ಯುವ ಸಮೂಹ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಬೇಕು…
ಶಿವಮೊಗ್ಗ : ಯುವಕರು ಮೊದಲು ದೇಶದ ಉತ್ತಮ ಹಾಗೂ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ನಾಗರಿಕ ಹಿತರಕ್ಷಣಾ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ ಕರೆ ನೀಡಿದರು.
ಅವರು ಇಂದು ನಗರದ ಸಿ.ಬಿ.ಆರ್. ರಾಷ್ಟ್ರಿಯ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಸಂಶೋಧನೆ ಮತ್ತು ಅಧ್ಯಯನ ಕೇಂದ್ರದಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಸಹಯೋಗ ದಲ್ಲಿ ಅಂತರ ರಾಷ್ಟ್ರೀಯ ಮಾನವ ಕರ್ತವ್ಯ ದಿನ ಮತ್ತು ಜೆಸಿಐ ಸಪ್ತಾಹದ ಅಂಗವಾಗಿ ಆಯೋಜಿ ಸಿದ್ದ ನಾಗರಿಕರ ಕರ್ತವ್ಯಗಳು ಮತ್ತು ಜಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಾಯಕನ ಕರ್ತವ್ಯಗಳು ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಿದರು.

ಜೆಸಿಐ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವ ಸಂಸ್ಥೆಯಾಗಿದ್ದು, ಬದ್ಧತೆ ಇರುವ ನಾಗರಿಕನು ಜಗತ್ತನ್ನು ಬದಲಿಸಬಲ್ಲ ಎಂಬ ಮಾತಿನಲ್ಲಿ ನಂಬಿಕೆ ಇಟ್ಟ ಸಂಸ್ಥೆಯಾಗಿದೆ. ಪ್ರತಿ ದೇಶವು ರಾಷ್ಟ್ರವಾಗಲು ಓರ್ವ ನಾಯಕನ ಅವಶ್ಯಕತೆ ಇರುತ್ತದೆ ಅಂಥಹ ನಾಯಕರ ಸಿದ್ಧಗೊಳಿಸುವಿಕೆಯಲ್ಲಿ ಜೆಸಿಐ ಕಾರ್ಯೋನ್ಮುಖವಾಗಿದೆ ಎಂದರು
ರಾಷ್ಟ್ರದ ಕಾನೂನನ್ನು ಪಾಲಿಸುವುದು, ತೆರಿಗೆ ಪಾವತಿಸು ವುದು, ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವುದು, ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವುದೂ ಸೇರಿದಂತೆ ಸಂಪನ್ಮೂಲಗಳನ್ನು ಜಗರೂಕತೆ ಯಿಂದ ಬಳಸುವುದು, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಗಮನ ನೀಡುವುದು ಪ್ರeವಂತ ನಾಗರಿಕನ ಜವಾಬ್ದಾರಿಯ ಜೊತೆಗೆ ನ್ಯಾಯಾಂಗ ಮತ್ತು ನ್ಯಾಯಾಧೀಶರ ರಕ್ಷಣೆಯೂ ನಾಗರಿಕನ ಜವಾಬ್ದಾರಿಯಾಗಿದೆ ಎಂದು ವಿವರಿಸಿದರು.
ಸಮುದಾಯದ ಸೇವೆ ಜೀವನದ ಅತ್ಯುತ್ತಮ ಕರ್ತವ್ಯ ಎಂದು ಭಾವಿಸುವುದರ ಜೊತೆಗೆ ರಾಷ್ಟ್ರದ ಮಲ್ಯ ಮತ್ತು ತತ್ವಗಳನ್ನು ಪಾಲಿಸುವ ಕರ್ತವ್ಯವೂ ಇದ್ದು ಭಾರತ ಸಂವಿಧಾನದ ೧೯೭೬ರ ೪೨ನೇ ತಿದ್ದುಪಡಿ ಕಾಯ್ದೆಯು ೧೦ ಮೂಲಭೂತ ಕರ್ತವ್ಯಗಳನ್ನು ಅಳವಡಿಸಿಕೊಂಡಿದ್ದು, ೨೦೦೨ರ ೮೬ನೇ ತಿದ್ದುಪಡಿ ಕಾಯ್ದೆತಕ್ಕು ೧೧ಬೇ ಮೂಲಭೂತ ಕರ್ತವ್ಯ ವನ್ನು ಅಳವಡಿಸಿಕೊಳ್ಳಲಾಗಿದೆ. ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಮಲ್ಯಗಳ ರಕ್ಷಣೆ ಜೊತೆ ಸಾರ್ವಜನಿಕ ಸ್ವತ್ತುಗಳ ರಕ್ಷಣೆಯ ಜವಾಬ್ದಾರಿಯೂ ನಾಗರಿಕನzಗಿದೆ ಎಂದು ಮಾಹಿತಿ ನೀಡಿದರು.
ನಂತರ ಸಪ್ತಾಹದ ಅಂಗವಾಗಿ ಪ್ರತಿeವಿಧಿ ಬೋಧಿಸಲಾಯಿತು. ಕಾಲೇಜಿನ ಪ್ರಾಚಾರ್ಯೆ ಡಾ. ಅನಲಾ ಅಧ್ಯಕ್ಷತೆ ವಹಿಸಿದ್ದರು. ಡಾ. ಕಾಂತರಾಜ್, ಡಾ.ಬಾಲಕೃಷ್ಣ ಹೆಗಡೆ, ಘನಶ್ಯಾಮ ಗಿರಿಮಾಜಿ, ಪ್ರಜ್ವಲ್ ಎಂ.ಆರ್. ಅನ್ನಪೂರ್ಣಾ ಮೊದಲಾದವರಿದ್ದರು.
