ಜಾತಿ -ಧರ್ಮಗಳ ಮೀರಿ ಒಳ್ಳೆಯ ಮನುಷ್ಯನನ್ನು ರಂಗಭೂಮಿ ಬೆಳೆಸುತ್ತದೆ…
ಶಿವಮೊಗ್ಗ : ರಂಗಭೂಮಿ ಒಳ್ಳೆಯ ಮನುಷ್ಯ ನನ್ನು ರೂಪಿಸುತ್ತದೆ ಎಂದು ರಂಗಕರ್ಮಿ, ಕಾಮಿಡಿ ಕಿಲಾಡಿ ಗಳು ಖ್ಯಾತಿಯ ನಟ ಚಂದ್ರಶೇಖರ ಹಿರೇಗೋಣಿಗೆರೆ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಸ್ಕ್ ಚಲುವರಂಗ ಅಭಿನಯ ಶಾಲೆ, ಸಹ್ಯಾದ್ರಿ ಕಲಾ ಕಾಲೇಜ್ ಆಶ್ರಯದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ರಂಗ ತರಬೇತಿ ಕಾರ್ಯಾಗಾರವನ್ನು ಜಂಬೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಅವಕಾಶದ ಜೊತೆಗೆ ಶಿಸ್ತು ಕಲಿಸುತ್ತದೆ. ಮನುಷ್ಯ ಮನುಷ್ಯನಾಗಿರಲು ಸಹಾಯಕವಾ ಗುತ್ತದೆ. ಮಾನವೀಯತೆಯೇ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ರಂಗಭೂಮಿ ಯಿಂದ ಒಳ್ಳೆಯತನ, ಮಾನಸಿಕ ಆರೋಗ್ಯ ಸಿಗುತ್ತದೆ. ಅಷ್ಟೇ ಅಲ್ಲ, ಧರ್ಮ, ಜತಿಗಳ ಮೀರಿ ಮನುಷ್ಯ ನನ್ನು ಬೆಳೆಸುತ್ತದೆ ಎಂದರು.
ನಟ ಪಾತ್ರದ ಮೂಲಕ ಗುರುತಿಸಿಕೊಳ್ಳಬೇಕು. ಅನೇಕ ಬಾರಿ ಪಾತ್ರ ಸೋಲಿಸಿ ನಟ ಗೆಲ್ಲುತ್ತಾನೆ. ಪಾತ್ರವೇ ಗೆದ್ದು ನಟನೂ ಸೋಲು ತ್ತಾನೆ. ರಂಗಭೂಮಿ ಇದೆಲ್ಲವನ್ನೂ ಕಲಿಸುತ್ತದೆ. ಸರಿಯಾದ ದಿಕ್ಕಿನತ್ತ ಸಾಗಿಸುತ್ತದೆ. ವರ್ತಮಾನದ ಸಂಗತಿಗಳಿಗೆ ಮುಖಾಮುಖಿ ಯಾಗುತ್ತದೆ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್ ಮಾತ ನಾಡಿ, ಪ್ರತಿಭೆಗಳ ಅನಾವರಣ ಗೊಳಿಸಲು ರಂಗಕ್ಷೇತ್ರ ಸಹಾಯಕ ವಾಗುತ್ತದೆ. ಕಾಲೇಜು ಗಳಲ್ಲಿ ಇಂತಹ ಶಿಬಿರಗಳು ಅವಶ್ಯಕ ವಾಗಿ ಬೇಕಾಗುತ್ತದೆ. ಆತ್ಮಸ್ಥೈರ್ಯ, ಆಸಕ್ತಿ, ಬದುಕನ್ನು ರೂಪಿಸುವ, ಆಸ್ವಾದಿಸುವ ಶಕ್ತಿಯನ್ನು ಇದು ನೀಡುತ್ತದೆ ಎಂದರು.
ಆಸ್ಕ್ ಚಲುವರಂಗದ ಸಂಸ್ಥಾಪಕ ಮತ್ತು ತರಬೇತಿದಾರ ಅಜಯ್ ನೀನಾಸಂ ಮಾತನಾಡಿ, ರಂಗಕ್ಷೇತ್ರ ಒಂದು ಅದ್ಭುತವಾದ ಕ್ಷೇತ್ರವಾಗಿದೆ. ಇದು ವಿದ್ಯಾರ್ಥಿ ಗಳಿಗೆ ಅತ್ಯಂತ ಉಪಯುಕ್ತ. ಆಳವಾಗಿ ಅಧ್ಯಯನ ಮಾಡಲು, ನೆನಪಿನ ಶಕ್ತಿ ಹೆಚ್ಚಿಸಲು ತನ್ನನ್ನು ತಾನು ಅರಿಯಲು ಇತರರನ್ನು ಗೌರವಿಸಲು ರಂಗಕ್ಷೇತ್ರ ಅನುಕೂಲ ವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉzಶದಿಂದ ಇಂತಹ ತರಬೇತಿಗಳನ್ನು ನಮ್ಮ ಸಂಸ್ಥೆ ಕಾಲೇಜುಗಳಲ್ಲಿ ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಸೈಯದ್ ಸನಾವು, ನಾಟಕ ವನ್ನು ಕಲೆಯನ್ನಾಗಿ ಉಳಿಸುವ ಪ್ರಯತ್ನವನ್ನು ಚಲುವರಂಗ ರಂಗ ಶಾಲೆಯವರು ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ಪಠ್ಯಗಳಲ್ಲಿ ಫಿಲಂ ಸ್ಟಡಿ ಅಧ್ಯಯನ ಕೂಡ ಮಾಡಬೇಕಾಗಿದೆ. ರಂಗ ಕಲೆಯ ಬಗ್ಗೆ ಅಭಿರುಚಿ ಮೂಡಿ ಸುವ ದೃಷ್ಟಿಯಿಂದ ಕುವೆಂಪು ವಿವಿ ಸಿನಿಮಾ ಅಧ್ಯಯನವನ್ನು ಒಂದು ವಿಷಯವನ್ನಾಗಿ ಬೋಧಿಸಲು ವಾತಾವರಣ ಕಲ್ಪಿಸಲು ಸಹ್ಯಾದ್ರಿ ಕಾಲೇಜಿನಿಂದ ಮನವಿ ಮಾಡಲಾ ಗಿದೆ ಎಂದರು. ಯೋಗೀಶ್ ನಿರೂಪಿಸಿದರು. ಅಭಿ ತಂಡದವರು ರಂಗಗೀತೆ ಹಾಡಿದರು.