ಅ.೧೨: ಶ್ರೀ ಮುನೇಶ್ವರಸ್ವಾಮ ದೇವಸ್ಥಾನದಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮ…
ಶಿವಮೊಗ್ಗ : ನಗರದ ಹೊಸಮನೆ ಬಡಾವಣೆ (ಚಾನಲ್ ದಂಡೆ ಬಲಭಾಗ), ಯಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ಶ್ರೀ ಅಮ್ಮಸಾರ್ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೇ| ಬ್ರ| ಶ್ರೀ ಸುಮುಖ ಭಟ್ ರವರ ನೇತೃತ್ವದಲ್ಲಿ ಅ.೧೨ರ ನಾಳೆ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ ಹಾಗೂ ಸುಮಂಗಲಿ ಪೂಜೆ, ಕಳಸ ಪೂಜೆ, ಕಲಾ ಸಾನಿಧ್ಯ ಹೋಮ, ಶ್ರೀ ದುರ್ಗಾ ಹೋಮ, ರುದ್ರ ಹೋಮ, ಸಪ್ತ ಮುನಿಗಳ ಹೋಮ ನಡೆಯಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ಮಹಾ ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಈ ಎ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಮೊ : ೯೯೭೨೩೮೦೦೧೮ (ಎಂ. ಉಮೇಶ್), ೯೬೬೩೫೧೨೩೨೪ (ಆರ್. ಶಿವಕುಮಾರ್) ಸಂಪರ್ಕಿಸಬಹುದು.
