ಜ.10 ಮತ್ತು 11 ರಂದು ತಮಿಳು ಸಂಘದಿಂದ ವಿವಿಧ ಕಾರ್‍ಯಕ್ರಮ…
ಶಿವಮೊಗ್ಗ: ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲೆನಾಡು ತಮಿಳು ಯುವ ಸಂಘ ಜ.೧೦ ಮತ್ತು ೧೧ರಂದು ಸಾಂಸ್ಕೃಕ ಹಾಗೂ ಕ್ರೀಡಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಕುಮರೇಶ್ ಎಸ್. ತಿಳಿಸಿದರು.
ಸುಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೦ರ ನಾಳೆ ಬೆಳಿಗ್ಗೆ ೭ ಗಂಟೆಯಿಂದ ನಗರದ ಎನ್.ಇ.ಎಸ್. ಮೈದಾನದಲ್ಲಿ ಟೆನ್ನಿಸ್‌ಬಾಲ್ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಜ.೧೧ರಂದು ಬೆಳಿಗ್ಗೆ ೮ರಿಂದ ಆಲ್ಕೊಳದ ಶ್ರೀ ಅಗಮುಡಿ ಸಮುದಾಯ ಭವನದಲ್ಲಿ ಸಾಮೂಹಿಕ ಪೊಂಗಲ್ ಕಾರ್ಯಕ್ರಮ ಆಯೋಜಿಸಲಾ ಗಿದೆ. ಬೆಳಿಗ್ಗೆ ೯ಗಂಟೆಯಿಂದ ರಂಗೋಲಿ ಸ್ಪರ್ಧೆ, ೧೦ರಿಂದ ಮಕ್ಕಳಿಗೆ ಆಟದ ಸ್ಪರ್ಧೆಗಳು ನಡೆಯಲಿವೆ. ೧೧ಗಂಟೆಯಿಂದ ಯುವಕ-ಯುವತಿಯರಿಗೆ ಮಡಿಕೆ ಒಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಜ.೧೧ರಂದು ಸಂಜೆ ೫ಗಂಟೆಗೆ ಮಕ್ಕಳಿಂದ ನೃತ್ಯ ಪ್ರದರ್ಶನ ಬಳಿಕ ವಿದುಷಿ ಬಿ.ಕೆ. ವಿಜಯಲಕ್ಷ್ಮೀ ಮತ್ತು ವೃಂದದವರಿಂದ ನೃತ್ಯ ಪ್ರದರ್ಶನ ಹಾಗೂ ಪಂಚವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ ೭ಕ್ಕೆ ನಟನಂ ಬಾಲ್ಯನಾಟ್ಯ ಕೇಂದ್ರದ ವಿದುಷಿ ಜೀವಿತ ಶಿವಕುಮಾರ್, ಪ್ರೀತಿ ತನ್ನೆರಸು, ವಿಶಾರದೆ ಮಧುಮಿತಾ ಕೆ.ಕೆ., ಕು.ಕೃತಿಕಾ, ಕೃಷ್ಣಮೂರ್ತಿ ಅವರ ತಂಡದಿಂದ ನೃತ್ಯ ಕಾರ್ಯಕ್ರಮವಿದೆ ಎಂದರು.
ಜಿ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ|| ಧನಂಜಯ ಸರ್ಜಿ ರಾಷ್ಟ್ರಭಕ್ತ ಬಳಗದ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಇನ್ನಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಮುಖರಾದ ಮನೋ ಹರ್, ಎಸ್. ಕೃಷ್ಣಮೂರ್ತಿ, ಸಂದೀಪ್ ಎಸ್.ಆರ್., ಆರ್. ಶಿವಕುಮಾರ್, ರಮೇಶ್ ಸಿ., ಶಬರೀಶ್ ಎಸ್., ಮಹೇಶ್ ಕೆ.ಎಸ್., ರಮೇಶ್ ಆರ್., ನಟರಾಜ್ ಎಸ್., ಸುರೇಶ್, ನಿತಿನ್ ಮೊದಲಾದವರಿದ್ದರು.

