ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯಲೇಖನಗಳು

ಮತದಾನಕ್ಕೆ ಮುನ್ನ ನೂರು ಬಾರಿ ಯೋಚಿಸಿ; ತಪ್ಪದೇ ಮತ ಚಲಾಯಿಸಿ…

Share Below Link

ಲೇಖನ: ಶ್ರೀಧರ್ ಎಂ.ಎನ್.
ಬಂದೂಕಿನಿಂದ ಹೊರಟ ಗುಂಡಿಗಿಂತ ಓಟು ಒತ್ತುವ ಗುಂಡಿ ಶಕ್ತಿಶಾಲಿ ಎಂಬ ಮಾತೊಂದಿದೆ. ಹೌದು ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ . ರಾಜಕೀಯ ನಮಗೆ ತಿಳಿಯದಂತೆ ನಮ್ಮ ಬದುಕಿನ ಎ ಸ್ತರಗಳನ್ನು ಆವರಿಸಿಬಿಟ್ಟಿದೆ, ಅರಾಜಕತೆಯ ಪರಿಣಾಮವನ್ನು ನಾವು ಊಹಿಸಲು ಸಾಧ್ಯವೇ ಇಲ್ಲ.
ಮಹಾನಗರಗಳಿಂದ ಹಿಡಿದು ರಸ್ತೆಯ ಸಂಪರ್ಕವೇ ಇಲ್ಲದ ಕುಗ್ರಾಮಗಳವರೆಗೂ, ವಿಶ್ವವಿದ್ಯಾನಿಲಯದಿಂದ ಹಿಡಿದು ಅಂಗನವಾಡಿವರೆಗೂ ಹಾಗೂ ನಾಡಿನಿಂದ ಕಾಡಿನವರೆಗೂ ರಾಜಕೀಯ ಹಸ್ತಕ್ಷೇಪ ಇಲ್ಲದ ಸ್ಥಳವೇ ಇಲ್ಲ.
ನಾನು ರಾಜಕೀಯ ವಿಚಾರಗಳಿಂದ ದೂರ ಎಂದು ಯಾರಾದರೂ ಹೇಳುತ್ತಾರೆ ಎಂದರೆ ಅವರು ಸುಳ್ಳು ಹೇಳುತ್ತಿರಬೇಕು ಇಲ್ಲವೇ ಹುಚ್ಚನರಾಗಿರಬೇಕು. ಮತಾಂಧತೆ, ಇಸಂನಿಂದ ತುಂಬಿದ ಹಾಗೂ ರಾಷ್ಟ್ರಾಭಿಮಾನ ಇಲ್ಲದ ರಾಷ್ಟ್ರಗಳು ಹೇಗೆ ಅವನತಿಯತ್ತ ಸಾಗುತ್ತಿವೆ ಎಂಬುದನ್ನು ಇತಿಹಾಸ ಹಾಗೂ ನೆರೆಹೊರೆಯ ರಾಷ್ಟ್ರಗಳನ್ನು ನೋಡಿ ನಾವು ಅರ್ಥ ಮಾಡಿಕೊಳ್ಳಬಹುದು.


