ಜೀವನ ಸಾರ್ಥಕವಾಗಲು ಸದ್ಗುರುಗಳ ಆಶೀರ್ವಾದವಿರಬೇಕು…
ಭದ್ರಾವತಿ : ಮನುಷ್ಯನ ಜೀವನ ಸಾರ್ಥಕ ಆಗಬೇಕು ಎಂದಾದರೆ ಸದ್ಗುರುಗಳ ಆಶೀರ್ವಾದ ಯಾವಾಗಲೂ ಇರಬೇಕು. ಅಂತಹ ಗುರುಗಳನ್ನು ಸದಾ ಆರಾಧಿಸೋಣ, ಅವರು ನೀಡಿದ ಮಾರ್ಗದರ್ಶನದಲ್ಲಿ ಪಡೆಯೋಣಾ ಎಂದು ಶ್ರೀ ಶಾಂಕರ ತತ್ವ ಪ್ರಸಾರ ಆಭಿಯಾನಮ್‌ನ ಸಂಚಾಲಕರು ಹಾಗು ಜನ್ನಾಪುರ ಶ್ರೀ ಗಣಪತಿ ದೇವಸ್ಥಾನದ ಪ್ರಧಾನ ಆರ್ಚಕರಾದ ವೇ.ಬ್ರ.ಕೃಷ್ಣಮೂರ್ತಿ ಸೋಮಯಾಜಿಗಳು ತಿಳಿಸಿದರು.
ಜನ್ನಾಪುರದ ಶ್ರೀ ಗಣಪತಿ ಸಮುದಾಯ ಭವನದಲ್ಲಿ ಗುರು ಪೂರ್ಣೀಮೆ ನಿಮಿತ್ತ ಏರ್ಪಡಿಸಿದ್ದ ಗುರು ವಂದನಾ ವ್ಯಾಸ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.
ಉಪಾಧ್ಯಾಯರು ಎಂದರೆ ತಾವು ಕಲಿತ ಶಿಕ್ಷಣವನ್ನು ವಿಧ್ಯಾರ್ಥಿ ಗಳಿಗೆ ಭೋಧಿಸುವವರು. ಆದರೆ ಗುರುಗಳು ತಾವು ಗಳಿಸಿದ eನ ವನ್ನು ಹಂಚಿ ಜೀವನದ ಮಾರ್ಗ ದರ್ಶನವನ್ನು ತೋರಿಸುವವರು. ಅಂತಹ ಗುರುವರ್ಯರನ್ನು ಇಂತಹ ಸಂಧರ್ಭದಲ್ಲಿ ಸ್ಮರಿಸಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್ ವಿಶ್ವೇಶ್ವರಯ್ಯ ಪ್ರಖಂಡದ ಅಧ್ಯಕ್ಷ ಸತೀಶ್‌ಚಂದ್ರ ಅವರು ಮಾತನಾಡಿ ಗುರು ಶಿಷ್ಯರ ಸಂಬಂಧ ಎಂದರೆ ಕೇವಲ ಸಂಭಂಧವಲ್ಲ. ಅದು ಒಂದು ರೀತಿಯಲ್ಲಿ ಅವಿನಾವಭಾವ ಸಂಭಂಧ. ಗುರು ಎಂಬ ಪದಕ್ಕೆ ಎಲ್ಲೂ ಸಮಾನರ್ಥಕವಾದ ಇನ್ನೊಂದು ಪದ ಇಲ್ಲ. ಆದರೆ ಸಂಸ್ಕೃತದಲ್ಲಿ ವಿಶಿಷ್ಟ ಅರ್ಥದ ಪದ ಇದೆ. ಅಷ್ಟರ ಮಟ್ಟಿಗೆ ಗುರು ದೊಡ್ಡ ವ್ಯಕ್ತಿತ್ವ ಹೊಂದಿರುವವರು ಎಂದರು.
