ಇಂದಿನ ಮಕ್ಕಳು ನಾಳಿನ ಪ್ರಜೆಗಳಷ್ಟೇ ಅಲ್ಲ, ಪ್ರಭುಗಳು ಹೌದು:ಮಾಯಣ್ಣ ಗೌಡ
ಶಿವಮೊಗ್ಗ : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದಷ್ಟೇ ಮಾತಲ್ಲ ನಾಳಿನ ನಮ್ಮ ಪ್ರಭುಗಳು ಆಗುತ್ತಾರೆ. ಹಾಗಾಗಿ ಈ ಮಕ್ಕಳ ನ್ನು ನಾನು ಆತ್ಮೀಯವಾಗಿ ಗೆಳೆಯ ರು ಎಂದು ಪ್ರೀತಿಯಿಂದ ಸಂಬೋ ಧಿಸುತ್ತೇನೆ ಎಂಬುದಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.
ಅವರು ಶಿವಮೊಗ್ಗದ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನ ದಲ್ಲಿ ಆಯೋಜಿಸಸಲಾಗಿದ್ದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗ ರದ ಶ್ರೀ ಆದಿಚುಂಚನಗಿರಿ ಸಂ ಯುಕ್ತ ಪ್ರೌಢಶಾಲೆ, ಬಿಜಿಎಸ್ ವಸತಿಯುತ ಪ್ರೌಢಶಾಲೆ, ಶ್ರೀ ಆದಿ ಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ವಿದ್ಯಾರ್ಥಿ ಸಂಘ ಹಾಗೂ ಭಾರ ತ್ ಸ್ಕೌಟ್ ಮತ್ತು ಗೈಡ್ಸ್ ಉದ್ಘಾ ಟನೆ ನೆರವೇರಿಸಿ ಮಾತನಾಡಿದ ಅವರು ದೇಶದ ಸಂವಿಧಾನ ೩ ವಿಭಾಗಗಳನ್ನು ಹೊಂದಿದೆ.ನಮ್ಮ ನಡುವಿನ ಶಾಸನಗಳನ್ನು ಹೊರ ತರುವ ಶಾಸಕಾಂಗದ ಕೆಲಸವನ್ನು ಕಾರ್‍ಯಾಂಗ ಅಧಿಕಾರಿ ವಲಯವನ್ನು ಬಳಸಿಕೊಂಡು ಜರಿಗೆ ತರು ತ್ತದೆ.ಈ ಎರಡು ಅಂಗಗಳು ತಪ್ಪು ಮಾಡಿದಾಗ ನ್ಯಾಯಾಂಗ ಅವುಗ ಳನ್ನು ತಿದ್ದಿ ಸರಿ ಮಾಡುವ ಕೆಲಸ ಮಾಡುತ್ತದೆ.ಇಂತಹ ವ್ಯವಸ್ಥೆ ನಮ್ಮ ಎ ಕಡೆ ಇರುವುದರಿಂದ ಅತ್ಯಂ ತ ವ್ಯವಸ್ಥಿತವಾದ ಸರ್ಕಾರ ನಡೆ ಯಲು ಸಾಧ್ಯವಾಗುತ್ತದೆ. ಸಾರ್ವ ಜನಿಕರು ಸಂತಸದಿಂದ ಇರಲು ಸಾಧ್ಯ ಎಂದು ಅವರು ಹೇಳಿದರು. ಶಿವಮೊಗ್ಗ ನಗರದ ಹೋಟೆಲ್ ಒಂದರಲ್ಲಿ ಅನಗತ್ಯವಾಗಿ ರಸ್ತೆಗೆ ಕಸ ಹಾಕುತ್ತಿದ್ದ ವಿಷಯದ ಬಗ್ಗೆ ವಿವರಣೆ ನೀಡಿದ ಮಾಯಣ್ಣಗೌಡ ಅವರು ಎಷ್ಟು ಸಾರಿ ಹೇಳಿದರು ಕೇಳದಿzಗ ಪಾಲಿಕೆ ಆಯುಕ್ತನಾಗಿ ನನ್ನ ಕರ್ತವ್ಯ ಅನುಸಾರ ೨೫,೦೦೦ ದಂಡ ಹಾಕಿದ್ದ ಘಟನೆಯ ಬಗ್ಗೆ ಕಾರ್ಯಾಂಗದ ಸ್ವರೂಪ ಹಾಗೂ ನಮ್ಮ ನಡುವಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಧಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಆದಿಚುಂ ಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನ ನಾಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿ ಸಂಘ ಎಂಬುದು ಕೇವಲ ಒಂದು ಗುಂಪಲ್ಲ ನಿಮಗೆ ಬದುಕುವ ಹಾಗೂ ಹೊಸತನದ ಜವಾಬ್ದಾರಿಗ ಳನ್ನು ಹೊತ್ತುಕೊಳ್ಳುವ ಶಕ್ತಿಯನ್ನು ನೀಡುವಂತಹ ವೇದಿಕೆ ಇದಾಗಿದೆ. ಒಂದು ಸಲ ವೇದಿಕೆ ಮೇಲೆ ಧೈರ್ಯದಿಂದ ಮಾತನಾಡುವು ದನ್ನು ಕಲಿತರೆ ನಂತರ ನಿಮ್ಮ ವಾದವನ್ನು ನೀವು ಸ್ಪಷ್ಟವಾಗಿ ಎಂತವರ ಮುಂದೆಯಾದರು ಮಂಡಿಸುವ ಸಾಮರ್ಥ್ಯ ಬರುತ್ತದೆ ಎಂದರು.ಒಬ್ಬರಿಂದ ಒಬ್ಬರಿಗೆ ಜವಾಬ್ದಾರಿ ಹಂಚಿಕೆಯಾಗಿರುತ್ತದೆ ಎಂಬ ಬಗ್ಗೆ ವಿವರಣೆ ನೀಡಿದ ಶಿಕ್ಷಣ ಇಲಾಖೆಯ ವ್ಯವಸ್ಥೆಯ ಬಗ್ಗೆ ತಿಳಿ ಹೇಳಿದ ಶ್ರೀಗಳು ದೇಶದ ಆಡಳಿತ ವ್ಯವಸ್ಥೆ ಇರುವುದು ಸಂವಿಧಾನಬದ್ಧ ವ್ಯವಸ್ಥೆಯಾಗಿದೆ ಅದಕ್ಕೆ ಪೂರಕವಾದ ಇಂತಹ ಸಂಘಗಳು ಮಕ್ಕಳನ್ನು ಬೆಳೆಸುವಲ್ಲಿ ಬಹು ಮುಖ್ಯ ವೇದಿಕೆಯಾಗಿ ರುತ್ತದೆ ಎಂದರು.
ಹೆಚ್ಚುವರಿ ಜಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮ ರಡ್ಡಿ ಅವರು ಮಾತನಾಡಿ, ಬೋಧನೆ ವಿದ್ಯಾರ್ಥಿಯ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯ ನಡುವೆ ನಮ್ಮ ಸಾಮೂ ಹಿಕ ಪರಿಕಲ್ಪನೆ ಹಾಗೂ ಸಂಘಟ ನಾತ್ಮಕ ಶಕ್ತಿಯನ್ನು ಬೆಳೆಸುವ ಇಂತಹ ವಿದ್ಯಾರ್ಥಿ ಸಂಘಗಳು, ಮಕ್ಕಳಲ್ಲಿ ಸೂಕ್ತ ಅಡಿಪಾಯವನ್ನು ಹಾಕಿಕೊಡುತ್ತವೆ. ಮಕ್ಕಳು ಇಂತಹ ವಯಸ್ಸಿನಲ್ಲಿ ಕಲಿಕೆಗಷ್ಟೇ ಹೆಚ್ಚಿನ ಆಧ್ಯತೆ ನೀಡಿ.ತಾವು ತಲುಪ ಬಹು ದಾದ ನಿಖರ ಗುರಿಗಳನ್ನು ಹೊಂದಿ ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ, ಅಂದುಕೊಂಡಿರುವ ಬದುಕಿನ ಗುರಿಯನ್ನು ತಲುಪು ವಂತೆ ಕರೆ ನೀಡಿದರು.
ಶಿವಮೊಗ್ಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಗಳಾದ ರಾಜೇಶ್ ಎ.ವಿ.ರವರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ನಿರ್ದೇಶಕರಾದ ಸತೀಶ್. ಡಿ.ವಿ ಅವರು, ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶು ಪಾಲರಾದ ಹೇಮಾ. ಎಸ್. ಆರ್. ರವರು, ಬಿಜಿಎಸ್ ವಸತಿ ಶಾಲೆಯ ವ್ಯವಸ್ಥಾಪಕರಾದ ಅಮೀಶ್. ಹೆಚ್. ಕೆ ರವರು, ಹಾಗೂ ಬೋ ಧಕ, ಬೋಧಕೇತರ ವರ್ಗದವ ರು, ವಿದ್ಯಾರ್ಥಿಗಳು ಇದ್ದರು.