ಐದು ದಿನಗಳ ಕೆಲಸದ ವಾರ ಜಾರಿಗೆ ಒತ್ತಾಯಿಸಿ ಯುಎಫ್‌ಬಿಯುನಿಂದ ಪ್ರತಿಭಟನೆ…
ಶಿವಮೊಗ್ಗ : ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ೯ ಪ್ರಮುಖ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಯ ಒಕ್ಕೂಟ ಯುಎಫ್‌ಬಿಯು ನಿಂದ ೫ ದಿನಗಳ ಕೆಲಸದ ವಾರ ಜಾರಿಗೆ ಒತ್ತಾಯಿಸಿ ನಗರದ ಬಿ.ಹೆಚ್. ರಸ್ತೆಯ ಎಸ್‌ಬಿಐ ಕಛೇರಿಯಿಂದ ಸೀನಪ್ಪಶೆಟ್ಟಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಇಂದಿನಿಂದ ದೇಶಾದ್ಯಂತ ೧೦ ಲಕ್ಷಕ್ಕೂ ಹೆಚ್ಚು ಬ್ಯಾಂಕ್ ನೌಕರರು ತಮ್ಮ ಕೆಲಸವನ್ನು ಬಹಿಷ್ಕರಿಸಿ ತಮ್ಮ ನ್ಯಾಯಸಮ್ಮತ ಬೇಡಿಕೆಯಾದ ವಾರದಲ್ಲಿ ೫ ದಿನಗಳು ಮಾತ್ರ ಕೆಲಸದಲ್ಲಿ ತೊಡಗಿಸಿಕೊಂಡು ಉಳಿದ ೨ ದಿನಗಳ ರಜೆ ಜಾರಿ ಮಾಡಬೇಕು ಎಂದು ಮುಷ್ಕರದಲ್ಲಿ ಭಾಗವಹಿಸಿದ ಬ್ಯಾಂಕ್ ನೌಕರರು ಒತ್ತಾಯಿಸಿzರೆ.

ಸರ್ಕಾರದ ಬ್ಯಾಂಕಿಂಗ್ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಜಥಾದ ಮೂಲಕ ಸಾರ್ವಜನಿಕರಲ್ಲಿ ಮುಷ್ಕರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮಾತ ನಾಡಿದ ಸಂಘದ ಸಮನ್ವಯಕಾರ ನೆಲ್ಸನ್ ಅವರು ಬ್ಯಾಂಕ್ ನೌಕರರ ದೀರ್ಘಕಾಲದ ಪ್ರಮುಖ ಬೇಡಿಕೆಯಾದ ೫ ದಿನಗಳ ಕೆಲಸದ ವಾರ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಲಿಖಿತ ಒಪ್ಪಂದವಾಗಿದ್ದು, ಹಲವು ಸುತ್ತಿನ ಮಾತುಕಥೆಗಳು ನಡೆದಿದ್ದರೂ ಸಹ ಕೇಂದ್ರ ಸರ್ಕಾರದಿಂದ ಇನ್ನೂ ಅಂತಿಮ ಅನುಮೋದನೆ ದೊರೆತ್ತಿಲ್ಲ. ಈ ವಿಷಯವನ್ನು ಸೌಹಾರ್ಧಯುತವಾಗಿ ಬಗೆಹರಿಸುವ ಉzಶದಿಂದ ಯುಎಫ್‌ಬಿಯು ಹಲವಾರು ಭಾರಿ ರಾಜೀ ಸಂಧಾನ ಸಭೆಗಳಲ್ಲಿ ಭಾಗವಹಿಸಿ ಚರ್ಚೆ ನಡೆಸಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಲಭ್ಯ ವಾಗದ ಹಿನ್ನಲೆಯಲ್ಲಿ ಅನಿವಾರ್ಯ ವಾಗಿ ಈ ಮುಷ್ಕರ ನಡೆಸುತ್ತಿzವೆ ಎಂದರು.

ಪ್ರಸ್ತುತ ಬ್ಯಾಂಕ್ ಸಿಬ್ಬಂದಿಗಳು ಸಿಬ್ಬಂದಿ ಕೊರತೆ ನಡುವೆಯೂ ಬಹುತೇಕ ಎ ಕೆಲಸಗಳನ್ನು ನಿರ್ವಹಿಸುತ್ತಿzರೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣ ಕಟ್ಟಲು, ಹಿಂಪಡೆಯುವ ಸೌಲಭ್ಯ ಗಳನ್ನು ಎಟಿಎಂನಲ್ಲಿ ಕಲ್ಪಿಸಲಾಗಿದೆ. ಆನ್‌ಲೈನ್ ಬ್ಯಾಂಕಿಂಗ್ ಉಪಯೋಗಿಸಬಹುದಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ನೌಕರರು ಇನ್ಸುರೆನ್ಸ್, ಆರ್.ಬಿ.ಐ. ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವಾರಕ್ಕೆ ೫ದಿನ ಮಾತ್ರ ಕೆಲಸವಿದೆ. ಆದರೆ ಸರ್ಕಾರದ ಎ ಕಾರ್ಯಕ್ರಮಗಳನ್ನು ಜರಿ ಗೊಳಿಸುವ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ಮಾತ್ರ ವಾರಪೂರ್ತಿ ಕೆಲಸ. ಒತ್ತಡಕ್ಕೆ ಕಾರಣವಾಗುತ್ತಿದೆ. ಬ್ಯಾಂಕುಗಳು ೫ದಿನ ಕೆಲಸ ನಿರ್ವಹಿಸಿದರೆ, ಗ್ರಾಹಕರಿಗೂ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಗೂ ಕಾರಣ ವಾಗುತ್ತದೆ. ಕೇವಲ ನೌಕರರಿಗೆ ಮಾತ್ರವಲ್ಲ ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಬ್ಯಾಂಕ್ ನೌಕರರ ಈ ಬೇಡಿಕೆಯನ್ನು ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಪುನೀತ್‌ಕುಮಾರ್, ವಿಶ್ವನಾಥ್ ಕೆ.ಆರ್., ಹೊನ್ನಪ್ಪ, ಮಿಥುನ್ ಕುಮಾರ್, ಸಾಗರ್ ಜೋಶಿ, ಮಂಜುನಾಥ್ ಬಿ.ಎಂ., ಮುರಳೀಧರ್, ಸಂತೋಷ್ ಕುಮಾರ್ ಎಂ.ಎ., ವಲ್ಲಭ ಬಿ.ಎಸ್., ಶಶಿಧರ್, ಧೀರಜ್ ಸೇರಿದಂತೆ ವಿವಿಧ ಬ್ಯಾಂಕ್ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

