ಜಿಲ್ಲಾ ಸುದ್ದಿತಾಜಾ ಸುದ್ದಿ

ಅನ್ನದಾನೀಶ್ವರ ಮಠದಲ್ಲಿ ಗಣೇಶೋತ್ಸವ ನಿಮಿತ್ತ ಮಾಜಿ ಸೈನಿಕರಿಗೆ ಸನ್ಮಾನ

Share Below Link

ಕುಕನೂರ : ನಮಗಾಗಿ, ದೇಶದ ಒಳತಿಗಾಗಿ ಬದುಕುವರನ್ನ ಮತ್ತು ಹೋರಾಡುವವರನ್ನ ಸಮಾಜ ಸದಾಕಾಲ ಸ್ಮರಣೆ ಮಾಡ ಬೇಕು ವಿಶೇಷವಾಗಿ ಸೈನಿಕರನ್ನ ಗೌರವಿಸಬೇಕು ಎಂದು ಯುವ ಮುಖಂಡ ಚಂದ್ರಶೇಖರಯ್ಯ ಸರಗಣಾಚಾರ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಗಣೇಶ ಹಬ್ಬದ ನಿಮಿತ್ತ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸೈನಿಕರು ನಮ್ಮೆಲ್ಲರ ಆಸ್ತಿ ಅವರನ್ನ ಸದಕಾಲ ಗೌರವದಿಂದ ಕಾಣುತ್ತಾ, ಅವರ ಕಾಯಕವನ್ನ ಸ್ಮರಣೆ ಮಾಡುತ್ತಿರಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕರಾದ ಶಿವಾನಂದಪ್ಪ ಜೀವಣ್ಣನವರು ಶ್ರೀಮಠದ ಪೂಜ್ಯರು ಗಣೇಶ ಹಬ್ಬದ ನಿಮಿತ್ಯ ನಮ್ಮನ್ನ ಸನ್ಮಾನಿಸಿ ಗೌರವಿಸುತ್ತಿರು ವುದು ಅತ್ಯಂತ್ಯ ಆನಂದ ತಂದಿದೆ, ನಾವುಗಳು ಮಕ್ಕಳಲ್ಲಿ ಜತಿ ಧರ್ಮ ಅಭಿಮಾನಕ್ಕಿಂತ ದೇಶ ಅಭಿಮಾನ ಬಿತ್ತುವ ಕಾಯಕವಾಗಬೇಕು, ನಾಡು ನುಡಿಗೆ ನಮ್ಮದೇ ಸೇವೆಯನ್ನ ಎರು ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಶ್ರೀ ಮ ನಿ ಪ್ರ ಡಾ ಮಹಾದೇವ ಸ್ವಾಮಿಗಳು, ಮಲ್ಲಯ್ಯ ಮುಳಗುಂದಮಠ, ಪ್ರಭು ಶಿವಶಿಂಪರ, ಶ್ರೀಶೈಲ್ ಎಚ್, ಸಂಗಮೆಶ ಕಲ್ಮಠ, ಮೇಘ ರಾಜ ಜಿಡಗಿ, ಕಾವ್ಯ ಗುರುಮಠ, ಮಾಜಿ ಸೈನಿಕರಾದ ಮಲ್ಲಪ ಕೆರಳ್ಳಿ, ನೂರೂದ್ದೀನ ಚಾಂದಬಾವಿ, ಬಸಯ್ಯ ಸರಗಣಾಚಾರ, ಶರಣಯ್ಯ ಒಂಟಿಗೋಡಿ, ರಾಚಯ್ಯ ಸರಗಣಚಾರ, ಹೇಮಂ ತಪ್ಪ ಆರೆರ, ಲಕ್ಷ್ಮಣ ಎಮ್, ಶಿವಪ್ಪ, ಬಸಯ್ಯ ಹುಡೇದಗಡ್ಡಿ ಮತ್ತು ಇತರರು ಇದ್ದರು.