ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹಸಿವು ನೀಗಿಸುವ ಹಣ್ಣು-ತರಕಾರಿಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುವ ಮುನ್ನ ಒಮ್ಮೆ ಯೋಚಿಸಿ…

Share Below Link

ದಾವಣಗೆರೆ : ಮನುಷ್ಯರು ತಿನ್ನಲು ಬಳಸುವ ಹಣ್ಣು- ತರಕಾರಿಗಳನ್ನ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅಲಂಕಾರಿಕ ವಸ್ತುಗಳಾಗಿ, ವಿವಿಧ ಕಾರ್ಯಕ್ರಮ ಗಳಲ್ಲಿ ಬಳಕೆ ಮಾಡುತ್ತಿರು ವುದು ಒಳ್ಳೆಯ ಲಕ್ಷಣವಲ್ಲ. ರೈತರು ಕಷ್ಟಪಟ್ಟು ಬೆವರಿಳಿಸಿ ಬೆಳೆಯುತ್ತಿರುವ ತರಕಾರಿಗಳನ್ನು ಜನರ ಹೊಟ್ಟೆ ತುಂಬಿಸಲು ಬಳಕೆ ಮಾಡಬೇಕೇ ಹೊರತು ಅವುಗಳನ್ನು ಅಲಂಕಾರಿಕ ವಸ್ತುಗಳಾಗಿ ಕಾರ್ಯಕ್ರಮದಲ್ಲಿ ಬಳಕೆ ಮಾಡುವುದು, ದೊಡ್ಡ ದೊಡ್ಡ ಹಾರ ಗಳನ್ನಾಗಿ ನಿರ್ಮಿಸಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮಾಲೆಯಾಗಿ ಬಳಸು ವುದು ಸೂಕ್ತವಲ್ಲ. ನಮ್ಮ ನಡುವೆ ಅದೆಷ್ಟೋ ಜನರು ಒಪ್ಪೊತ್ತಿನ ಊಟವೂ ಇಲ್ಲದ ದಯನೀಯ ಸ್ಥಿತಿಯಲ್ಲಿದ್ದಾರೆ. ಈ ರೀತಿ ಹಣ್ಣು- ತರಕಾರಿಗಳನ್ನು ವ್ಯರ್ಥ ಮಾಡುವ ಬದಲು ಅವುಗಳನ್ನು ಅಂತಹ ಹಸಿದ ಹೊಟ್ಟೆಗೆ ನೀಡಿ ಎಂದು ಕರ್ನಾಟಕ eನ-ವಿeನ ಸಮಿತಿಯ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಯವರು ವಿನಯಪೂರ್ವಕವಾಗಿ ವಿನಂತಿಸಿಕೊಂಡಿzರೆ.