ನಮ್ಮ ದೇಶದಲ್ಲಿ ಸುಮ್ಮನೇ, ಯಾರಿಗೆ ಮತದಾನ ಮಾಡಬೇಕು? ಎಂದು ಒಮ್ಮೆ ಕೇಳಿ ನೋಡಿ, ರೆಕಾರ್ಡ್ ಮಾಡಿದ ಆಡಿಯೋ ಆನ್ ಆದಂತೆ ತಾವು ಓಟು ಹಾಕುವ ವ್ಯಕ್ತಿಯನ್ನು ಹಾಗೂ ಪಕ್ಷವನ್ನು ಸಮರ್ಥಿಸಿಕೊಂಡು ಕೂಡಲೇ ತಾವು ಯಾವುದೋ ನಿರ್ಧಿಷ್ಟ ಪಕ್ಷದ ಕಾರ್ಯಕರ್ತರಂತೆ ತಮ್ಮ ಮೂಗಿನ ನೇರಕ್ಕೆ ಯಾವ ಪಕ್ಷಕ್ಕೆ, ಯಾವ ವ್ಯಕ್ತಿಗೆ ಓಟು ಹಾಕಬೇಕು ಎಂದು ಮುಗ್ದವಾಗಿ ಉದ್ದನೆಯ ಬಾಷಣ ಶುರು ಮಾಡಿ ಬಿಡುತ್ತಾರೆ. ಇನ್ನು ಕೆಲವರಿzರೆ, ಅವರಿಗೆ ಯಾರಿಗೆ ಓಟು ಹಾಕಬೇಕು ಎನ್ನುವುದಕ್ಕಿಂತ ಯಾರಿಗೆ ಓಟು ಹಾಕಬಾರದು ಎನ್ನುತ್ತಾ ಪರೋಕ್ಷವಾಗಿ ಯಾರಿಗೆ ಓಟು ಹಾಕಬೇಕು ಎಂದು ಸೂಚಿಸುವ ಪ್ರವೃತ್ತಿ ಇವರದು, ರಕ್ಷಣಾತ್ಮಕ ಶೈಲಿಯ ಆಟ. ಬೇಗ ಹಿಡಿತಕ್ಕೆ ಸಿಗುವುದಿಲ್ಲ.
ಇನ್ನು ಕೆಲವರದ್ದು ಸಮಯ ಸಂದರ್ಭತೆಯ ಪಕ್ವತೆ ನೋಡಿ ಯಾರ ಪರವಾದರೆ ತನಗೆ ಲಾಭ ಎಂಬುದನ್ನು ನೋಡಿಕೊಂಡು ತಮ್ಮ ಇಷ್ಟಾ ನಿಷ್ಟಗಳ ಬಗ್ಗೆ ಬಾಯಿ ಬಿಡದೇ ಹಾಗೂ ತಾನು ಯಾವ ಪಕ್ಷದ ಪರವಾಗಿ ಇರುವೆ ಎಂಬುದನ್ನು ಹೇಳದೇ ಜಣತನ ತೋರಿಸುವ ಗೋಸುಂಬೆ ವಂಶದವರು.
ಕೆಲವರು ರಾಜಕೀಯ ಕಟ್ಟೆ ಪುರಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರೂ ಸಹ ತಾವು ಯಾರ ಪರ ಎಂಬ ಗುಟ್ಟನ್ನು ಮಾತ್ರ ಬಿಟ್ಟು ಕೊಡುವುದಿಲ್ಲ. ಯಾರು ಬಂದರೂ ಅಷ್ಟೇ ಕಣ್ರೀ, ನಮ್ಮ ಕೆಲಸವೇನು ಬದಲಾಗುವುದಿಲ್ಲ, ಸುಮ್ಮನೇ ಇವರ ಬಗ್ಗೆ ಮಾತನಾಡಿ ನಮ್ಮ ಸಮಯ ಏಕೆ ಹಾಳು ಮಾಡಿಕೊಳ್ಳಬೇಕು, ಚುನಾವಣೆ ಅಂದರೆ ನಮಗೆ ಸಂಬಂಧವಿಲ್ಲದ ವಿಷಯ ಎನ್ನುವಂತಹ ಗೋಡೆ ಮಧ್ಯೆ ದೀಪ ಇಟ್ಟಂತೆ ಮಾತನಾಡುವವರು ಸಹ ನಮ್ಮ ಸಮಾಜದಲ್ಲಿ ಅನೇಕರಿzರೆ . ಮಾನವಪರ, ಮಾನವತೆ, ಜತ್ಯಾತೀತರು ಎನ್ನುತ್ತಾ ತಮ್ಮ ದೇಶ, ಸಂಸ್ಕೃತಿ ತಿರಸ್ಕರಿಸಿ ವಿದೇಶದಿಂದ ಆಮದಾದ ಇಸಂಗಳನ್ನು ತಮ್ಮ ಮನೆ ದೇವರಂತೆ ಪೂಜಿಸುವ ವಿಲಕ್ಷಣ ಕುರುಚಲು ಗಡ್ಡ ಬಿಟ್ಟ ನಕಾರಾತ್ಮಕ ಬುದ್ದಿಜೀವಿಗಳz ಗೋಳು ಇನ್ನೊಂದು ರೀತಿ, ಹೀಗೆ ಧರ್ಮದ ಕಟ್ಟರ್ ವಾದಿಗಳು, ಜತಿಯ ಬಗ್ಗೆ ಪೊಳ್ಳು ಅಭಿಮಾನ ಇರುವವರು, ಸಾಮಾಜಿಕ ಮಾಧ್ಯಮದಲ್ಲಿ ಬಂದ ಸುದ್ದಿಗಳನ್ನು ಅಲ್ಲಿಂದ ಇಲ್ಲಿಗೆ ಕಳಿಸುತ್ತಾ, ಪ್ರಚಾರ ಮಾಡುವವರು ಹೀಗೆ ಇಡೀ ಸಮಾಜವೇ ಚುನಾವಣೆಗಳು ಬಂದರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಚುನಾವಣಾ ಪ್ರಚಾರದಲ್ಲಿ ನಿರತವಾಗಿ ಚುನಾವಣೆ ಮುಗಿಯುವವರೆಗೂ ದೇಶದ ಸ್ಥಿತಿ ಕೀಪರ್‌ನ ಬಳಿ ಬಂದ ಚೆಂಡಿನಂತಾಗಿರುತ್ತದೆ.
