ಜನರಿಂದ ತಿರಸ್ಕರಿಸಲ್ಪಟ್ಟವರು ಸಂಸತ್ತು ನಿಯಂತ್ರಿಸಲು ಯತ್ನಿಸುತ್ತಿzರೆ: ಮೋದಿ
ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದ್ದು, ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿಕೊಂಡಿzರೆ. ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ಮುನ್ನ ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನುzಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದರು.
೨೦೨೪ ವರ್ಷದ ಕೊನೆಯ ದಿನಗಳು ನಡೆಯುತ್ತಿದ್ದು, ದೇಶವು ೨೦೨೫ರ ನೂತನ ವರ್ಷಕ್ಕೆ ತಯಾರಿ ನಡೆಸುತ್ತಿದೆ. ಸಂಸತ್ತಿನ ಈ ಅಧಿವೇಶನವು ಹಲವಾರು ವಿಧಗಳಲ್ಲಿ ವಿಶೇಷವಾಗಿದೆ. ಅತ್ಯಂತ ಮುಖ್ಯ ವಿಷಯವೆಂದರೆ ಸಂವಿಧಾನದ ೭೫ನೇ ವರ್ಷದ ಆರಂಭ. ನಾಳೆ, ಸಂವಿಧಾನ ದಿನ. ಎಲ್ಲರೂ ಸಂವಿಧಾನದ ೭೫ನೇ ವರ್ಷವನ್ನು ಆಚರಿಸುತ್ತಾರೆ. ೭೫ನೇ ವರ್ಷದ ಸಂವಿಧಾನದ ದಿನದ ಸಂದರ್ಭದಲ್ಲಿ ಅಧಿವೇಶನ ನಡೆಯು ತ್ತಿದ್ದು, ಈ ಅಧಿವೇಶನದ ಕಲಾಪ ಸುಗಮವಾಗಿ ಸಾಗಲು ವಿರೋಧ ಪಕ್ಷಗಳು ಅನುವು ಮಾಡಿಕೊಡ ಬೇಕೆಂದು ಮನವಿ ಮಾಡಿದರು.
ಅಧಿವೇಶನದಲ್ಲಿ ಎ ವಿಚಾರಗಳ ಕುರಿತು ಚರ್ಚೆಗೆ ಅವ ಕಾಶ ಮಾಡಿಕೊಡಲಾ ಗುತ್ತದೆ. ಜನರ ಸಮಸ್ಯೆಗಳ ಪ್ರಾಮಾಣಿಕ ಚರ್ಚೆ ನಡೆಸಬೇಕಿದೆ. ಹೀಗಾಗಿ, ಎಲ್ಲರೂ ಕಲಾಪದಲ್ಲಿ ಭಾಗಿಯಾಗಬೇಕು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಎಂದಿಗೂ ಜನರ ಸಮಸ್ಯೆಗಳ ಮಾತನಾಡುವುದು ಕಡಿಮೆ. ಜನರಿಂದ ತಿರಸ್ಕೃತಗೊಂಡಿರುವ ಕೆಲವರು ಬೆರಳೆಣಿಕೆಯಷ್ಟು ಜನರಿಂದ ಗೂಂಡಾಗಿರಿ ಮಾಡುವ ಮೂಲಕ ಸಂಸತ್ತನ್ನು ನಿಯಂತ್ರಿ ಸಲು ನಿರಂತರ ವಾಗಿ ಪ್ರಯತ್ನಿಸುತ್ತಿzರೆ. ದೇಶದ ಜನರು ಅವರ ಈ ಎ ಪ್ರಯತ್ನ ಗಳನ್ನು ಗಮನಿಸುತ್ತಿzರೆ. ಕೇವಲ ಅಧಿಕಾರದ ದಾಹ ಇರುವವರನ್ನು ಜನರು ತಿರಸ್ಕರಿಸಿzರೆ ಎಂದು ಕುಟುಕಿದರು.
ಅತ್ಯಂತ ನೋವಿನ ಸಂಗತಿ ಯೆಂದರೆ, ಹೊಸ ಸಂಸದರು ಹೊಸ ಆಲೋಚನೆಗಳನ್ನು, ಹೊಸ ಶಕ್ತಿಯನ್ನು ತರುತ್ತಾರೆ. ಅವರು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ. ಎ ಪಕ್ಷಗಳಿಗೆ ಸೇರಿದವರು. ಆದರೆ, ಕೆಲವರು ಅವರ ಹಕ್ಕುಗಳನ್ನು ಕಸಿದುಕೊಳ್ಳು ತ್ತಿzರೆ. ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶ ನೀಡುತ್ತಿಲ್ಲ. ೮೦-೯೦ ಬಾರಿ ಜನರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ. ಪ್ರಜಪ್ರಭುತ್ವದ ಮನೋಭಾವವನ್ನು ಗೌರವಿಸುತ್ತಿಲ್ಲ. ಜನರ ಆಶೋತ್ತರಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಅವರಿಗೆ ಜನರ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲ, ಎಂದಿಗೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಭಾರತದ ಮತದಾರರು ಪ್ರಜಪ್ರಭುತ್ವಕ್ಕೆ ಸಮರ್ಪಿತರಾಗಿ zರೆ, ಸಂವಿಧಾನಕ್ಕೆ ಅವರ ಸಮರ್ಪಣೆ, ಸಂಸದೀಯ ಕಾರ್ಯ ವ್ಯವಸ್ಥೆಯಲ್ಲಿ ಅವರ ನಂಬಿಕೆ, ಸಂಸತ್ತಿ ನಲ್ಲಿ ಕುಳಿತಿರುವ ನಾವೆಲ್ಲರೂ ಅವರ ಭಾವನೆಗಳಿಗೆ ಅನುಗುಣವಾಗಿ ಬದುಕಬೇಕು. ಇದನ್ನು ಸರಿದೂಗಿಸಲು ಇರುವ ಏಕೈಕ ಮಾರ್ಗವೆಂದರೆ ನಾವು ಪ್ರತಿ ವಿಷಯದ ವಿವಿಧ ಅಂಶಗಳನ್ನು ಸದನದಲ್ಲಿ ಅತ್ಯಂತ ಆರೋಗ್ಯಕರ ರೀತಿಯಲ್ಲಿ ಎತ್ತಿ ತೋರಿಸಬೇಕು. ಈ ಅಧಿವೇಶನವು ಅತ್ಯಂತ ಫಲಪ್ರದವಾ ಗಲಿ ಎಂದು ನಾನು ಭಾವಿಸುತ್ತೇನೆ. ಈ ಅಧಿವೇಶನವನ್ನು ಉತ್ಸಾಹದಿಂದ ಮುನ್ನಡೆಸಲು ಎ ಗೌರವಾನ್ವಿತ ಸಂಸದರನ್ನು ಆಹ್ವಾನಿಸುತ್ತೇನೆಂದು ತಿಳಿಸಿದರು.