ಭೂಮಿಯಲ್ಲಿ ಸತ್ವವಿಲ್ಲವಿಲ್ಲವೆಂದು ರೈತರು ರಾಸಾಯನಿಕ ಸಿಂಪಡಿಸಿ, ಆಹಾರ ಧಾನ್ಯಗಳನ್ನ ಬೆಳೆಯುತ್ತಿzರೆ. ನೀರಿಗಾಗಿ ಪರದಾಡಿ, ಹನಿ ನೀರಿಗಾಗಿ ಹೋರಾಟಗಳು ನಡೆಯುತ್ತಿವೆ. ನದಿಗಳ ವಿಸ್ತರಣೆಯನ್ನು, ಡ್ಯಾಮ್ ಗಳ ಎತ್ತರ ವನ್ನು ಏರಿಸಿ, ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ದಿನಕಳೆದಂತೆ ವಿಶ್ವದಲ್ಲಿ ಜನಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ತಿನ್ನಲು ಆಹಾರವಿಲ್ಲದೆ ಮಕ್ಕಳು ಪೌಷ್ಟಿಕಾಂಶಗಳ ಕೊರತೆಯಿಂದ ಕುಗ್ಗಿzರೆ. ಬಡವರ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗ ದಷ್ಟು ಬೆಲೆ ಏರಿಕೆ ಆಗುತ್ತಿರುವ ಇಂದಿನ ಸಂದರ್ಭಗಳಲ್ಲಿ ಅತ್ಯಮೂಲ್ಯವಾದ ಹಣ್ಣು-ತರಕಾರಿಗಳನ್ನ ಅಲಂಕಾರಿಕ ವಸ್ತುಗಳಾಗಿ ಕಾರ್ಯಕ್ರಮಗಳಲ್ಲಿ ಜನರು ಬಳಕೆ ಮಾಡುತ್ತಿರುವುದು, ಆಹಾರದ ಸಮಸ್ಯೆಯಿಂದ ಬಳಲುತ್ತಿರುವ ದೇಶದಲ್ಲಿ ಇನ್ನೊಂದಿಷ್ಟು ಆಹಾರದ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತಿದೆ. ತಿನ್ನಲು ಬಳಸಬೇಕಾದ ಆಹಾರವನ್ನ ಅಲಂಕಾರಿಕ ವಸ್ತುಗಳಾಗಿ ಬಳಕೆ ಮಾಡಬೇಡಿ ಎಂದಿzರೆ.
ಮನುಷ್ಯ ಅಲಂಕಾರಿಕ ಪ್ರeಯನ್ನು ಬೆಳೆಸಿಕೊಂಡಾಗಿನಿಂದ ಯಾವುದಾದರೂ ವಸ್ತು ಸಿಕ್ಕರೆ, ಅದರಿಂದ ಕಲಾಕೃತಿಗಳನ್ನು ರಚಿಸು ವುದು, ಅಲಂಕಾರಿಕ ವಸ್ತುಗಳನ್ನಾಗಿ ಬಳಕೆ ಮಾಡುವುದನ್ನು ರೂಢಿ ಮಾಡಿಕೊಂಡಿzವನೆ, ಆದರೆ ಈಗ ಆಹಾರ ಸಾಮಗ್ರಿಗಳ ಕೊರತೆ ಎದ್ದು ಕಾಣುತ್ತಿರುವುದರಿಂದ, ಅಂತಹ ಸಾಮಾಗ್ರಿಗಳನ್ನು ಬಳಸಿ ಮಂಟಪವನ್ನು ಶೃಂಗರಿಸುವುದು, ರಸ್ತೆಗಳನ್ನು ಅಲಂಕರಿಸುವುದು, ರಂಗೋಲಿ ರೂಪದಲ್ಲಿ ಬಳಕೆ ಮಾಡುವುದು, ಅವುಗಳನ್ನ ಕತ್ತರಿಸಿ, ತುಂಡರಿಸಿ, ಮದುವೆ ಮನೆಗಳಲ್ಲಿ ಶಂಗಾರಕ್ಕೋಸ್ಕರ ಬಳಕೆ ಮಾಡುವುದು, ಪ್ರದರ್ಶನಕ್ಕಾಗಿ ತೋಟಗಾರಿಕೆ ಇಲಾಖೆಯಲ್ಲಿ ಸಾವಿರಾರು ಕೆಜಿ ತೂಕದ ತರಕಾರಿಗಳನ್ನ ಬಿಸಿಲಿನಲ್ಲಿ ಒಣಗಿಸಿ, ಅವು ಮತ್ತೆ ಯಾರಿಗೂ ಸಹ ಬಳಕೆ ಬಾರದಂತೆ ಮಾಡಿ ಬಿಸಾಡುವ ದೃಶ್ಯವನ್ನು ನೋಡಿದರೆ, ನಮ್ಮ ಜೀವನ ಶೈಲಿ, ದುಂದು ವೆಚ್ಚಗಳು ಎಷ್ಟರ ಮಟ್ಟಿಗಿದೆ ಎಂಬುದು ಅರ್ಥವಾಗುತ್ತದೆ.
ಮಕ್ಕಳು ತಿನ್ನಬೇಕಾದ ಹಣ್ಣು ಹಂಪಲುಗಳನ್ನ, ಕತ್ತರಿಸಿ, ತುಂಡರಿಸಿ, ಅಲಂಕಾರಿಕ ಕೃತಿಗಳನ್ನ, ಚಿತ್ರಕಲೆಗಳನ್ನ ಬಿಡಿಸಿ, ಅವುಗಳು ಮತ್ತೆ ಮರುಬಳಕೆಯಾಗದಂತೆ ಬಿಸಾಡುವ ದೃಶ್ಯ ನಿಜಕ್ಕೂ ಅರ್ಥಹೀನ. ದಿನೇ ದಿನೇ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗ ಸಾವಿರಾರು ಕೆಜಿ ತರಕಾರಿಗಳನ್ನು ಕಂಬಗಳಿಗೆ ಸುತ್ತುವುದು, ಹಾರಗಳ ಮುಖಾಂತರ ಅಧಿಕಾರಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ , ಹಾಕಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು. ಕಂಬಗಳಿಗೆ ನೂರಾರು ಕೆಜಿ ತರಕಾರಿಗಳನ್ನ ದಾರದಿಂದ ಪೋಣಿಸಿ ನೇತು ಹಾಕುವುದು, ತೋರಣಗಳನ್ನು ಕಟ್ಟುವುದು ಇದು ನಡೆಯುತ್ತಲೇ ಇದೆ. ಆದಷ್ಟು ಜನರು ಇಂತಹ ಚಟುವಟಿಕೆಗಳಿಂದ ದೂರವಿದ್ದು, ನಾವು ತಿನ್ನುವ ಅನ್ನ, ಹಣ್ಣು- ತರಕಾರಿಗಳಿಗೆ ಗೌರವಿಸಿ, ಅವುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಇಲ್ಲವೇ ಅವಶ್ಯಕತೆ ಇರುವವರಿಗೆ ನೀಡಿದರೆ ಅಂತಹ ಕಾರ್ಯಗಳು ಅರ್ಥಪೂರ್ಣವಾಗುತ್ತವೆ.
ಈ ಹಿಂದೆ ಜನಸಂಖ್ಯೆಯೂ ಕಡಿಮೆ ಇತ್ತು. ಭೂಮಿಯೂ ವಿಶಾವಾಗಿ ಸಮೃದ್ಧವಾಗಿತ್ತು. ಅನ್ನದಾತ ರೈತರು ಹಣ್ಣು- ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಹಾಗೂ ಅದನ್ನು ಗೌರವದಿಂದ ಕಾಣುತ್ತಿದ್ದರು. ಮಳೆ, ವ್ಯವಸಾಯ ಚಟುವಟಿಕೆಗಳು ಸಮೃದ್ಧವಾಗಿದ್ದವು. ಆದರೂ ಸಹ ಹಣ್ಣು-ತರಕಾರಿಗಳನ್ನು ಹೆಚ್ಚು ಅಲಂಕಾರಿಕ ವಸ್ತುಗಳನ್ನಾಗಿ ಬಳಸುತ್ತಿರಲಿಲ್ಲ, ಆಹಾರ ಸಾಮಗ್ರಿಗಳ ಕೊರತೆ ಇರುವ ಸಂದರ್ಭದಲ್ಲಿ ಅವುಗಳನ್ನು ವ್ಯರ್ಥ ಮಾಡುವುದು ಒಂದು ರೀತಿಯ ಫ್ಯಾಷನ್ ಆಗಿದೆ ಎಂದು ವಿಷಾದಿಸಿದ್ದಾರೆ.