ಆದರೆ ಇಷ್ಟೇ ರಂಗು ರಂಗಿನಿಂದ ಹಾಗೂ ಧಿಮಾಕಿನಿಂದ ಚುನಾವಣಾ ಕಣ ಕೂಡಿದ್ದರೂ ಸಹ, ದೇಶದ ಅನೇಕ ಮತದಾರರಿಗೆ ಪ್ರಸಕ್ತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಧೇಯೋಧ್ದೇಶವೇನು ಹಾಗೂ ನನ್ನ ಒಂದು ಮತದಿಂದ ರಾಷ್ಟ್ರದಲ್ಲಿ ಎಷ್ಟೊಂದು ಬದಲಾವಣೆ ಆಗಬಲ್ಲದು ಎಂಬ ಅರಿವು ಹಾಗೂ ಜಾಗೃತಿ ಕೊರತೆ ಇರುವುದು ಎದ್ದು ಕಾಣುತ್ತಿದೆ. ಹೀಗಾಗಿ ಮತದಾರರಲ್ಲಿ ಅರಿವು ಮೂಡಿಸಲು ಇದೊಂದು ಸಣ್ಣ ಪ್ರಯತ್ನವೇ ಹೊರತು ಖಂಡಿತ ಯಾವುದೋ ನಿರ್ದಿಷ್ಟ ಪಕ್ಷ ಅಥವಾ ವ್ಯಕ್ತಿಯನ್ನು ಬೆಂಬಲಿಸುವುದಕ್ಕಾಗಿ ಅಥವಾ ಪ್ರಭಾವ ಬೀರಲು ಈ ಲೇಖನ ಬರೆದಿzರೆ ಎಂದು ಮಾತ್ರ ಭಾವಿಸಬೇಡಿ. ದೇಶದಲ್ಲಿ ಒಳ್ಳೆಯ ದೃಢವಾದ ಸರ್ಕಾರ ಬರಲಿ, ಇದರಿಂದ ರಾಷ್ಟ್ರಕ್ಕೆ ಹಿತವಾಗಲಿ ಎಂಬ ಸದುದ್ದೇಶ ಅಷ್ಟೇ.
ಪ್ರಜಪ್ರಭುತ್ವ ರಾಷ್ಟ್ರದಲ್ಲಿ, ಖಡ್ಡಾಯವಾಗಿ ಮತದಾನ ಮಾಡುವುದೆಂದರೇ, ಅದು ರಾಷ್ಟ್ರ ನಿರ್ಮಾಣದಲ್ಲಿ ತನ್ನ ಸಹಭಾಗಿತ್ವ ಇದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ಪಕ್ರಿಯೆ. ಮತದಾನದಿಂದ ದೂರವಿದ್ದವರು, ಖಂಡಿತ ತನ್ನ ಎ ಹಕ್ಕುಗಳನ್ನು ಕಳೆದುಕೊಂಡು ಬಿಡುತ್ತಾನೆ.
