ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆಂದು ಅವರನ್ನು ಅಸಡ್ಡೆ ಮಾಡದೆ ಗೌರವದಿಂದ ಕಾಣಿರಿ: ಅನುಸುಧಾ…

Share Below Link

ಭದ್ರಾವತಿ: ಬಸ್ಸಿನಲ್ಲಿ ಉಚಿತ ವಾಗಿ ಪ್ರಯಾಣಿಸುತ್ತಾರೆಂಬ ಕಾರಣಕ್ಕೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮಹಿಳೆಯರ ಬಗ್ಗೆ ಅಸಡ್ಡೆವಹಿಸದೆ ಪ್ರೀತಿ ವಿಶ್ವಾಸದಿಂದ ಕಾಣುವಂತೆ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಸಲಹೆ ನೀಡಿದರು.
ನಗರದ ಕೆಎಸ್‌ಆರ್‌ಟಿಸಿ ಮುಖ್ಯಬಸ್ ನಿಲ್ದಾಣದಲ್ಲಿ ಭಾನುವಾರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಂದಾದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಯೋಜನೆ ಶಕ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಅವರು ಪ್ರಯಾಣಿಸುವ ಹಣವನ್ನು ಸರ್ಕಾರ ಇಲಾಖೆಗೆ ತುಂಬಿಕೊಡುತ್ತದೆ. ಆಗಾಗಿ ಪ್ರಯಾಣಿಸುವ ಮಹಿಳೆ ಯರನ್ನು ಬೇಕಾಬಿಟ್ಟಿ ನಡೆಸಿಕೊಳ್ಳ ಬೇಡಿ ಗೌರವದಿಂದ ಕಾಣಿರಿ ಎಂದರು.
ನಗರಸಭಾ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ಸರ್ಕಾರದ ಉಚಿತ ಯೋಜನೆ ಯಿಂದಾಗಿ ರಾಜ್ಯದ ೬.೫ ಕೋಟಿ ಜನರಿಗೆ ಅನುಕೂಲವಾಗಲಿದೆ. ಕೇವಲ ಅಧಿಕಾರಕ್ಕೆ ಬಂದ ೨೦ ದಿನಗಳಲ್ಲಿಯೇ ೫ ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಹಂತವಾಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದೆ. ಮುಂದಿನ ೪ ತಿಂಗಳ ಅವಽಯಲ್ಲಿ ಉಳಿದ ೪ ಯೋಜನೆಗಳನ್ನು ಜರಿಗೆ ತರಲಿದೆ. ೧೩ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ನವರಿಗೆ ಎಲ್ಲವೂ ತಿಳಿದಿದೆ. ಟೀಕೆ ಟಿಪ್ಪಣಿ ಮಾಡುವವರಿಗೆ ಶಕ್ತಿ ಯೋಜನೆ ಜರಿ ಮೂಲಕ ಉತ್ತರ ನೀಡಿzರೆ ಎಂದರು.


ಇಲ್ಲಿನ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ದಿ ವಿಚಾರವಾಗಿ ಸಾಕಷ್ಟು ಶ್ರಮಿಸುತ್ತಿರುವ ಕಾರಣ ಶಾಸಕರು ಬೆಂಗಳೂರಿನಿಂದ ಕ್ಷೇತ್ರದ ಕಡೆಗೆ ಬರಲಾಗಿಲ್ಲ. ಶೀಘ್ರದಲ್ಲಿಯೆ ಉತ್ತಮ ಸಂದೇಶದೊಂದಿಗೆ ಬರುತ್ತಾರೆ. ಚುನಾವಣಾ ಸಂದರ್ಭ ದಲ್ಲಿ ಸುಳ್ಳು ಭರವಸೆ ನೀಡುವವರೆ ಜಸ್ತಿ ಆದರೆ ಸಿದ್ದರಾಮಯ್ಯನವರು ನುಡಿದಂತೆ ನಡೆದುಕೊಂಡಿzರೆ. ರಾಜ್ಯದ ಎ ಮಹಿಳೆಯರು ಯೋಜನೆಯ ಲಾಭ ಪಡೆದುಕೊಳ್ಳಿ ಎಂದರು.
ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕದ ಸಹಾಯಕ ಆಡಳಿತಾಧಿಕಾರಿ ಅಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಶಕ್ತಿ ಯೋಜನೆಯಿಂದ ಎ ಸಮುಧಾಯದ ಮಹಿಳೆ ಯರಿಗೂ ಇಲಾಖೆಯಿಂದ ಅನು ಕೂಲವಾಗಲಿದೆ. ತಾಲೂಕಿನಲ್ಲಿ ೧೪೭ ಗ್ರಾಮಗಳಿದ್ದು ೧೨೭ ಗ್ರಾಮ ಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾ ಗಿದೆ,
ಶಕ್ತಿ ಯೋಜನೆಯಲ್ಲಿ ನಗರಸಾರಿಗೆ, ಸಾಮಾನ್ಯಸಾರಿಗೆ ಹಾಗೂ ವೇಗದೂತ ಬಸ್‌ಗಳಲ್ಲಿ ಸಂಚರಿಸಲು ಅವಕಾಶವಿದೆ ಎಂದು ವಿವರಿಸಿದರು.
ಘಟಕಾಧಿಕಾರಿ ಅಂಬಿಕಾ, ಉಪ ತಹಸೀಲ್ದಾರ್ ಮಂಜನಾಯ್ಕ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಕಾಂಗ್ರೆಸ್ ಪಕ್ಷದ ಮುಖಂಡರು ಗಳಾದ ಅಮೀರ್‌ಜನ್, ಎಸ್. ಮಣಿಶೇಖರ್, ವೈ.ಎಚ್. ನಾಗರಾಜ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳಬೈರಪ್ಪ, ಸದಸ್ಯರು ಗಳಾದ ಚನ್ನಪ್ಪ, ಗೀತಾ ರಾಜ್ ಕುಮಾರ್, ಲತಾ ಚಂದ್ರಶೇಖರ್, ಶೃತಿ ವಸಂತಕುಮಾರ್, ಸೇರಿದಂತೆ ಹಲವರಿದ್ದರು.