ನಾಳೆ ಪರಿಸರಾ ದಸರಾ…

ಶಿವಮೊಗ್ಗ : ಮಹಾನಗರ ಪಾಲಿಕೆ ವತಿಯಿಂದ ಸೆ.೨೪ ಬುಧವಾರದಂದು ಪರಿಸರ ದಸರಾವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲಿಕೆಯೊಂದಿಗೆ ಶಿವಮೊಗ್ಗ ನಗರದ ಪರಿಸರಾಸಕ್ತ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿzರೆ.

ಸೈಕಲ್ ಜಥಾ ಹಾಗೂ ಹಸಿರೀಕಣ ಕಾರ್ಯದ ಮೂಲಕ ಪರಿಸರ ದಸರಾ-೨೦೨೫ನ್ನು ಮಾದರಿ ಹಾಗೂ ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವ ಪಾಲಿಕೆಯ ನಿರ್ಧಾರವನ್ನು ನಗರದ ವಿವಿಧ ಸಂಘ ಸಂಸ್ಥೆಗಳು ಸ್ವಾಗತಿಸಿವೆ. ಬುಧವಾರ ಬೆಳಿಗ್ಗೆ ೦೭.೩೦ಕ್ಕೆ ಮಹಾನಗರಪಾಲಿಕೆ ಆವರಣದಲ್ಲಿ ಬೃಹತ್ ಸೈಕಲ್ ಜಥಾಕ್ಕೆ ಚಾಲನೆ ದೊರೆಯಲಿದ್ದು, ಸೈಕಲ್ ಜಥಾವು ಮಹಾನಗರ ಪಾಲಿಕೆ ಆವರಣದಿಂದ ಸೀನಪ್ಪ ಶೆಟ್ಟಿ ವೃತ್ತ, ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ಪ್ರವಾಸಿ ಮಂದಿರ ರಸ್ತೆ, ಆಯನೂರು ಗೇಟ್, ದ್ರೌಪದಮ್ಮ ವೃತ್ತ, ರಾಮಕೃಷ್ಣ ಶಾಲೆ ಮುಖಾಂತರ ಮಹಿಳಾ ಪಾಲಿಟೆಕ್ನಿಕ್ ಹಿಂಭಾಗದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಬಳಿ ಸೇರುವುದು.
ನಂತರ ಈ ಸ್ಥಳದಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಪರಿಸರ ತಜ್ಞ ಡಾ. ಶ್ರೀಪತಿ ಎಲ್.ಕೆ. ರವರು ಚಾಲನೆ ನೀಡಲಿzರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಿ ಅಧಿಕಾರಿ ಶಿಲ್ಪಾ ಕೆ.ರವರು, ಪಾಲಿಕೆ ಅಧಿಕಾರಿಗಳು , ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.
ನಗರದ ವಿವಿಧ ಸಂಘ ಸಂಸ್ಥೆಗಳು, ಪರಿಸರಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಪರ್ಯಾವರಣ ಟ್ರಸ್ಟ್ (ರಿ), ಶಿವಮೊಗ್ಗ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರಿಸರಾಸಕ್ತ ತಂಡಗಳು ಸಾರ್ವಜನಿಕರಲ್ಲಿ ವಿನಂತಿ ಮಾಡಿರುತ್ತಾರೆ.


