೇಕೆಂದು ಹೊತ್ತಿರುವ ಹಲವಾರು ವಿದ್ಯಾರ್ಥಿ ಗಳ ಕನಸನ್ನು ನನಸು ಮಾಡುವ ಉzಶದಿಂದ ವಿವಿಧ ವಿದ್ಯಾರ್ಥಿ ವೇತನಗಳನ್ನು ಪ್ರಕಟಿಸಿದೆ ಎಂದು ಆಕಾಶ್ ಬೈಜೂಸ್‌ನ ಚೀಫ್ ಬ್ಯುಸಿನೆಸ್ ಆಫೀಸರ್ ಅನೂಪ್ ಅಗರ್ವಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ವಿದ್ಯಾರ್ಥಿ ವೇತನವೆಂದರೆ ಇನ್‌ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ ಆಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್ ಕೋರ್ಸ್‌ಗಳ ಪ್ರವೇಶಕ್ಕೆ ಶೇ.೯೦ರವರೆಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಇದಲ್ಲದೇ, ಆಕಾಶ್ ಬೈಜೂಸ್ ಹುತಾತ್ಮರಾದ ಯೋಧರು, ಸೇನಾ ಸಿಬ್ಬಂದಿ ಮತ್ತು ಭಯೋತ್ಪಾದಕ ದಾಳಿಗೆ ತುತ್ತಾದವರ ಮಕ್ಕಳಿಗೆ ವಿಶೇಷ ರಿಯಾಯ್ತಿಯನ್ನು ನೀಡುತ್ತಿದೆ ಎಂದರು.
ಇನ್ ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ ೬೦ ನಿಮಿಷ ಗಳ ಪರೀಕ್ಷೆಯಾಗಿದ್ದು, ನಿಗದಿತ ದಿನಗಳಂದು ಬೆಳಗ್ಗೆ ೧೦ ರಿಂದ ರಾತ್ರಿ ೮ ಗಂಟೆಯೊಳಗೆ ಪರೀಕ್ಷೆಯನ್ನು ಬರೆಯಲು ಅವಕಾಶವಿದೆ. ೮ ರಿಂದ ೧೨ನೇ ತರಗತಿಯ ವಿದ್ಯಾರ್ಥಿ ಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಅಥವಾ ಎಂಜಿನಿಯ ರಿಂಗ್‌ನಲ್ಲಿ ತಮ್ಮ ವೃತ್ತಿಜೀವನದ ಸಾಮರ್ಥ್ಯವನ್ನು ಪ್ರದರ್ಶಿಸಲು (iACST) ಒಂದು ವೇದಿಕೆ ಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.
೨೦೨೪ರಿಂದ ಇದುವರೆಗೆ ಈ ವಿದ್ಯಾರ್ಥಿ ವೇತನದಿಂದ ೭೫.೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದಿzರೆ. ಇತ್ತೀಚೆಗೆ ನಡೆದ ಜೆಇಇ ಮೇನ್ಸ್ ೨೦೨೪ ಪರೀಕ್ಷೆಯಲ್ಲಿ ಆಕಾಶ್ ಬೈಜೂಸ್‌ನ ೪೧.೨೬೩ ವಿದ್ಯಾರ್ಥಿ ಗಳು ಅರ್ಹತೆ ಪಡೆಯುವ ಮೂಲಕ ಸಂಸ್ಥೆಯು ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದೆ ಎಂದರು.
ಆಕಾಶ್ ಬೈಜೂಸ್‌ನ ಡಿಜಿ ಟಲ್ ಪ್ರೋಗ್ರಾಂನ ವಿದ್ಯಾರ್ಥಿ ಗಳು ಜೆಇಇ ಮೇನ್ಸ್ ೨೦೨೪ (ಸೆಶ ನ್ -೦೧)ರಲ್ಲಿ ಉತ್ತಮ ಸಾಧನೆ ತೋರಿzರೆ.ಗಣಿತದಲ್ಲಿ ೧೦೦ ಅಂಕಗಳೊಂದಿಗೆ ರೀತಂ ಬ್ಯಾನರ್ಜಿ ಒಟ್ಟಾರೆ ಶೇ.೯೯.೯೬ ಅಂಕ ಪಡೆಯುವುದರೊಂದಿಗೆ ಈ ವಿಭಾಗದಲ್ಲಿ ಟಾಪರ್ ಆಗಿzರೆ.
ಇನ್ನು NEET-UG ಪರೀಕ್ಷೆ ೨೦೨೩ರಲ್ಲಿ ಆಕಾಶ್ ಬೈಜೂಸ್‌ನ ೧.೦೬.೮೭೦ ವಿದ್ಯಾರ್ಥಿಗಳು ಅರ್ಹತೆ ಪಡೆದಿರುವುದು ಒಂದು ಮೈಲಿಗಗಿದೆ. ಇವರಲ್ಲಿ ೧೭ ಮಂದಿ ವಿದ್ಯಾರ್ಥಿಗಳು ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಿಗೆ ಟಾಪರ್ ಗಳಾಗಿ ಹೊರಹೊಮ್ಮಿ zರೆ. ಆಲ್ ಇಂಡಿಯಾ ರ್‍ಯಾಕಿಂಗ್ ಅಂದರೆ ಅಐನಲ್ಲಿ ಮೂರನೇ ಟಾಪರ್, ಕೌಸ್ತುಭ್ ಬೌರಿ, ಧೃವ್ ಅಡ್ವಾಣಿ ೫ನೇ ಟಾಪರ್, ಸೂರ್ಯ ಸಿದ್ಧಾರ್ಥ್ ನಾಗರಾಜನ್ ೬ ನೇ ಟಾಪರ್, ಸ್ವಯಂ ಶಕ್ತಿ ತ್ರಿಪಾಠಿ ೮ ನೇ ಟಾಪರ್ ಮತ್ತು ಪಾರ್ಥ್ ಖಂಡೇಲ್ವಾಲ್ ೧೦ನೇ ಟಾಪರ್ ಆಗಿ ಹೊರಹೊಮ್ಮಿzರೆಂದರು.
ಗೋಷ್ಠಿಯಲ್ಲಿ ಹರೀಶ್ ಟ,ಸ್, ಬ್ರಾಂಚ್ ಮೆನೇಜರ್, ವರುಣ ಸೋನಿ, ನಿತೀನ್ ಆರ್, ಉಪಸ್ಥಿತರಿದ್ದರು.