ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಈ ಬಾರಿ ಜಿಯ 7 ಕ್ಷೇತ್ರಳು ಕಾಂಗ್ರೆಸ್ ತೆಕ್ಕೆಗೆ…

Share Below Link

ಶಿವಮೊಗ್ಗ: ಜಿಯ ಎ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಜಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಜಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಜಿಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಬೆಂಬಲವಿದೆ. ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿದ್ದದ್ದು ನಿಜ. ಆದರೆ ಈಗ ಯಾವ ಗೊಂದ ಲವೂ ಇಲ್ಲ. ಶೇ.೮೦ರಷ್ಟು ಅಸಮಾಧಾನಗಳು ಬಗೆಹರಿದಿದೆ. ಟಿಕೆಟ್ ಪ್ರಕಟವಾದಾಗ ಆಕಾಂಕ್ಷಿ ಗಳ ಅಭಿಮಾನಿಗಳಿಗೆ ಒಂದಿಷ್ಟು ಬೇಸರವಾಗುವುದು ಸಹಜ ಆದರೆ ಆ ಬೇಸರ ಒಂದೆರಡು ದಿನ ಮಾತ್ರ. ಈಗ ಎಲ್ಲವೂ ಬಗೆಹರಿ ದಿದೆ. ಕೆಲವರು ಮಾತ್ರ ಇನ್ನೂ ಅಸಮಾಧಾನದಿಂದ ಇzರೆ. ೨೦ನೇ ತಾರೀಖಿನ ಒಳಗೆ ಎಲ್ಲವೂ ಸರಿಹೋಗುತ್ತದೆ. ನಂತರ ಎಲ್ಲರೂಒಟ್ಟಾಗಿ ಚುನಾವಣೆ ನಡೆಸುತ್ತೇವೆ. ಜಿಯ ಎ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದರು.
ಕಾಂಗ್ರೆಸ್ ಈಗಾಗಲೇ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ನಾಲ್ಕು ಗ್ಯಾರಂಟಿಗಳನ್ನು ನೀಡಿದೆ.ಜೊತೆಗೆ ಬಿಜೆಪಿಯ ಭ್ರಷ್ಟ ಆಡಳಿತ ಮತ್ತು ಬೆಲೆ ಏರಿಕೆಯಿಂದ ಜನರು ಬೇಸತ್ತಿzರೆ. ಕಾಂಗ್ರೆಸ್ ಅನ್ನು ಮತ್ತೆ ಬಯಸುತ್ತಿzರೆ. ಶಿವಮೊಗ್ಗ ಜಿಯೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಈಗಾಗಲೇ ಬಿಜೆಪಿಯ ಅನೇಕರು ಆ ಪಕ್ಷದ ಗೊಂದಲಗಳಿಂದ ಕಾಂಗ್ರೆಸ್ಸಿಗೆ ಸೇರಿzರೆ. ಬಿಜೆಪಿ ಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವುದೇ ಈಗ ನಮ್ಮ ಮುಂದಿರುವ ಗುರಿ. ಜಿಯ ಎ ಕಾಂಗ್ರೆಸ್ ಮುಖಂಡರು ನಮ್ಮೊಂದಿಗಿzರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಸ್.ಕೆ. ಮರಿ ಯಪ್ಪ, ಎಸ್.ಪಿ. ದಿನೇಶ್, ಎಲ್. ಸತ್ಯನಾರಾಯಣ, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್, ಪ್ರಮುಖರಾದ ಆರ್. ಪ್ರಸನ್ನ ಕುಮಾರ್, ಇಸ್ಮಾಯಿಲ್ ಖಾನ್, ಹೆಚ್.ಎಂ. ಚಂದ್ರಶೇಖರಪ್ಪ, ಚಂದ್ರ ಶೇಖರ್, ಚಂದ್ರ ಭೂಪಾ ಲ್, ಹೆಚ್.ಪಿ.ಗಿರೀಶ್, ಶಿವಾ ನಂದ, ದೀಪಕ್‌ಸಿಂಗ್, ನರಸಿಂಹ ಮೂರ್ತಿ, ಶಮೀರ್‌ಖಾನ್, ನಯಾಜ್ ಅಹ್ಮದ್, ವಿಜಯ್, ಎನ್.ಡಿ. ಪ್ರವೀಣ್, ಚಂದನ್ ಸೇರಿದಂತೆ ಹಲವರಿದ್ದರು.