ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂಗಳು ಜಾತಿ -ಪಂಥ ಬದಿಗಿಟ್ಟು ಒಂದಾಗುವ ಅನಿವಾರ್ಯತೆ ಎದುರಾಗಿದೆ…

Share Below Link

ಶಿಕಾರಿಪುರ : ಹಿಂದೂ ಸಮಾಜ ಜಾತಿ, ಮತ, ಪಂಥದ ಸಂಕುಚಿತ ಭಾವನೆಯನ್ನು ತೊಡೆದು ಹಾಕಿ ಸಂಘಟನೆಯಾಗಬೇಕು. ಒಗ್ಗಟ್ಟಿನ ತುರ್ತು ಅನಿವಾರ್ಯತೆ ಎದುರಾಗಿದೆ. ಇದೀಗ ಸಮಾಜ ಜಾಗೃತವಾಗದಿದ್ದಲ್ಲಿ ಸಮಸ್ತ ದೇಶ, ಧರ್ಮಕ್ಕೆ ಅಪಾಯ ಎದುರಾಗುವುದು ನಿಶ್ಚಿತ ಎಂದು ಹಿಂದೂ ಜಾಗರಣಾ ವೇದಿಕೆ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಶ್ರೀಕಾಂತ್ ಶೆಟ್ಟಿ ಎಚ್ಚರಿಸಿದರು.
ಶಿಕಾರಿಪುರ ಜಾಗೃತ ನಾಗರೀಕ ವೇದಿಕೆ ವತಿಯಿಂದ ಜನಜಾಗೃತಿ ಸಭೆಯಲ್ಲಿ ಪ್ರಧಾನ ಬಾಷಣಕಾರ ರಾಗಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಜಿಲ್ಲೆಯು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದು, ವೀರಸಾವರ್ಕರ್ ಭಾವಚಿತ್ರಕ್ಕೆ ಅಪಮಾನ, ಹಿಜಾಬ್ ವಿರೋಧಿಸಿ ನಡೆದ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಗೋರಕ್ಷಕರ ವಿರುದ್ದ ಹಲ್ಲೆ, ಧಾರ್ಮಿಕ ಮೆರವಣಿಗೆಯಲ್ಲಿ ಚೂರಿ ಇರಿತ ಮತ್ತಿತರ ಘಟನೆ ಯಿಂದ ಗುರುತಿಸಿಕೊಳ್ಳುತ್ತಿರುವುದು ಅಪಾಯಕರ ಬೆಳವಣಿಗೆಯಾಗಿದೆ ಎಂದ ಅವರು ಶಿಕಾರಿಪುರ ತಾಲೂಕು ಸ್ವಾತಂತ್ರ ಹೋರಾಟಗಾರರ ಜನ್ಮಸ್ಥಳವಾಗಿದ್ದು ತಾಲೂಕಿನ ಈಸೂರು ಗ್ರಾಮ ಸ್ವಾತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದ ವೀರಭೂಮಿ ಎಂಬ ಹೆಗ್ಗಳಿಕೆ ಹೊಂದಿದೆ. ಇಂತಹ ಶ್ರೇಷ್ಟ ನೆಲದಲ್ಲಿ ಧರ್ಮ ದ್ರೋಹಿ, ದೇಶ ದ್ರೋಹಿಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಸ್ವಷ್ಟ ಸಂದೇಶವನ್ನು ಇದೀಗ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಹಿಂದೂ ಕಾರ್ಯಕರ್ತರಿಂದ ರವಾನಿಸುವ ಕಾರ್ಯವಾಗಿದೆ ಎಂದರು.
ಹಿಂದೂ ಧರ್ಮೀಯರಲ್ಲಿನ ಒಗ್ಗಟ್ಟಿನ ಕೊರತೆಯಿಂದ ಪಾಕಿಸ್ಥಾನ, ಬಲೂಚಿಸ್ಥಾನ ಮತ್ತಿತರ ಕಡೆಗಳಲ್ಲಿದ್ದ ಶೇ.೨೭ ಜನಸಂಖ್ಯೆ ಇದೀಗ ಶೇ ೦.೮ಕ್ಕೆ ಕುಸಿದಿದೆ ಕಾಶ್ಮೀರದಲ್ಲಿ ೫ ಲಕ್ಷ ಅಧಿಕ ಹಿಂದೂಗಳು ತೊರೆದು ಕೂಲಿಕಾರ್ಮಿಕರಾಗಿ ನಿರಾಶ್ರಿತರಾಗಿ ದ್ದಾರೆ. ಹಲವೆಡೆ ಒಗ್ಗಟ್ಟಿನ ಕೊರತೆಯಿಂದ ಹರಿದು ಹಂಚಿ ಹೋಗಿದ್ದು ಮತಾಂಧರು ವ್ಯವಸ್ಥಿತವಾಗಿ ಪ್ರಾಬಲ್ಯ ಮೆರೆಯುತ್ತಿದ್ದಾರೆ ಎಂದ ಅವರು ಹಿಂದೂ ಧರ್ಮೀಯರು ಜಾತಿ, ಮತ, ಧರ್ಮ, ಪಂಥ ಬೇಧವಿಲ್ಲದೆ ಒಗ್ಗಟ್ಟಿನ ಮೂಲಕ ಒಂದಾಗಬೇಕು ಎಂದು ಕರೆ ನೀಡಿದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಸಹಸಂಚಾಲಕ ಸತೀಶ್ ಮಾತನಾಡಿದರು. ಆರ್‌ಎಸ್‌ಎಸ್ ಜಿ ಕಾರ್ಯವಾಹ ಶ್ರೀಧರ್, ಹಿಂದೂ ಜಗರಣಾ ವೇದಿಕೆಯ ಜಿ ಸಂಚಾಲಕ ದೇವರಾಜ್ ಅರಳಿಹಳ್ಳಿ ಮುಖಂಡ ಕೆ ಎಸ್ ಗುರುಮೂರ್ತಿ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ,ಗಿರೀಶ್ ಧಾರವಾಡ, ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.