ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಿಲ್ಲಿಸಿ ಮತ್ತು ಗೆಲ್ಲಿಸಿ ಘೋಷವಾಕ್ಯದಡಿ ತೀನಾಶ್ರೀ ಚುನಾವಣಾ ಕಣಕ್ಕೆ…

Share Below Link

ಸಾಗರ: ಮೇ ೧೩ರ ಗುರು ವಾರ ಪಕ್ಷೇತರ ಅಭ್ಯರ್ಥಿಯಾಗಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಿಲ್ಲಿಸಿ ಮತ್ತು ಗೆಲ್ಲಿಸಿ ಎನ್ನುವ ಘೋಷ ವಾಕ್ಯದಡಿ ಚುನಾವಣೆ ಎದುರಿಸು ತ್ತಿದ್ದೇನೆ ಎಂದು ಮಲೆನಾಡು ಭೂಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಪಾರ ಜನರನ್ನು ಕರೆದು ಕೊಂಡು ಹೋಗದೆ ಸರಳವಾಗಿ, ನನ್ನ ಆಪ್ತವಲಯದ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿ, ನಂತರ ಪ್ರಚಾರ ಕಾರ್ಯವನ್ನು ಇನ್ನಷ್ಟು ಚುರುಕು ಗೊಳಿಸುತ್ತೇನೆ ಎಂದು ಹೇಳಿದರು.
ನಗರ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರು, ಆಶ್ರಯ ನಿವೇಶನ, ಗುಣಮಟ್ಟದ ರಸ್ತೆ, ಭ್ರಷ್ಟಾಚಾರರಹಿತ ಆಡಳಿತ, ಗ್ರಾಮೀಣ ಪ್ರದೇಶದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ, ಅರಣ್ಯಹಕ್ಕು ಮತ್ತು ಬಗರ್‌ಹುಕುಂ ಅಡಿ ಅರ್ಜಿ ಸಲ್ಲಿಸಿದವರಿಗೆ ಕಾಲಮಿತಿಯೊಳಗೆ ಹಕ್ಕುಪತ್ರ ಕೊಡಿಸುವುದು, ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಪರಿಸರ ಉಳಿಸಿಕೊಳ್ಳುವ ಮೂಲಕ ಅಭಿವೃದ್ದಿಪಡಿಸುವುದು, ಕ್ಷೇತ್ರ ವ್ಯಾಪ್ತಿಯ ಪ್ರವಾಸಿ ತಾಣಗಳ ಅಭಿವೃದ್ದಿ, ಸರ್ಕಾರದ ಯೋಜನೆ ತಳಮಟ್ಟದ ವ್ಯಕ್ತಿಗಳಿಗೂ ತಲು ಪಿಸುವುದು ಚುನಾವಣಾ ಪ್ರಣಾಳಿಕೆ ಯಾಗಿದೆ. ಜೊತೆಗೆ ಪಕ್ಷಾತೀತ ಮತ್ತು ಜತ್ಯಾತೀತ ಆಡಳಿತ ನೀಡು ವುದು ನನ್ನ ಪ್ರಮುಖ ಧ್ಯೇಯ ವಾಗಿದೆ. ಕ್ಷೇತ್ರದ ಮತದಾರರು ಈತನಕದ ನನ್ನ ಸಾರ್ವಜನಿಕರ ಭ್ರಷ್ಟಾಚಾರರಹಿತ ಸೇವೆಗೆ ಮನ್ನಣೆ ನೀಡಿ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಬಿಜೆಪಿಯಿಂದ ಸ್ಪರ್ಧೆ ಮಾಡಿ ರುವ ಹಾಲಪ್ಪ ಮತ್ತು ಕಾಂಗ್ರೇಸ್ ನಿಂದ ಸ್ಪರ್ಧೆ ಮಾಡಿರುವ ಗೋಪಾ ಲಕೃಷ್ಣ ಬೇಳೂರಿಗೆ ಸ್ವಪಕ್ಷದಲ್ಲೆ ವಿರೋಧವಿದೆ. ಸ್ವತಃ ಕಾಗೋಡು ತಿಮ್ಮಪ್ಪ ಅವರೇ ಬೇಳೂರಿಗೆ ಟಿಕೇಟ್ ಕೊಡಬೇಡಿ ಎಂದು ಬೆಂಗಳೂರಿಗೆ ನಿಯೋಗದ ಜೊತೆ ಹೋಗಿ ಒತ್ತಾಯಿಸಿದ್ದರು. ಆದರೆ ಅವರ ಮಾತಿಗೆ ಹೈಕಮಾಂಡ್ ಬೆಲೆ ಕೊಡದೆ ಬೇಳೂರಿಗೆ ಟಿಕೇಟ್ ನೀಡಿದೆ. ಬಿಜೆಪಿ ಅಭ್ಯರ್ಥಿ ಹರ ತಾಳು ಹಾಲಪ್ಪ ಅವರಿಗೆ ಟಿಕೇಟ್ ನೀಡಬೇಡಿ ಎಂದು ಸಂಘ ಪರಿ ವಾರದ ಪ್ರಮುಖರು, ಪಕ್ಷದ ಕೆಲವರು ಪ್ರಧಾನಿವರೆಗೂ ದೂರು ನೀಡಿದ್ದಾರೆ. ರಾಷ್ಟ್ರೀಯ ಪಕ್ಷಗ ಳಿಂದ ಸ್ಪರ್ಧೆ ಮಾಡಿರುವ ಇಬ್ಬರೂ ಅಭ್ಯರ್ಥಿಗಳು ದೌರ್ಜನ್ಯ ದಬ್ಬಾ ಳಿಕೆ ನಡೆಸಿದವರು. ಮತದಾರರು ಇದನ್ನು ಅರಿತುಕೊಂಡು ತಮ್ಮನ್ನು ಬೆಂಬಲಿಸಲು ಮನವಿ ಮಾಡಿ ದರು.
ಕಳೆದ ನಾಲ್ಕು ದಶಕಗಳಿಂದ ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರಹಿತವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ೧೫ ವರ್ಷ ಪತ್ರಕರ್ತನಾಗಿ ಅನೇಕ ಸುಧಾರಣೆಗೆ ಕಾರಣವಾಗಿದ್ದು, ನನ್ನ ಮೇಲೆ ಮಾರಣಾಂತಿಕ ಹಲ್ಲೆ ಸಹ ನಡೆದಿತ್ತು. ನಾಲ್ಕು ಅವಧಿಗೆ ಪುರಸಭೆ ಸದಸ್ಯನಾಗಿ, ನಾಲ್ಕು ವರ್ಷ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಮಲೆನಾಡು ರೈತ ಹೋರಾಟ ಸಮಿತಿ ಮೂಲಕ ರೈತರ ಧ್ವನಿಯಾಗಿ ಕೆಲಸ ಮಾಡು ತ್ತಿದ್ದೇನೆ. ಈ ಬಾರಿ ಚುನಾವಣೆ ಯಲ್ಲಿ ಪಕ್ಷ, ಜತಿ, ಹಣಬಲವನ್ನು ನೋಡದೆ ಮತದಾರರು ನನ್ನಂತಹ ಪ್ರಾಮಾಣಿಕನನ್ನು ಬೆಂಬಲಿಸು ತ್ತಾರೆ ಎಂದು ಹೇಳಿದರು.
ಗೋಷ್ಟಿಯಲ್ಲಿ ವಿಶ್ವನಾಥ ಗೌಡ ಅದರಂತೆ, ಎಲ್.ವಿ.ಸುಭಾಷ್, ಕೃಷ್ಣಮೂರ್ತಿ ಹೆಗ್ಗೋಡು, ದೇವಪ್ರಸಾದ್ ವಿಲ್ಫ್ರೆಡ್, ಗೋಪಾಲಕೃಷ್ಣ ಹಾಜರಿದ್ದರು.