ಸಾರ್ವಜನಿಕರಲ್ಲಿ ಮಧುಮೇಹ ಕುರಿತು ಜಾಗೃತಿ ಮೂಡಿಸುವುದು ಅಗತ್ಯ…
ಶಿವಮೊಗ್ಗ : ಗ್ರಾಮೀಣ ಭಾಗದಲ್ಲಿ ಜನರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರು ಮನಸ್ಸು ಮಾಡಿದರೆ ಸಕ್ಕರೆ ಕಾಯಿಲೆ ಬಗೆಗೂ ಜನರಲ್ಲಿ ದೊಡ್ಡ ಜಗೃತಿ ಮೂಡಿಸಲು ಸಾಧ್ಯವಿದೆ ಎಂದು ಜಿ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ಜಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ವಿನ್ ಲೈಫ್ ಟ್ರಸ್ಟ್ ವತಿಯಿಂದ ಡಾ. ಪೃಥ್ವಿ ನೇತೃತ್ವದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಜಿಯ ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಮಧು ಮೇಹ ಮತ್ತು ತುರ್ತು ಜೀವ ರಕ್ಷಕ ಕುರಿತ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ಸಂದರ್ಭದಲ್ಲಿ ನಾನು ಚಿಕ್ಕಬಳ್ಳಾಪುರದಲ್ಲಿದೆ. ಆಗ ಆಶಾ ಕಾರ್ಯಕರ್ತೆಯರು ಜೀವ ಭಯ ತೊರೆದು ಮನೆ ಮನೆಗೆ ತೆರಳಿ ಕೊರೋನಾ ಬಗ್ಗೆ ಜಗೃತಿ ಮೂಡಿಸಿದ್ದು, ಕೊರೋನಾ ಬಂದ ಜನರ ಆರೈಕೆ ಮಾಡಿದ್ದನ್ನು ನಾನು ಕಣ್ಣಾರೆ ಕಂಡಿzನೆ. ಇದು ಚಿಕ್ಕಬಳ್ಳಾಪುರ ಮಾತ್ರವಲ್ಲ ಇಡೀ ದೇಶದಲ್ಲಿಯೇ ಅವರು ಅಪಾರವಾಗಿ ಸೇವೆ ಸಲ್ಲಿಸಿದ್ದನ್ನು ಶ್ಲಾಘಿಸಿದರು.
ಸಕ್ಕರೆ ಕಾಯಿಲೆ ನಮ್ಮ ಜೀವನ ಶೈಲಿಗೆ ಸಂಬಂಧಿಸಿದ ಕಾಯಿಲೆ. ಈಗ ಬದಲಾದ ನಮ್ಮ ಜೀವನಶೈಲಿಯ ಕಾರಣಕ್ಕೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಮಾಮೂಲು ಆಗಿದೆ. ಹಾಗಂತ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇದು ತುಂಬಾ ಅಪಾಯಕಾರಿ ಕಾಯಿಲೆ. ಅದಾಗ್ಯೂ ಇದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡರೆ ಯಾವುದೇ ಆತಂಕವಿಲ್ಲದೆ ಬದುಕುಬಹುದು ಎಂದ ಅವರು, ಅದಕ್ಕೆ ತಂದೆ ಯವರನ್ನೇ ಉದಾಹರಿಸಿದರು.
ಜಿ ರಕ್ಷಣಾಧಿಕಾರಿಗಳು ಕ್ಯೂಆರ್ ಸ್ಕ್ಯಾನ್ ಚಾಲನೆ ನೀಡಿದರು. ೧೨೦೦ಕ್ಕೂ ಹೆಚ್ಚ ಆಶಾ ಕಾರ್ಯಕರ್ತೆಯರಿದ್ದರು.
ಜಿ ಆರೋಗ್ಯಾಧಿಕಾರಿ ಡಾ. ಕೆ.ಎಸ್. ನಟರಾಜ್ ಮಾತನಾಡಿ, ಆರೋಗ್ಯ ಸುಧಾರಣೆಯಲ್ಲಿ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ. ಅವರಿಗೆ ಇಂತಹ ತರಬೇತಿ ಅಗತ್ಯವಾಗಿ ಬೇಕಾಗಿತ್ತು. ಆ ನಿಟ್ಟಿನಲ್ಲಿ ಮೆಟ್ರೋ ಆಸ್ಪತ್ರೆ ಹಾಗೂ ವಿನ್ ಲೈಫ್ ಮಧು ಮೇಹ ಮತ್ತು ಸಿಪಿಆರ್ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಶ್ಲಾಘನೀಯ ಎಂದರು.
ಮೆಟ್ರೋ ಆಸ್ಪತ್ರೆಯ ಡಾ. ಪಿ. ಲಕ್ಷ್ಮೀ ನಾರಾಯಣ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮೆಟ್ರೋ ಆಸ್ಪತ್ರೆಯ ಎಂ.ಡಿ. ಡಾ. ಪೃಥ್ವಿ ಬಿ.ಸಿ. ಗಣ್ಯರನ್ನು ಸ್ವಾಗತಿಸಿದರು. ಆರ್ ಸಿ ಹೆಚ್ ಡಾ. ಮಲ್ಲಪ್ಪ, ಜಿ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ಇದ್ದರು.