ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮರಗಳ ಮಾರಣಹೋಮ ಮಾಡುವ ಮುನ್ನ ಒಮ್ಮೆ ಯೋಚಿಸಿ… !

Share Below Link

ಭೂಮಿಗೆ ಮಳೆ ಬಂದು ತಂಪಾಗಿರಲು ಹಾಗೂ ನೆರಳಿಗಾಗಿ ಗಿಡ ಬೆಳೆಯಿರಿ, ಇಂದಿನ ಬೇರುಗಳು ನಾಳೆಯ ನೆರಳು, ಮರಗಳು ಪ್ರಕೃತಿಯ ಜೀವ ವಿಮೆ. ಗಿಡ ಮರಗಳು ಮಾನವನ ಶ್ವಾಸಕೋಶ ಹೀಗೆ ಸಾಕಷ್ಟು ಘೋಷಣೆಗಳನ್ನು ಕೂಗುತ್ತಾ ನಮ್ಮ ಕಾಡು ಹಾಗೂ ಪರಿಸರ ಉಳಿಸಲು ಕಷ್ಟಪಡುತ್ತಿರುವವರ ಮದ್ಯೆ ಒಂದಷ್ಟು ಮಂದಿ ಮರಗಳನ್ನು ತಮ್ಮ ಮಕ್ಕಳಂತೆ ಬೆಳೆಸುತ್ತಿರುವಾಗ ಬೇಲೂರಿನಿಂದ ಬಿಕ್ಕೋಡು ಸಕಲೇಶಪುರ ರಸ್ತೆಯ ಬಿಸ್ಟಮ್ಮನ ಕೆರೆಯ ಸುತ್ತಮುತ್ತಲಿನ ಮರಗಳನ್ನು ಬುಡದವರೆಗೂ ಕತ್ತರಿಸಿ ಮರಗಳನ್ನು ಲಾರಿಯಲ್ಲಿ ತುಂಬಿ ಸಾಗಿಸಿದ್ದು ಬಹುಶಃ ಯಾರ ಗಮನಕ್ಕೂ ಬರಲಿಲ್ಲ ಎನಿಸುತ್ತದೆ.
ಮರ ಕತ್ತರಿಸುವ ಒಬ್ಬ ವ್ಯಕ್ತಿಗೆ ಮರಗಳನ್ನು ಏಕೆ ಕಡಿಯುತ್ತಿದ್ದೀರ ಎಂದು ಪ್ರಶ್ನಿಸಿದಾಗ ಆತ ಮರಗಳು ರಸ್ತೆಯ ಕಡೆ ಬಾಗಿದ್ದವು ಎಂಬ ಸಿದ್ದ ಉತ್ತರ ನೀಡಿ ಸುಮ್ಮನಾದ. ಆ ಜಗದಲ್ಲಿ ರಸ್ತೆ ಅಗಲ ಮಾಡುವ ವ್ಯವಸ್ಥೆ ಇಲ್ಲ. ಒಂದು ಕಡೆ ಕೆರೆ ಮತ್ತೊಂದು ಕಡೆ ಆಳ ಎನಿಸುವ ಜಗದಲ್ಲಿ ಜನರ ಜಮೀನು ಇದೆ. ಹಾಗೇನಾದರೂ ಮರಗಳು ತೀರ ರಸ್ತೆಯ ಕಡೆ ಬಾಗಿದಿದ್ದರೆ ಬಾಗಿ ತೊಂದರೆ ಕೊಡುವ ಕೊಂಬೆಗಳನ್ನು ಕಡಿಯಬಹುದಿತ್ತು.
ಆ ಸ್ಥಳದ ವಿಶೇಷ ಏನೆಂದರೆ ಟೌನ್ ವ್ಯಾಪ್ತಿಯಲ್ಲಿ ಯಾರಾದರೂ ಮರಣಿಸಿದರೆ ಶವವನ್ನು ಅದೇ ದಾರಿಯಲ್ಲಿ ಸಾಗಿ ಸ್ಮಶಾನಕ್ಕೆ ಹೊತ್ತುಕೊಂಡು ಹೋಗಬೇಕು. ಸ್ಮಶಾನಕ್ಕೆ ಸಾಗುವ ತಿರುಚು ರಸ್ತೆಯ ಮರದ ಕೆಳಗೆ ಒಂದು ಬಾರಿ ಶವವನ್ನು ನೆಲದ ಮೆಲೆ ಇಟ್ಟು