ವಿದ್ಯಾವಂತರು, ತಿಳುವಳಿಕೆ ಇರುವವರು ಮತದಾನದಿಂದ ದೂರವುಳಿದರೆ, ಹಣ, ಹೆಂಡ, ವಸ್ತುಗಳನ್ನು ಪಡೆದವರು ಖಡ್ಡಾಯವಾಗಿ ಮತದಾನ ಮಾಡಿ ದೇಶದಲ್ಲಿ ಲುಚ್ಚಾ ಲಂಫಂಗ ರೌಡಿಗಳನ್ನು ಅಧಿಕಾರಕ್ಕೆ ತರುತ್ತಾರೆ. ನಮ್ಮ ಜತಿಯವನು ಅಧಿಕಾರಕ್ಕೆ ಬರಬೇಕು ಎಂದು ಮತದಾನ ಮಾಡಿದರೆ, ಅಯೋಗ್ಯ ಹಾಗೂ ಲಂಪಟರು ಅಧಿಕಾರಕ್ಕೆ ಬಂದು ಕೂರುತ್ತಾರೆ.
ರಾಷ್ಟ್ರೀಯತೆ ಹಾಗೂ ಸರ್ವ ಜನ ಹಿತವನ್ನು ಬಿಟ್ಟು ತಾತ್ಕಾಲಿಕ ಆಸೆ ಆಕಾಂಕ್ಷೆಗಳನ್ನು ತೋರಿಸಿ ಅಧಿಕಾರಕ್ಕೆ ಬಂದವರು ಖಂಡಿತ ದೇಶದ ಹಿತವನ್ನು ಅವರು ಕಾಪಾಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಡಾಕ್ಟರ್ ರವರ ಮಗ ಡಾಕ್ಟರ್ ಡಿಗ್ರಿ ಪಡೆದು ಅವನ ತಂದೆಯಂತೆ ದೀರ್ಘ ಕಾಲ ವೃತ್ತಿ ನಿರತನಾದರೆ ಮಾತ್ರ ಅವನು ಸಹ ಯಶಸ್ವಿ ಡಾಕ್ಟರ್ ಆಗಬಹುದೇ ಹೊರತು ಡಾಕ್ಟರ್ ಮಗ ಎಂದು ಓದದೇ ಹಾಗೂ ಅನುಭವ ಪಡೆಯದೇ ಖಂಡಿತ ಡಾಕ್ಟರ್ ಆಗಲು ಸಾಧ್ಯವಿಲ್ಲ. ಅದೇ ರೀತಿ ರಾಜಕಾರಣಿಗಳ ಮಕ್ಕಳು ಸಹ.
ರಾಜಕೀಯ ಎಂಬುದು ಕೃಷಿ, ಉದ್ಯಮ ವ್ಯಾಪಾರ ಅಥವಾ ವೃತ್ತಿಯಲ್ಲ ಇದು ಸಂಪೂರ್ಣ ವಾಗಿ ತನ್ನನ್ನು ತಾನು ದೇಶಕ್ಕಾಗಿ ತೊಡಗಿಸಿ ಕೊಳ್ಳುವ ಸೇವಾ ಮನೋಭಾವ ಇರುವವರ ಕ್ಷೇತ್ರ, ಹಣ ಅಧಿಕಾರ ಹಾಗೂ ಸ್ಥಾನಮಾನಗಳನ್ನು ಹುಡುಕಿಕೊಂಡು ಅನೇಕರು ರಾಜಕೀಯ ಕ್ಷೇತ್ರಕ್ಕೆ ಬರುತ್ತಾರೆ, ಅವರನ್ನು ಮುಲಾಜಿಲ್ಲದೇ ತಿರಸ್ಕರಿಸಿ ಆಗ ಮಾತ್ರ ರಾಜಕೀಯ ಕ್ಷೇತ್ರ ಶುದ್ಧಿಯಾಗಲು ಸಾಧ್ಯ.


