ತಾಜಾ ಸುದ್ದಿ

ಯುಗಾದಿ ಬಂಪರ್: ಸ್ವಯಂ ಉದ್ಯೋಗಕ್ಕಾಗಿ ಬೈಕ್ ವಿತರಣೆ…

Share Below Link

ಅಥಣಿ: ಯುಗಾದಿ ಹಬ್ಬದ ನಿಮಿತ್ತವಾಗಿ ಸರ್ಕಾರ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಪರಿಶಿಷ್ಟ ಜತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ೨೦ ವಿದ್ಯಾರ್ಥಿಗಳಿಗೆ ಮೋಟರ ಬೈಕ್‌ಗಳನ್ನು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತ ನಾಡಿದ ಅವರು, ವಿದ್ಯಾವಂತ ನಿರುದ್ಯೋಗಳಿಗೋಸ್ಕರ ಸ್ವಯಂ ಉದ್ಯೋಗ ಸೃಷ್ಟಿಸಿ ಮೋಟಾರ್ ಬೈಕ್ ಮುಖಾಂತರ ಯಾರಿಗೆ ಅವಶ್ಯಕತೆ ಇದೆಯೋ ಅಂತಹ ಜನರು ಒಂದು ಫೋನ್ ಕಾಲ್ ಮುಖಾಂತರ ಔಷಧ, ಹೋಟೆಲ್ ತಿಂಡಿ, ಆಹಾರ ಸಾಮಗ್ರಿಗಳನ್ನು ಅವರ ಮನೆಗೆ ತಲುಪಿಸುವ ಮುಖಾಂತರ ಸ್ವಯಂ ಉದ್ಯೋಗದ ಜೊತೆಗೆ ಆದಾಯ ಮಾಡಿಕೊಳ್ಳ ಬಹುದು ಎಂದರು.
ಒಟ್ಟಾರೆ ತಾಲೂಕಿಗೆ ಅಂತಹ ೪೦ ಜನರನ್ನು ಆಯ್ಕೆ ಮಾಡಿ ಕೊಂಡು ಮೊದಲ ಹಂತದಲ್ಲಿ ೨೦ ಜನರಿಗೆ ಮಾತ್ರ ಬೈಕ ವಿತರಿಸಲಾಗುತ್ತಿದೆ, ಈ ಹೊಸ ಯೋಜನೆ ಸರ್ಕಾರ ಜರಿಗೆ ತಂದಿದೆ ಒಟ್ಟು ಅಥಣಿ ಕ್ಷೇತ್ರಕ್ಕೆ ಕನಿಷ್ಟಪಕ್ಷ ೫೦೦ ನಿರುದ್ಯೋಗಗಳಿಗೆ ಬೈಕ್ ಕೊಡುವ ಉದ್ದೇಶ ಹೊಂದಿದ್ದು, ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಿರುವೆ ಇದರ ಸದುಪಯೋಗ ಯುವಕರು ಮಾಡಿಕೊಳ್ಳ ಬೇಕೆಂದು ಕರೆ ನೀಡಿದರು.
ಸರಕಾರ ವಿಶೇಷ ಅನುದಾನ ದಡಿ ರಾಘವೇಂದ್ರ ಮಠದ ರಸ್ತೆಗೆ ಸುಮಾರು ಎರಡು ಕೋಟಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತು ಐವತ್ತು ಲಕ್ಷ ರೂ.ಗಳಲ್ಲಿ ವಿದ್ಯುತ್ ಕಂಬಗಳು ಲೈಟ್ ವ್ಯವಸ್ಥೆಗೆ ಸಚಿವ ಮಿತ್ರರಾದ ಎಮ್.ಟಿ.ಬಿ ನಾಗರಾಜ್ ಅವರ ಸಹಕಾರದಿಂದ ಸಾಧ್ಯವಾಗಿದೆ ಇದರಿಂದ ತಾಲೂಕಿನ ಜನತೆ ಅಷ್ಟೇ ಅಲ್ಲ ಅಕ್ಕ ಪಕ್ಕದ ತಾಲೂಕಿನ ಜನತೆಯು ಸಹ ಮಠಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಆರ್ ಎಸ್ ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ, ತಮ್ಮಣ್ಣ ಹುಲಕುಂದ, ಶಿವರುದ್ರ ಗೂಳಪ್ಪನವರ, ಸುಶೀಲ ಪತ್ತಾರ, ರಾಜು ಅಳಬಾಳ, ಅಮರ ದುರ್ಗಣ್ಣನವರ, ರಾಜು ಚೌಗಲಾ, ಶ್ರೀಶೈಲ ನಾಯಕ, ಸಂಗಮೇಶ ಪಲ್ಲಕ್ಕಿ, ಪ್ರದೀಪ ನಂದಗಾಂವ, ಲೋಕೇಶ್ ಪಾಟೀಲ್, ಆಶಿಫ ತಾಂಬೋಳಿ, ಅರುಣ ಭಾಸಿಂಗಿ, ರಾಜು ಬುಲಬುಲೆ, ಮಲ್ಲು ಹುzರ, ದತ್ತಾ ವಾಸ್ಟರ, ಆನಂದ ಮಾದಗುಡಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.