ಭಗವಾನ್ ಬುಧ್ಧನಿಗೆ eನೋದಯವಾದ, ಏಕಲವ್ಯ ಗುರು ಕಾಣಿಕೆ ನೀಡಿದ, ಮಹಾವೀರರು ಧರ್ಮ ಪ್ರಸಾರ ಮಾಡಿದ ಈ ದಿನ ವಿಶೇಷವಾದ ದಿನವಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರು ಗುರು ಶಿಷ್ಯರಿಗೆ ಹೊಸ ಆಯಾಮವನ್ನು ನೀಡಿದ ಪ್ರಪ್ರಥಮ ವ್ಯಕ್ತಿಯಾಗಿzರೆ. ಗುರು ಎಂದರೆ ಸಚ್ಚಿದಾನಂದ ಸ್ವರೂಪದ ಪ್ರತೀಕವಾಗಿzರೆ. ಭಗವದ್ಗೀತೆಯ ೯ನೇ ಅಧ್ಯಾಯ ೧೪ ನೇ ಶ್ಲೋಕವನ್ನು ಓದಿದಾಗ ಇದರ ಮಹತ್ವ ತಿಳಿಯುತ್ತದೆ ಎಂದರು.
ಗುರು ಪರಂಪರೆಯಲ್ಲಿ ಬಂದಂತಹ ಗುರುಗಳಾದ ವಿವೇಕಾನಂದರಿಗೆ ಶ್ರೀ ರಾಮಕೃಷ್ಣ ಪರಮಹಂಸರು, ರಾಮಕೃಷ್ಣರಿಗೆ ಅವರ ಪತ್ನಿ ಶಾರದ ದೇವಿ, ಬುಧ್ಧನಿಗೆ ಶಿವ, ಕೃಷ್ಣನಿಗೆ ಸಾಂದೀಪಿನಿ ಗುರುಗಳು, ಆಲೆಗ್ಸಾಂಡರ್‌ಗೆ ಸಾಕ್ರಟೀಸ್, ಶಿವಾಜಿಗೆ ಸಮರ್ಥ ರಾಮದಾಸರು, ಹಕ್ಕ ಬುಕ್ಕರಿಗೆ ವಿದ್ಯಾರಣ್ಯರು, ಸಂತ ಶಿಶುನಾಳ ಶರೀಫರಿಗೆ ಗುರು ಗೋವಿಂದ ಭಟ್ಟರು, ಕಾಳಿದಾರಿಗೆ ಕಾಳಿಕಾದೇವಿ, ನಾಲ್ಮಡಿ ಕೃಷ್ಣರಾಜ ಒಡೆಯರ್‌ಗೆ ಶೃಂಗೇರಿಯ ಶ್ರೀ ಭಾರತಿ ತೀರ್ಥ ಸ್ವಾಮಿಗಳವರು ಹಾಗು ಸರ್.ಎಂ. ವಿಶ್ವೇಶ್ವರಯ್ಯ ನವರುಗಳು ಗುರುಗಳಾಗಿದ್ದರು ಎಂದು ಉದಾಹರಣೆ ನೀಡಿದರು.
ಈಗುರುಪರಂಪರೆಯನ್ನು ಅವಿಚ್ಚಿನ್ನವಾಗಿ ಚಾಚೂ ತಪ್ಪದೆ ಅನೂಚಾನವಾಗಿ ಮುಂದುವರೆಸುತ್ತಿರುವವರು ಶೃಂಗೇರಿ ಶಂಕರ ಮಠದ ಪರಂಪರೆ. ಈಗಿನ ಹಿರಿಯ ಶ್ರೀ ಭಾರತೀ ತೀರ್ಥ ಸ್ವಾಮಿಗಳವರು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳವನರನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ಇದಕ್ಕೆ ಶಾರದಾ ಮಾತೆಯ ಅನುಗ್ರಹದ ಆeಯಂತೆ ಮಾಡಿಕೊಳ್ಳುವ ಮೂಲಕ ಗುರು ಪರಂಪರೆಯನ್ನು ಗೌರವವಾಗಿ ಪಾಲಿಸುತ್ತಿzರೆ ಆ ಮೂಲಕ ಇತರರಿಗೆ ಮಾದರಿಯಾಗಿzರೆ ಎಂದರು.
ಮಾತೃ ಮಂಡಳಿ ಅಧ್ಯಕ್ಷೆ ಸ್ವಪ್ನ ಕುಮಾರ್ ತೇಲ್ಕರ್, ಶಾನೇಗೌಡ, ಸ್ವರ್ಣ ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುಬ್ರಮಣ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಪ್ನ ಪರಿಚಯ ಮಾಡಿದರು.