ವ್ಯಕ್ತಿಯೊಬ್ಬರ ಆಯ್ಕೆ ಎನ್ನುವ ಒಂದು ವಿಚಾರ ಬಿಟ್ಟರೆ, ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಯ ಮಧ್ಯೆ ಭೂಮಿ ಆಕಾಶದಷ್ಟು ಅಂತರವಿದೆ, ವಿಧಾನ ಸಭೆಯ ಅಭ್ಯರ್ಥಿ ನೇರವಾಗಿ ತನ್ನ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವನಿಗೆ ತನ್ನ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರಬೇಕಾಗುತ್ತದೆ. ಕ್ಷೇತ್ರದ ಬೇಕು ಬೇಡಗಳು ಹಾಗೂ ಅಭಿವೃದ್ಧಿಯ ಬಗ್ಗೆ ನೀಲಿನಕ್ಷೆಯ ಯೋಜನೆ ಇಟ್ಟುಕೊಂಡು ಸಾರ್ವಜನಿಕರಿಗೆ ಸದಾಕಾಲ ಕೈಗೆಟುಕುವಂತಹವನಾಗಿರ ಬೇಕಾಗುತ್ತದೆ.
ಲೋಕಸಭೆಯ ಅಭ್ಯರ್ಥಿ, ದೇಶದ ಪ್ರಧಾನಮಂತ್ರಿ ಹಾಗೂ ಮಂತ್ರಿ ಮಂಡಲವನ್ನು ತನ್ನ ಕ್ಷೇತ್ರದಿಂದ ಪ್ರತಿನಿಧಿಸಿ ಬಲಪಡಿಸುವ ಒಬ್ಬ ಸಾಂಕೇತಿಕ ವ್ಯಕ್ತಿ ಆಗಿರುತ್ತಾನೆ ಹೊರತು, ನೇರವಾಗಿ ವಿಧಾನ ಸಭೆ ಅಭ್ಯರ್ಥಿಯಂತೆ ಕ್ಷೇತ್ರವನ್ನು ಪ್ರತಿನಿಧಿಸಲು ಅವನಿಂದ ಸಾಧ್ಯವಾಗುವುದಿಲ್ಲ. ದೇಶದ ವಿಷಯ ಎಂದರೆ ಅದು ತುಂಬಾ ವಿಶಾಲವಾಗಿದ್ದು ದೇಶ ಅಷ್ಟೇ ಅಲ್ಲ, ದೇಶದ ಗಡಿಗಳ ವ್ಯಾಪ್ತಿಯನ್ನು ಸಹ ವಿಸ್ತರಿಸಿ ಬೆಳೆದಿರುತ್ತದೆ. ಹೀಗಾಗಿ ಲೋಕಸಭಾ ಅಭ್ಯರ್ಥಿ ನೇರವಾಗಿ ಕ್ಷೇತ್ರದ ಜನರ ಕೈಗೆ ಎಟುಕುವಂತಹ ಅಥವಾ ಜನರು ತಮ್ಮ ಪ್ರತಿನಿಧಿಯ ಬಳಿ ಹೋಗಿ ತಮ್ಮ ಅಳಲನ್ನು ತೋಡಿಕೊಳ್ಳುವಂತಹ ಸಂದರ್ಭಗಳು ಇಲ್ಲಿ ತೀರ ಕಡಿಮೆ. ರಕ್ಷಣಾ ವ್ಯವಸ್ಥೆ, ಗಡಿ ಭದ್ರತೆ, ವಿದೇಶಾಂಗ ನೀತಿ, ಅಂತರಾಷ್ಟ್ರೀಯ ಒಪ್ಪಂದ, ಆಮದು ರಪ್ತು ನೀತಿ, ಪರಿಸರ, ಸಂಪನ್ಮೂಲ ಗಣಿಗಾರಿಕೆ ಹಣದ ಹರಿವು, ಬ್ಯಾಂಕಿಂಗ್, ನ್ಯಾಯಾಂಗ, ವ್ಯವಸ್ಥೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಹೆzರಿಗಳ ನಿರ್ವಹಣೆ, ರೈಲು, ವಿಮಾನಯಾನ, ಅಂತರಿಕ್ಷದ ಮೇಲೆ ನೋಟ ವೈeನಿಕ ಕ್ಷೇತ್ರದ ಬೆಳವಣಿಗೆ, ನೈಸರ್ಗಿಕ ವಿಪತ್ತುಗಳ ನಿರ್ವಹಣೆ ಹೀಗೆ ಒಂದೇ, ಎರಡೇ, ಸಾವಿರಾರು ವಿಷಯಗಳು ಲೋಕಸಭಾ ವ್ಯಾಪ್ತಿಯಲ್ಲಿ ಬರುತ್ತವೆ. ಹೀಗಾಗಿ ಲೋಕಸಭೆಗೆ ಮತದಾನ ಮಾಡುವಾಗ ಪ್ರತಿಯೊಬ್ಬ ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಯ ವಯಕ್ತಿಕ ವಿವರಗಳಿಗಿಂತ ಅವನು ಯಾರನ್ನು ಪ್ರತಿನಿಧಿಸುತ್ತಾನೆ ಎಂಬುದರ ಬಗ್ಗೆ ಗಮನಕೊಡಿ, ನಮಗೆ ನಮ್ಮ ಕ್ಷೇತ್ರದ ಅಭ್ಯರ್ಥಿಗಿಂತ ಅವನು ದೇಶವನ್ನು ಯಶಸ್ವಿಯಾಗಿ ಮುನ್ನೆಡುಸುವ ರಾಷ್ಟ್ರಪ್ರೇಮ ಹೊಂದಿರುವ ದೇಶ ವಿದೇಶಗಳಲ್ಲಿ ವರ್ಚಸ್ಸು ಹೊಂದಿರುವ ಧೀಮಂತ ನಾಯಕ ಹಾಗೂ ಮಂತ್ರಿ ಮಂಡಲವನ್ನು ಪ್ರತಿನಿಧಿಸುತ್ತಾನೋ ಇಲ್ಲವೋ ಎಂಬುದರ ಬಗ್ಗೆ ಖಾತ್ರಿ ಮಾಡಿಕೊಳ್ಳಿ, ಇಲ್ಲವಾದರೆ ನೀವು ಹಾಕಿದ ನಿಮ್ಮ ಅಮೂಲ್ಯವಾದ ಮತ ಸ್ವತಃ ನಿಮಗೆ ಮುಳ್ಳು,ಹಾಗೂ ದೇಶದ ತಲೆಯ ಮೇಲೆ ಎಳೆದ ಕಲ್ಲು ಚಪ್ಪಡಿಯಾದೀತು.
ನಿಮ್ಮ ಮತ ರಾಷ್ಟ್ರದ ಸ್ವಾಭಿಮಾನ, ಪ್ರತಿಷ್ಠೆಯನ್ನು ರಕ್ಷಿಸುವಂತಿರಲಿ ಒಂದು ಬಾರಿ ದೀರ್ಘವಾದ ಉಸಿರು ಎಳೆದುಕೊಂಡು ನೀವು ಹಾಕಿದ ಮತ ನಿಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಕಾಪಾಡಬಲ್ಲುದೇ, ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಿ. ದಯವಿಟ್ಟು ಅಭ್ಯರ್ಥಿಯು ನಮ್ಮ ಜತಿಯವನೇ ಧರ್ಮದವನೇ? ನಮ್ಮ ಊರಿನವನೇ? , ಚುನಾವಣೆಯ ನಂತರ ಮಾತನಾಡಲು ಸಿಗುವನೇ? ಹೀಗೆ ಅನಗತ್ಯ ವಿಷಯಗಳ ಬಗ್ಗೆ ಯೋಚಿಸಿ, ನಿಮ್ಮ ರಾಷ್ಟ್ರೀಯತೆಯನ್ನು ಕ್ಷುಲ್ಲಕ ವಿಚಾರಗಳಿಗೆ ಮಾತ್ರ ಬಲಿ ಕೊಡಬೇಡಿ.
ಕೋಳಿಗಳು ತಮ್ಮ ಹಿತ ಕಾಯಲು ನರಿಗಳನ್ನು ನೇಮಕ ಮಾಡಿಕೊಂಡಂತೆ ಆಗದಿರಲಿ ನಿಮ್ಮ ಮತದಾನ, ಓಟು ಒತ್ತುವ ಮೊದಲು ಒಂದಲ್ಲ ಹತ್ತು ಬಾರಿ ಯೋಚಿಸಿ, ಆ ನಂತರ ಪಶ್ಚಾತ್ಥಾಪ ಪಟ್ಟರೆ, ಯಾವುದೇ ಉಪಯೋಗ ಇಲ್ಲ.