ಸಣ್ಣದೊಂದು ಶಾಸ್ತ್ರ ಮಾಡಿ ಮತ್ತೆ ಶವವನ್ನು ಎತ್ತಿಕೊಂಡು ಸಾಗುತ್ತಿದ್ದರು. ಇದುವರೆಗೂ ಆದೆಷ್ಟು ಶವಗಳನ್ನು ಆ ಮೂಲೆಯಲ್ಲಿ ಇಳಿಸಿ ಶಾಸ್ತ್ರ ಮಾಡಿ ಹೋಗಿದ್ದವೋ ಆದರೆ ಇದೇನನ್ನೂ ಗಮನಿಸದೆ ಕೆರೆಯ ಅಕ್ಕಪಕ್ಕ ಮರಗಳ ಕಡಿದು ಮಾರಣ ಹೋಮ ನಡೆಸಿzರೆ.
ಸರಿ, ಬೆಳೆದ ಮರಗಳೆಲ್ಲವನ್ನು ಬುಡ ಮಾತ್ರ ಬಿಟ್ಟು ಸಂಪೂರ್ಣವಾಗಿ ಕತ್ತರಿಸಿ ತುಂಬಿಕೊಂಡು ಹೋದರಲ್ಲ, ನೋಡಲು, ಕೇಳಲು ಪ್ರಕೃತಿ ಮಾತೆಯನ್ನು ಉಳಿಸಲು ಪತ್ರಿಕೆ ಮತ್ತು ಮೀಡಿಯಾ ಮುಂದೆ ದರ್ಶನ ನೀಡಿದ ಯಾರೊಬ್ಬರು ಬರಲಿಲ್ಲ ಎಂಬುದೇ ಬೇಸರದ ಸಂಗತಿ.
ಪ್ರಕೃತಿಯಲ್ಲಿ ಬೆಳೆದು ಯಾರಿಗೂ ತೊಂದರೆ ಕೊಡದಂಥಹ ಮರಗಳನ್ನು ಮಾರಣಹೋಮ ನಡೆಸಿzನೋ ಆಯಿತು. ಅದನ್ನು ಯಾವ ಇಲಾಖೆಯವರೂ, ಯಾವ ಪ್ರಕೃತಿ ಪ್ರೇಮಿಗಳೂ ಉಳಿಸಿಕೊಳ್ಳಲು ಬರಲಿಲ್ಲ.
ಇದೇ ರೀತಿ ಇದಕ್ಕೆ ಮುನ್ನ ಹಾಸನ ರಸ್ತೆಯ ಹಗರೆ ಹತ್ತಿರವೂ ಕೂಡ ಬೆಳೆದಿದ್ದ ಕಾಡು ಮರಗಳನ್ನು ಕಡಿದು ಬಂಜರು ಮಾಡಿಬಿಟ್ಟರು. ಹೀಗೆ ಬೆಳೆದ ಗಿಡಮರಗಳನ್ನು ಏನೋ ಒಂದು ಕಾರಣ ಕೊಟ್ಟು ಕತ್ತರಿಸುತ್ತಾ ಹೋದರೆ ಕಾಡು ಪ್ರಾಣಿಗಳು ಬದುಕುವುದು ಹೇಗೆ? ಇರುವ ಕಾಡು ಬಂಜರಾದರೆ ಕಾಡು ಪ್ರಾಣಿಗಳು ನಾಡಿಗೆ ಬರದೆ ಮತ್ತೆಲ್ಲಿಗೆ ಹೋದಾವು.
ಆನೆ ಕಾಟ, ಚಿರತೆ ಕಾಟ, ಕರಡಿ ಕಾಡ ಎಂದು ಪ್ರಾಣಿಗಳ ಮೇಲೆ ದೂರುವ ಮುನ್ನ ಮನುಷ್ಯ ಭೂಮಿಯನ್ನು ಭೋಗ್ಯಕ್ಕೆ ಹಾಕಿಕೊಂಡವರಂತೆ ತನಗೆ ಅನ್ನಿಸಿದ್ದು ಮಾಡುತ್ತಾ ಹೋದರೆ ಮಾನವ ಸಂಕುಲಕ್ಕೆ ಕುತ್ತು ಬರುವುದರಲ್ಲಿ ಸಂಶಯವಿಲ್ಲ.
-ಅ.ಭೀ.

Leave a Reply

Your email address will not be published. Required fields are marked *