ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಾಭಾರತದಲ್ಲಿ ಹೇಳದ ವಿಷಯಗಳೇ ಇಲ್ಲ…

Share Below Link

ಹೊಳೆಹೊನ್ನೂರು: ಶ್ರೀಮನ್ ಮಹಾ ಭಾರತ ಅತ್ಯಂತ ಶ್ರೇಷ್ಠವಾದ ಧರ್ಮಗ್ರಂಥ, ತತ್ವಶಾಸ್ತ್ರ, ಮೋಕ್ಷಶಾಸ್ತ್ರ, ಮಹಾಭಾರತವೂ ದೇವರ ಕಥೆಯೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ ೨೮ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಮಹಾಭಾರತ ತಾತ್ಪರ್ಯ ನಿರ್ಣಯದ ಸ್ವರ್ಗಾರೋಹಣ ಪರ್ವದ ಕುರಿತಾಗಿ ಅನುಗ್ರಹ ಸಂದೇಶ ನೀಡಿದರು.
ಧರ್ಮ, ಅರ್ಥ, ಮೋಕ್ಷ, ಕಾಮಗಳ ವಿಷಯದಲ್ಲಿ ಮಹಾಭಾರತದಲ್ಲಿ ಹೇಳದ ವಿಷಯಗಳೇ ಇಲ್ಲ. ಎಲ್ಲ ಪುರಾಣಗಳಿ ಗಿಂತಲೂ, ವೇದಗಳಿಗಿಂತಲೂ ಉತ್ತಮ ವಾದದ್ದು ಮಹಾಭಾರತ. ಭಗವಂತನಿಗೆ ಅತ್ಯಂತ ಪ್ರೀತಿಕರವಾದ ಗ್ರಂಥ. ಪರಮಾತ್ಮನಲ್ಲಿ ಭಕ್ತಿ, ವಿಷಯಗಳಲ್ಲಿ ವೈರಾಗ್ಯ ತಿಳಿಸುವ ಶ್ರೇಷ್ಠವಾದ ಗ್ರಂಥ ಮಹಾಭಾರತ ಎಂದರು.
ರಾಜರು ಬರೀ ಹೊಟ್ಟೆಗೆ, ಬಟ್ಟೆಗೆ ಕೊಟ್ಟರೆ ಸಾಲದು. ಜನರಲ್ಲಿ ಧರ್ಮ ಬುದ್ಧಿಯ ಶಿಕ್ಷಣವನ್ನು ಪ್ರಜೆಗಳಲ್ಲಿ ಮೂಡಿಸ ಬೇಕು. ಆಗ ಪ್ರಜೆಗಳು ಅನ್ಯಾಯ, ಮೋಸ, ವಂಚನೆ ಮಾಡೋದಿಲ್ಲ. ಅವರಲ್ಲಿ ನೈತಿಕತೆ ಜಗೃತಿಯಾಗುತ್ತದೆ, ವಿವೇಕಿಗಳಾಗುತ್ತಾರೆ. ಆಗ ರಾಜ್ಯ ಸುಭಿಕ್ಷವಾಗಿರುತ್ತದೆ ಎಂದರು.
eನಪೂರ್ವಕವಾದ ಕರ್ಮ ಮಾಡಿ :
ಮರಾಠಿಯಲ್ಲಿ ಪ್ರವಚನ ನೀಡಿದ ಪಂಡಿತ ಅಜಯಾಚಾರ್ಯ ಕುಲಕರ್ಣಿ, ದೇವರು ಕರ್ಮಗಳಿಗೆ ಅನುಸಾರವಾಗಿ ಫಲವನ್ನು ನೀಡುತ್ತಾನೆ. eನಪೂರ್ವಕ ವಾದ ಕರ್ಮಗಳನ್ನು ಮಾಡಿದಾಗ ದೇವರು ಪ್ರೀತನಾಗುತ್ತಾನೆ ಎಂದರು.
ಪಂಡಿತ ಸತ್ಯಾಧೀರಜಚಾರ್ಯ ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ಎನ್. ಕೃಷ್ಣಮೂರ್ತಿ ಅವರಿಂದ ರಚಿತವಾದ ತಂತ್ವಸಂಖ್ಯಾನ ಟೀಕಾ ಕನ್ನಡದ ವಿವರಣೆ ಎಂಬ ಪುಸ್ತಕದ ಮರುಮುದ್ರಣವನ್ನು ಶ್ರೀಪಾದಂಗಳವರು ಅನಾವರಣ ಗೊಳಿಸಿದರು.
ಶ್ರೀರಂಗದಿಂದ ರಂಗನಾಥ ದೇವರ ಪ್ರಸಾದ, ಭಾವಬೋಧ ಮುಖ್ಯಪ್ರಾಣ ದೇವರ ಪ್ರಸಾದ, ಚೆನ್ನೈನಿಂದ ಪಾರ್ಥ ಸಾರಥಿ, ನರಸಿಂಹ ದೇವರು, ವರದರಾಜ ದೇವರು, ಶ್ರೀ ಸತ್ಯಸಂಧ ತೀರ್ಥರ ಪ್ರತಿಷ್ಠಾಪಿತ ಮುಖ್ಯಪ್ರಾಣದೇವರ ಪ್ರಸಾದವನ್ನು ಶ್ರೀಪಾದಂಗಳಿಗೆ ಸಮರ್ಪಿಸಲಾಯಿತು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.
ರಂಗೋಲಿ ಹಾಗೂ ಕೃಷ್ಣವೇಷ ಸ್ಪರ್ಧೆ:
ಸುವರ್ಣ ಧರ್ಮ ಚಾತುರ್ಮಾಸ್ಯ ನಿಮಿತ್ತ ಸೆ.೬ರ ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಗ್ಗೆ ೧೧.೩೦ರಿಂದ ೧೨.೩೦ ರವರಿಗೆ ಸಭಾ ಮಂಟಪದ ಪಕ್ಕದಲ್ಲಿ ಇರುವ ಭೋಜನ ಶಾಲೆಯಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಯಿತು.
೧೦ರಿಂದ ೧೬ ವಯೋಮಿತಿಯವರಿಗೆ ಕಿರಿಯರ ವಿಭಾಗ, ೧೮ ವರ್ಷ ಮೇಲ್ಪಟ್ಟವರಿಗೆ ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಅದರೊಂದಿಗೆ ೫ ವರ್ಷ ವಯೋಮಿತಿಯ ಮಕ್ಕಳಿಗೆ ಕೃಷ್ಣ ರಾಧೆ ಯಶೋದೆಯ ಛದ್ಮವೇಷ ಸ್ಪರ್ಧೆಯನ್ನು ಮಧ್ಯಾಹ್ನ ೩ರಿಂದ ೪ರವರೆಗೆ ನಡೆಸಲಾಯಿತು. ಅಧಿಕ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು.