ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಾಜದಲ್ಲಿ ತಿರಸ್ಕೃತಗೊಂಡವರೆ ಅನುಭವ ಮಂಟಪದಲ್ಲಿಪುರುಸ್ಕೃತಗೊಂಡು ಶರಣ – ವಚನಕಾರರಾದರು…

Share Below Link

ಭದ್ರಾವತಿ : ನಗರದ ವೀರಶೈವ ಲಿಂಗಾಯಿತ ಮಹಿಳಾ ಸಮಾಜವು ಬಸವತತ್ವದ ಆಧಾರದ ಮೇಲೆ, ವೈಚಾರಿಕ ಚಿಂತನೆಯ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ನ್ಯೂಟೌನ್ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜ ಎಸ್ ಹೊಸೆಳ್ಳರ ತಿಳಿಸಿದರು.
ನಗರದ ವೀರಶೈವ ಲಿಂಗಾಯಿತ ಮಹಿಳಾ ಸಮಾಜ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಬಸವಣ್ಣ ನವರು ಪ್ರತಿಪಾದಿಸಿದ ಕಾಯಕ ಹಾಗು ದಾಸೋಹ ಸಿzಂತಗಳು ಬೇರೆ ಎ ಸಿzಂತಗಳಿಗಿಂತ ವಿಶೇಷವಾದದು ಹಾಗು ಭಿನ್ನವಾದದ್ದು. ಹಾಗಾಗಿ ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಮೂಲಕ ಭಿನ್ನ ಸಮಾಜವಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಸಂಸ್ಕ್ರತದಲ್ಲಿದ್ದ ವೇದ, ಆಗಮ, ಉಪನಿತ್‌ಗಳಲ್ಲಿದ್ದ ಸಾರವನ್ನು ಜನ ಸಾಮಾನ್ಯರ ಆಡು ಭಾಷೆಯಾದ ಸರಳ ಕನ್ನಡದಲ್ಲಿ ರಚಿಸಿದರು. ಇದರಲ್ಲಿ ಛಂದಸ್ಸು, ಕಾವ್ಯ ವಿಮಾಂಸೆಗಳೆ ಇದರಲ್ಲಿ ಒಳಗೊಂಡಿರುವುದು ವಿಶೇಷ. ಇದು ಭಾರತೀಯ ಸಾಹಿತ್ಯಕ್ಕೆ ವಚನ ಸಾಹಿತ್ಯವು ನೀಡಿದ ಅಪರೂಪ ವಾದ ಸಾಹಿತ್ಯದ ಕೊಡುಗೆಯಾಗಿದೆ ಎಂದರು.


ಬಸವಣ್ಣನವರ ಈ ಜನಪರ ಕಾಳಜಿಗಳನ್ನು ಅಂದಿನ ಮೂಲಭೂತವಾದಿಗಳು ಹಾಗು ಸನಾತನವಾದಿಗಳು ಇವುಗಳನ್ನು ವಿರೋಧಿಸಿದರು. ಸಮಾಜದಲ್ಲಿ ತಿರಸ್ಕೃತಗೊಂಡವರೆ ಅನುಭವ ಮಂಟಪದಲ್ಲಿ ಪುರುಸ್ಕೃತಗೊಂಡರು. ಮಹಿಳೆಯರಿಗೂ ಪರುಷರಷ್ಟೆ ಸೂಕ್ತವಾದ ಸ್ಥಾನ ಮಾನ ಗೌರವ ಹೊಂದಿದ್ದರು. ಸಮಾದಲ್ಲಿ ಇಂತಹ ಬದಲಾವಣೆಯಿಂದ ಕಲ್ಯಾಣದಲ್ಲಿ ಕ್ರಾಂತಿ ಉಂಟಾಯಿತು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಎಸ್. ವಿಜಯ್ ಕುಮಾರ್ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ ವೀರಶೈವ ಲಿಂಗಾಯಿತ ಮಹಿಳಾ ಸಮಾಜವು ಸಮಾಜದಲ್ಲಿ ಉತ್ತಮವಾದ ಕಾರ್ಯಗಳನ್ನು ಹಾಗುಮಹಿಳೆಯರ ಸರ್ವತೋಮುಖ ಅಭಿವೃಧ್ಧಿಯಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿ ಸಮಾಜವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ನಾಗರತ್ನ ಕೋಠಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಆರ್.ಎಸ್. ಶೋಭಾ, ನಾಗರತ್ನ, ಕುಸುಮ ಉಪಸ್ಥಿತರಿದ್ದರು.
ಅನುಪಮ, ಮಮತ ಪ್ರಾರ್ಥಿಸಿ, ವೀಣಾ ಕೋಠಿ ಸ್ವಾಗತಿಸಿದರು. ಯಶೋಧ ಡಾ.ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾ ವರದಿ ನೀಡಿದರು. ಪರಿಮಳ, ಉಷಾ ಅತಿಥಿಗಳ ಪರಿಚಯ ಮಾಡಿದರು. ಪುಟ್ಟಮ್ಮ ವಂದನಾರ್ಪಣೆ ಮಾಡಿದರು. ಗೀತಾ ಡಾ.ಆರ್.ಸಿ. ಬೆಂಗಳೂರಿ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯ ಲಕ್ಷ್ಮಿ ಬಹುನಮಾನ ವಿಜೇತರ ಪಟ್ಟಿಯನ್ನು ಓದಿದರು. ಅನುಪಮ ಸಾಂಸ್ಕ್ರತಿಕ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದ ನಂತರ ಸಮಾಜದ ಸದಸ್ಯೆಯರಿಂದ ಆಕರ್ಷಕ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.