ಜಿಲ್ಲಾ ಸುದ್ದಿಲೇಖನಗಳು

ನೀನಲ್ಲದೆ ಮತ್ಯಾರು ಇಲ್ಲವಯ್ಯ :ನಾಟಕದ ಅನಿಸಿಕೆ…

Share Below Link

ವಿಶ್ವಗುರು ಬಸವಣ್ಣನವರ ತತ್ವವನ್ನು ಭಾರತದ ಎ ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಪ್ರಯತ್ನವೇ ನೀನಲ್ಲದೇ ಮತ್ಯಾರೂ ಇಲ್ಲವಯ್ಯ.
ಜಗತ್ತಿನಲ್ಲಿ ಅನೇಕ ಕ್ರಾಂತಿ ಗಳು ನಡೆದಿವೆ ಹೆಚ್ಚು ಕಡಿಮೆ ಎ ಕ್ರಾಂತಿಗಳು ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಕ್ರಾಂತಿ ಮಾಡಿದೆ. ಆದರೆ ೧೨ನೇ ಶತಮಾನದಲ್ಲಿ ಕ್ರಾಂತಿಯೋಗಿ ಯಾಗಿ ಉದಯಿಸಿದ ಬಸವಣ್ಣ ನವರು ರಾಜಕೀಯ ಸಾಮಾಜಿಕ ಧಾರ್ಮಿಕ ಬೌದ್ಧಿಕ ಆರ್ಥಿಕ ಹಾಗೂ ಭಾಷೆಯ ಕ್ರಾಂತಿಯನ್ನು ಮಾಡಿದರು. ದ್ರಾವಿಡ ಭಾಷೆ ಯಾದ ಕನ್ನಡ,ಸಂಸ್ಕೃತದ ಅನೇಕ ನುಡಿಗಳನ್ನು ತನ್ನೊಡನೆ ಸೇರಿಸಿ ಕೊಂಡು ಪ್ರಾಚೀನವಾದ ಅನೇಕ ಕೃತಿಗಳು ಕರುನಾಡಿನ ವಿಷಯ ಹೊಂದಿದ್ದರು ಸಂಸ್ಕೃತ ಭಾಷೆಯಲ್ಲಿ ಇತ್ತು.
ಆಗ ನಮ್ಮ ಕನ್ನಡದ ಭಾಷೆ ಯನ್ನು ಅತ್ಯಂತ ಪ್ರಬುದ್ಧವಾಗಿ ಉಪಯೋಗಿಸಿ ವಚನ ಸಾಹಿತ್ಯವನ್ನು ಸೃಷ್ಟಿ ಮಾಡಿದ ಮಹನೀಯರೆಂದರೆ ಶರಣರು. ಅಂತಹ ಶರಣ ಶ್ರೇಷ್ಠ ಬಸವಣ್ಣ ನವರು ಭಕ್ತಿ ಭಂಡಾರಿ eನ ಯೋಗಿ ಕ್ರಾಂತಿಕಾರಿ ವಿಶ್ವಗುರು ಎಂದು ಹೆಸರಾದವರು. ಕಲ್ಯಾಣ ದಲ್ಲಿ ಕ್ರಾಂತಿಯಾಗಿ ಬಸವಣ್ಣನವರ ದೇಹ ನಮ್ಮಿಂದ ಕಣ್ಮರೆಯಾದರೂ ಕೂಡ ಅವರು ಹಚ್ಚಿದ eನಜ್ಯೋತಿ ಕರ್ನಾಟಕದ ಎಲ್ಲ ಕಡೆ ವಚನ ಸಾಹಿತ್ಯ ರೂಪದಲ್ಲಿ ಹೊರ ಬಂತು. ಜತಿಯ ದಳ್ಳುರಿಗೆ ಸಿಕ್ಕಿದ ಭಾರತ ದೇಶದಲ್ಲಿ ಕರ್ನಾಟಕವೂ ಕೂಡ ಜತಿ ಕಾರಣದಿಂದ ಬೆಂದು ಹೋಗಿತ್ತು. ಇಂತಹ ವ್ಯವಸ್ಥೆಯಲ್ಲಿ ಕಲಚುರಿಗಳ ಬಿಜ್ಜಳನ ಆಸ್ಥಾನದ ಲ್ಲಿದ್ದ ಬಸವಣ್ಣನವರು ಮಂತ್ರಿ ಯಾಗಿ ಕಾರ್ಯನಿರ್ವಹಿ ಸುತ್ತಿದ್ದರು ಕೂಡ ತಾವು ಮೆಟ್ಟಿದ ಮಣ್ಣನ್ನು ಮರೆತಿರಲಿಲ್ಲ ಹಾಗಾಗಿ ತಮ್ಮ ತತ್ವ ನಿಷ್ಠೆಗಳಿಗಾಗಿ ದಲಿತನಾದ ಅಲ್ಲಮಪ್ರಭುವನ್ನು ಅನುಭವ ಮಂಟಪದ ಶೂನ್ಯಸಿಂಹಾಸನದಲ್ಲಿ ಕುಳ್ಳಿರಿಸಿ ಅವರ ಮುಖಾಂತರ ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಯನ್ನು ಮಾಡಿದರು. eನ ದಾಸೋಹ ಯಥೇಚ್ಛವಾಗಿ ನಡೆದು ಅನೇಕರು ಶರಣರಾಗಿ ವಚನಗಳಲ್ಲಿ ಹೊಸ ಚಿಂತನೆಯನು ಮೂಡಿಸಿದರು.


ಹೊಸ ಚಿಂತನೆಗಳನ್ನು ಅಳವಡಿಸಿಕೊಂಡ ಶರಣ ಪಂಥ ಹೊರಬಂದು ಲಿಂಗಾಯತ ಮತವಾಗಿ ಜತಿ ಕುಲ ಭೇದ ಮರೆತು ಗಂಡು-ಹೆಣ್ಣು ಬಡವ ಬಲ್ಲಿದ ಒಂದೇ ಎಂದು ತೂಗುವ ತಕ್ಕಡಿಯಲ್ಲಿ ಈ ಧರ್ಮ ಮುಂದುವರೆಯಿತು. ಇಂದಿಗೂ ಕರ್ನಾಟಕದಲ್ಲಿ ಬಸವನ ಅನುಯಾಯಿಗಳು ಹೆಚ್ಚಿದ್ದು ತಮ್ಮ ಕೈಲಾದ ಮಟ್ಟಿಗೆ ಅಕ್ಷರ ದಾಸೋಹ eನದಾಸೋಹ ಹೆಚ್ಚಿಸುವುದ ಕ್ಕಾಗಿ ನೂರಾರು ವಿರಕ್ತ ಮಠಗಳನ್ನು ತೆರೆದು ಹೊಸ ಬೆಳಕನ್ನು ಕರ್ನಾಟಕದಲ್ಲಿ ತಂದರು.
ಶೈವ ಧರ್ಮ ವೀರಶೈವ ಧರ್ಮ ಸಂಸ್ಕೃತದ ಮುಖಾಂತರ ತಮ್ಮ ಧಾರ್ಮಿಕ ಉಪನ್ಯಾಸ ಗಳನ್ನು ಹರಡುತ್ತಿದ್ದರೆ ಅಚ್ಚ ಕನ್ನಡದಲ್ಲಿ ಲಿಂಗಾಯತ ಧರ್ಮ ವಚನ ಪ್ರಭೆಯನ್ನು ಬೀರುತ್ತಿದೆ.
ಹೀಗೆ ಧರ್ಮದ ಜೊತೆ ಯಲ್ಲಿ ಸಾಹಿತ್ಯ ಸಾಂಸ್ಕೃತಿಕ ನಾಟಕದಂತಹ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸ ಬೇಕೆಂಬ ಸದುದ್ದೇಶದಿಂದ ಸಾಣೆ ಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಯವರು ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ ಗಳಿಂದ ಪ್ರೇರಿತರಾಗಿ ಸಂಚಾರಿ ನಾಟಕ ತಂಡ ಕಟ್ಟಿ ಕರ್ನಾಟಕದ ಉದ್ದಗಲಕ್ಕೂ ವಿಚಾರ ತಲುಪಿಸುತ್ತಿzರೆ. ಈ ಹಿಂದೆ ಕಬೀರ ಮೀರಾಬಾಯಿ ಬಸವಣ್ಣನವರಂತ ಕ್ರಾಂತಿಕಾರಿ ಗಳನ್ನು ನಾಟಕ ರೂಪದಲ್ಲಿ ತೋರಿಸಿ ವಚನ ಸಾಹಿತ್ಯವನ್ನು ಹರಡಿದ್ದರು. ಈಗ ವಚನ ಸಾಹಿತ್ಯವನ್ನು ದೇಶದಾದ್ಯಂತ ಹರಡುವುದಕ್ಕಾಗಿ ಹಿಂದಿ ಭಾಷೆಯಲ್ಲಿ ವಚನ ಅನುವಾದ ಮಾಡಿ ಆ ಮುಖಾಂತರ ಬಸವಣ್ಣನವರನ್ನು ಸಂಪೂರ್ಣ ಭಾರತಕ್ಕೆ ಪರಿಚಯ ಮಾಡುವ ಉದ್ದೇಶದಿಂದ ಈ ನೃತ್ಯ ರೂಪದ ನಾಟಕ ತಯಾರಾಗಿದೆ.
ಶಿವಮೊಗ್ಗದಲ್ಲಿ ಆ.೨೫ರಂದು ನಡೆದ ಪ್ರದರ್ಶನ ವಚನ ಸಾರವನ್ನು ಒಳಗೊಂಡಿದ್ದು, ಪ್ರಸಿದ್ಧ ಗಾಯಕ ಕೆ . ಯುವರಾಜ ರವರ ಹಾಡುಗಳಿಂದ ನಾಟಕ ನೋಡುತ್ತಿದ್ದಂತೆ ಅಭೂತಪೂರ್ವ ಅನುಭವ ನಮಗೆ ಸಿಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಟರುಗಳಲ್ಲಿ ಇಂಜಿನಿಯರ್ ಉಪನ್ಯಾಸಕರು ನೃತ್ಯ ಶಿಕ್ಷಕಿಯರು ಇದ್ದರು. ಎಂಟು ಜನರ ಮೂರು ತಂಡಗಳು ಕೆಂಪು ನೀಲಿ ಹಸಿರು ಬಣ್ಣಗಳಿಂದ ತುಂಬಿ ೨೪ ಜನರ ನೃತ್ಯ ವೈಭವ ಕಣ್ಣಿಗೆ ಮನಸ್ಸಿಗೆ ಸಂತೋಷ ನೆಮ್ಮದಿ ತಂದಿತು.
ನೃತ್ಯ ರೂಪದಲ್ಲಿ ನಾಟಕ ವನ್ನು ವಿಶ್ಲೇಷಿಸಿದರೆ ನಾಟಕ ಚೆನ್ನಾಗಿ ಮೂಡಿಬಂತು. ಶಿವಮೊಗ್ಗದಲ್ಲಿ ಅತ್ಯಂತ ಉತ್ತಮವಾದ ಭರತನಾಟ್ಯ ತಂಡಗಳಿದ್ದು ಅವರು ಕೂಡ ಮಹಿಷ ಮರ್ದಿನಿ ರಾಮಾಯಣ ಮಹಾಭಾರತದಂತಹ ರೂಪಕಗಳನ್ನು ನೃತ್ಯ ರೂಪದಲ್ಲಿ ಉತ್ತಮವಾಗಿ ಅಭಿನಯಿಸು ತ್ತಾರೆ. ಆದರೆ ಶಿವಸಂಚಾರ ತಂಡವು ಜನಪದದ ಕೆಲವು ನೃತ್ಯ ಕಂಸಾಳೆ ನಂದಿಕೋಲು ಅಳವಡಿಸಿ ಕೊಂಡಿದ್ದರಿಂದ ನಾಟಕ ಸುಂದರವಾಗಿ ಮೂಡಿಬಂತು. ಅದೇ ರೀತಿ ವಚನ ಸಾಹಿತ್ಯವನ್ನು ಉಪಯೋಗಿಸಿ ನಾಟಕವಾಡುವಾಗ ಕೆಲವು ಮುಖ್ಯ ಪಾತ್ರಗಳನ್ನು ಉದಾಹರಣೆಗೆ ಬಸವಣ್ಣ ಹರಳಯ್ಯ ಅಕ್ಕಮಹಾದೇವಿ ಪ್ರಭುದೇವರು ಗಂಗಾಂಬಿಕೆ ನೀಲಾಂಬಿಕೆಯರನ್ನ ಆಯಾ ಪಾತ್ರದ ಮೇಕಪ್ನಲ್ಲಿ ತೋರಿಸಿದ್ದರೆ ಕನ್ನಡಬಾರದವರಿಗೂ ಕೂಡ ಚೆನ್ನಾಗಿ ಅರ್ಥವಾಗಿ ನಾಟಕ ರೂಪಕ್ಕೆ ಹೊಸ ಹೊಳಪು ಸಿಗುತ್ತಿತ್ತು. ಒಟ್ಟಿನಲ್ಲಿ ಬಸವ ತತ್ವವನ್ನು ನೃತ್ಯರೂಪದಿಂದ ಭಾರತದ ಎಲ್ಲ ರಾಜ್ಯಗಳಲ್ಲಿ ಪ್ರದರ್ಶಿಸಿ ಸಮುದ್ರದ ಆಚೆ ಕೂಡ ಬಸವ ತತ್ವ ಹರಡಲಿ ಎಂದು ಹಾರೈಸುತ್ತೇನೆ. ನಿರ್ದೇಶನ ಮಾಡಿದ ಸ್ನೇಹ ಕಪ್ಪಣ್ಣ ನವರಿಗೆ ಅಭಿನಯಿಸಿದ ಎ ನಟರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಡಾ.ಕೆ.ಜಿ.ವೆಂಕಟೇಶ್ ಕ್ಷತ್ರಿಯ ಪಂಪನಗರ,
ಶಿವಮೊಗ್ಗ.