ಸಣ್ಣ ಹತಾಶೆಯನ್ನು ಸಹಿಸದ ಇಂದಿನ ಮಕ್ಕಳು; ಎತ್ತ ಸಾಗುತ್ತಿದೆ ಮಕ್ಕಳ ಮನಸ್ಥಿತಿ..!
ಲೇಖನ: ಅನಿತಸೂರ್ಯ, ಶಿಕ್ಷಕಿ, ಶಿವಮೊಗ್ಗ
ಇಂದಿನ ಮಕ್ಕಳೇಕೆ ಸಣ್ಣ ಸೋಲನ್ನು ಸಹಿಸಿಕೊಳ್ಳುತ್ತಿಲ್ಲ. ತಂದೆ-ತಾಯಿಗಳು ನಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು ಎಂದು ಕೇಳಿದ್ದನ್ನೆ ಕೊಡಿಸಿ ಆದಷ್ಟು ಮಕ್ಕಳನ್ನು ಖುಷಿ ಇರಿಸುತ್ತಿzರೆ.
ಮತ್ತೆ ಇಂದಿನ ಶಿಕ್ಷಣ ಪದ್ದತಿಯು ಸಹ ಶಿಶುಸ್ನೇಹಿ ಶಿಕ್ಷಣವಾಗಿದೆ. ಆಡುತ್ತಾ ನಲಿಯುತ್ತಾ ಪ್ರಯೋಗಿಸಿ… ಚರ್ಚಿಸಿ ಕಲಿಯುವ ವಾತಾವರಣವಿದೆ. ಪೋಷಕರು ಸಹ ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಬೇಕು ಎನ್ನುವ ಸಲುವಾಗಿ ಎಷ್ಟಾದರೂ ಹಣ ತುಂಬಿ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡುತ್ತಿzರೆ.
ಹಳ್ಳಿಯ ಜನರು ಸಹ ಇಂದು ನನ್ನ ಮಗ-ಮಗಳು ಖಾಸಗಿ ಶಾಲೆಗೆ ಹಳದಿ ಬಸ್ ಹತ್ತಿ ಹೋಗಲಿ. ಚೆನ್ನಾಗಿ ಕಲಿಯಲಿ. ಉತ್ತಮ ಭವಿಷ್ಯ ರೂಪಿತವಾಗಲಿ ಎನ್ನುವ ನಿಟ್ಟಿನಲ್ಲಿ ತಮ್ಮ ಶ್ರಮವನ್ನು ಬಹುತೇಕ ಪೋಷಕರು ವಹಿಸುತ್ತಿzರೆ.
ಹಿಂದಿನ ಕಾಲದಂತೆ ವರ್ಷಕ್ಕೊಂದೆ ಜೊತೆ ಬಟ್ಟೆ… ಹಬ್ಬದಲ್ಲಿ ಮಾತ್ರ ಸಿಹಿ ತಿನಿಸು.. ಎನ್ನುವ ಸ್ಥಿತಿಯೇನು ಇಲ್ಲ ಈಗ. ಕೇಳಿದ್ದೆಲ್ಲವನ್ನೂ ಕೊಡಿಸುವ, ಒಂದೇಟು ತಮ್ಮ ಮಕ್ಕಳಿಗೆ ಯಾರು ಹೊಡೆಯ ಬಾರದು ಎಂದು ಕಣ್ಣಲ್ಲಿ ಕಣ್ಣಿಟ್ಟು ಸಾಕುವ ತಂದೆ ತಾಯಿಗಳಿಗೆ ಇಂದಿನ ಕೆಲವು ಮಕ್ಕಳೇಕೆ ಹತಾಶರಾಗಿ ಸಣ್ಣ ಸೋಲನ್ನು ಸಹಿಸದೇ ಆತ್ಮಹತ್ಯೆಯಂಥ ದಾರಿ ಹಿಡಿಯುತ್ತಿzರೆ. ಹೆತ್ತ ಕರುಳು ಎಷ್ಟು ನೊಂದುಕೊಳ್ಳುವುದು ಎನ್ನುವ ಅರಿವೆ ಇಲ್ಲದೆ ಆಗಿರುವುದು. ಇಂದಿನ ಪೋಷಕರು ನೀಡಿರುವ ಸೌಲಭ್ಯಗಳೆ ಹೆಚ್ಚಾಯಿತೇ? ಪೋಷಕರz ಸೋಲೇ..? ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.
ನಾಲ್ಕು ತಿಂಗಳ ಹಿಂದೆ ನಾನು ಚಿಪ್ಸ್ ಕದ್ದಿಲಮ್ಮಾ ಎಂದು ಪಶ್ಚಿಮ ಬಂಗಾಳದ ಮೇದಿನಿಪುರದ ಬಾಲಕ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ ಘಟನೆ ಮರೆಯುವ ಮುನ್ನವೇ ಬೆಂಗಳೂರಿನ ಹದಿಮೂರು ವರ್ಷದ ಬಾಲಕ ಗಾಂಧಾರ್ ಸಾವಿಗೆ ಶರಣಾಗಿದ್ದಾನೆ. ಈಗ ಸತ್ತು ಸ್ವರ್ಗದಲ್ಲಿzನೆ ಎಂದು ಬರೆಯುತ್ತಾನೆಂದರೆ ಆ ಬಾಲಕನಿಗೆ ಇಂಥ ವಿಚಾರ ಈ ವಯಸ್ಸಿಗೆ ತಿಳಿದುzದರೂ ಹೇಗೆ?.
ನ್ಯೂಸ್ ನೋಡಿದ ಪತ್ರಿಕೆ ಓದಿದ ನನಗೆ ಕಣ್ಣೀರು ತಡೆಯಲಾಗಲಿಲ್ಲ. ನನಗೂ ಒಬ್ಬ ಮಗನಿzನೆ. ಹೆತ್ತ ಕರುಳು ಈ ನೋವ ಸಹಿಸುವುದಾದರೂ ಹೇಗೆ..? ಪುತ್ರ ವಿಯೋಗಂ ನಿರಂತರ ಶೋಕಂ. ದುಃಖ ನೋವು ಆರುವುದೇ. ಮರೆಯಲಾದೀತೆ…? ಸಾಧ್ಯವಿಲ್ಲ. ಮಗುವ ಕಳೆದುಕೊಂಡ ತಂದೆ ತಾಯಿಗಳಿಗೆ ಭಗವಂತ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಈ ರೀತಿಯ ನೂರಾರು ಘಟನೆಗಳು ಪೋಷಕರ ಮನಕಲಕುತ್ತದೆ. ಇಂಥ ಹೃದಯ ವಿದ್ರಾವಕ ಘಟನೆಗಳು ನಮ್ಮನ್ನು ಸ್ತಬ್ದರನ್ನಾಗಿಸುತ್ತದೆ. ಏನೋ ಆಗಿ ಬಿಡುತ್ತದೆನೊ ಎಂಬ ಭಯ ಆವರಿಸಿ .. ನಮ್ಮ ಮಕ್ಕಳನ್ನು ಚಾಚಿ ಎದೆಗೆ ಅವಚ್ಚಿಕೊಳ್ಳುತ್ತೇವೆ.
ಇಂದಿನ ಮಕ್ಕಳಿಗೆ ಮೊಬೈಲ್ ಟಿವಿ ಸಾಮಾಜಿಕ ಜಲತಾಣಗಳು… ಈ ರೀತಿಯ ಆತ್ಮಹತ್ಯೆಯ ಸುದ್ದಿಗಳು ಬಹುಬೇಗ ನೋಡಲು ಸಿಗುತ್ತಿವೆ. ಆತ್ಮಹತ್ಯೆ ಎಂದರೇನು ಎಂದು ಪಿಯುಸಿಗೆ ಬಂದರೂ ಅರಿವಿಗೆ ಬರದ ವಿಷಯವಾಗಿತ್ತು. ಆದರೆ ಮೊಬೈಲ್, ನ್ಯೂಸ್ ಚಾನೆಲ್‌ಗಳು ಎಲ್ಲವನ್ನು ಬಹುಬೇಗ ಬಿತ್ತರಿಸುತ್ತಿವೆ. ಹಾಗಾಗಿ ಮಕ್ಕಳು ಸಣ್ಣ ಸೋಲನ್ನು ಸಹಿಸಲಾಗದೇ ಈ ರೀತಿಯ ಕೃತ್ಯ ಮಾಡಿಕೊಳ್ಳುತ್ತಿzರೆ.
ಮಕ್ಕಳು ನಾಳೆಯ ಭವಿಷ್ಯಗಳು, ಹೀಗೆ ತಾವೇ ತಮ್ಮ ಭವಿಷ್ಯವನ್ನು ಮುರುಟಿಸಿಕೊಂಡರೆ ಹೇಗೆ..? ಹೆತ್ತವರಿಗೆ ಬಹಳ ದುಃಖ ವಾಗುತ್ತದೆ. ಮಕ್ಕಳಾ.. ದಯಮಾಡಿ ಈ ರೀತಿಯ ನಿರ್ಧಾರಗಳಿಗೆ ಬರಬೇಡಿ. ಕೇಳಿದ್ದನ್ನು ಕೊಡಿಸಿ… ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ತಂದೆ ತಾಯಿಯನ್ನು ಬಿಟ್ಟು ಹೋಗಲು ಹೇಗಾದರೂ ಮನಸ್ಸು ಬರುತ್ತದೆ.. ಕಂದಮ್ಮಾಗಳಾ…?!
ಶಾಲೆಗಳಲ್ಲಿ ಶಿಕ್ಷಣದ ಜೊತೆ ಆತ್ಮಸ್ಥೈರ್ಯ, ಧೈರ್ಯ ಬೆಳೆಸಬೇಕು. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕವೇ ಬಹುಮುಖ್ಯವಾಗಿದೆ. ಜೀವನ ಮಲ್ಯ ನೀಡುವ ಶಿಕ್ಷಣ ನೀಡಬೇಕು.ಗಾಂಧೀಜಿಯವರ ಜೀವನ ಶಿಕ್ಷಣ ಮೂಲ ಶಿಕ್ಷಣದ ಪರಿಕಲ್ಪನೆ ಪುನರ್ ನಿರ್ಮಾಣವಾಗಬೇಕಿದೆ. ಮಕ್ಕಳನ್ನು ಅತಿ ಮುದ್ದಿನಿಂದ ಸಾಕುವುದು.. ಅತೀ ಶಿಸ್ತು ಸಹ ಮಾಡಬಾರದು. ಇಂದು ಶಿಕ್ಷಾರಹಿತ ಕಲಿಕೆಯೇ ಆಗುತ್ತಿದೆ. ಆದರೂ ಮಕ್ಕಳು ಸಣ್ಣ ಹತಾಶೆ ಸೋಲನ್ನು ಸಹಿಸಿಕೊಳ್ಳುತ್ತಿಲ್ಲದ ಮನಸ್ಥಿತಿಗೆ ತಲುಪುತ್ತಿzರೆ.
ಮಕ್ಕಳ ವಿದ್ಯಾಭ್ಯಾಸ ಭವಿಷ್ಯದ ಜೊತೆಗೆ ಮಕ್ಕಳಲ್ಲಿ ಧೈರ್ಯ ಮನೋಬಲ ಆತ್ಮವಿಶ್ವಾಸ ತುಂಬುವುದು ಪೋಷಕರ ಸಮಾಜದ ಶಿಕ್ಷಕರ ಕರ್ತವ್ಯವೂ ಆಗಿದೆ. ಜೀವನ ಕಟ್ಟಿಕೊಳ್ಳುವ ಶಿಕ್ಷಣವು ಮುಖ್ಯ ಹೊರತು ಬರೀ ಅಂಕಗಳು ಉತ್ತಮ ಜೀವನವನ್ನು ನಿರ್ಮಿಸದು. ಇಂದಿನ ಮಕ್ಕಳನ್ನು ಅವರ ಭವಿಷ್ಯವನ್ನು ಉಳಿಸುವುದು ಪೋಷಕರ ಶಿಕ್ಷಕರ ಈ ಸಮಾಜದ ಕರ್ತವ್ಯವಾಗಿದೆ.
