ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಅಡಿಕೆ ಮಾರುಕಟ್ಟೆ ದರದ ಸ್ಥಿರತೆ ಬಗ್ಗೆ ಖೇಣಿದಾರರಲ್ಲಿ ಒಮ್ಮತ ಮೂಡಬೇಕಿದೆ…

Share Below Link

ಹೊನ್ನಾಳಿ : ಪ್ರಸ್ತುತ ದಿನಗಳಲ್ಲಿ ಅಡಿಕೆ ಖೇಣಿದಾರರು ಬಾರಿ ನಷ್ಟವನ್ನು ಅನುಭವಿಸುತ್ತಿದ್ದು ಇದಕ್ಕೆಲ್ಲ ಸೂಕ್ತವಾದ ಪರಿಹಾರ ಕಂಡು ಕೊಳ್ಳಬೇಕಿದೆ ಎಂದು ತರಗನಳ್ಳಿ ಮುರುಗೇಶ್ ಹೇಳಿದರು.
ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನ ದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಖೇಣಿದಾರರ ಸಮಿತಿ ರಚನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಲವನ್ನೇ ಮೋಹನ್ ಅವರು ಮಾತನಾಡಿ, ಒಣ ಅಡಿಕೆ ಗುಣಮಟ್ಟ ಕಾಯ್ದುಕೊಳ್ಳುವ ಗುಣಾತ್ಮಕ ಮಾರುಕಟ್ಟೆ ಸ್ಥಿರತೆ ಬಗ್ಗೆ ನಮ್ಮಲ್ಲಿ ಒಮ್ಮತ ಮೂಡಬೇಕಿದೆ ಎಂದರು.
ಅರಕೆರೆ ಮಧು ಗೌಡ ಮಾತನಾಡಿ, ಕೇಣಿದಾರರ ಪೂರ್ಣ ಪ್ರಮಾಣದ ಸಮಿತಿ ರಚಿಸಲು ಒಂದೆರಡು ತಿಂಗಳಲ್ಲಿ ದೊಡ್ಡ ಮಟ್ಟದ ಸಂಖ್ಯೆಯಲ್ಲಿ ಸಭೆ ಸೇರುವ ಮೂಲಕ ಅಡಿಕೆ ಕೇಳಿದಾರರ ಸೌಹಾರ್ದ ಸಹಕಾರ ಸಂಘವನ್ನು ಸ್ಥಾಪಿಸುವ ಇಚ್ಛೆ ವ್ಯಕ್ತಪಡಿಸಿದರು.
ಶಿವಮೊಗ್ಗದ ಲೋಹಿತ್, ಸವಳಂಗದ ಕರಿಬಸಪ್ಪ ಗೌಡ ಅವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾಸಡಿ ಗಜೇಂದ್ರಪ್ಪ ಹುಣಸಘಟ್ಟ ಗದಿಗೆಶ್, ದೊಡ್ಡೇರಿ ಗಿರೀಶ್, ಚನ್ನಗಿರಿ ವೀರಭದ್ರಪ್ಪ, ಬೆನಕನಹಳ್ಳಿ ಬಸಣ್ಣ, ಶಿವಣ್ಣ , ಕುಂದೂರು ಮಂಜುನಾಥ್ ಹಾಲೇಶ್ ಪಾಟೀಲ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *