ಜಿಲ್ಲಾ ಸುದ್ದಿತಾಜಾ ಸುದ್ದಿ

ವೀರಶೈವ ಲಿಂಗಾಯತ ಮಠಗಳ ಕಾರ್ಯ ಶ್ಲಾಘನೀಯ: ಗುಳಗಣ್ಣನವರು

Share Below Link

ಕುಕನೂರ : ಈ ನಾಡಿನ ವೀರಶೈವ ಮಠಗಳು ಜಾತಿ ಮತ ಪಂಥವೆನ್ನದೆ ಸರ್ವ ಜನಾಂಗದ ಅಭಿವೃದ್ದಿಗಾಗಿ ಸೇವೆ ಸಲ್ಲಿಸುತ್ತೇವೆ ಎಂದು ಯುವ ಮುಖಂಡ ನವೀನ್ ಕುಮಾರ ಗುಳಗಣ್ಣನವರು ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ೧೦ ಜೋಡಿ ಸಾಮೂಹಿಕ ವಿವಾಹಗಳು, ಉಡಿ ತುಂಬುವ ಕಾರ್ಯಕ್ರಮ ಮತ್ತು ಅಯ್ಯಚಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನ ಮಠಗಳ ಕಾರ್ಯ ಶ್ಲಾಘನೀಯವಾದದ್ದು, ನಿರಂತರ ಅನ್ನದಾಸೋಹ eನದಾಸೋಹ ಮಾಡುತ್ತಾ ಬಡವರ ವಿವಾಹಗಳನ್ನ ಮಾಡುವ ಜೊತೆಗೆ ಬಡವರ ಕಲ್ಯಾಣದ ಕಾರ್ಯಕ್ಕೆ ಮುಂದಾಗಿವೆ ಮತ್ತು ಕುಕನೂರಿನ ಶ್ರೀಮಠವು ಕೂಡ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದರು.
ಯಲಬುರ್ಗಾ ಶ್ರೀ|ಷ|ಬ್ರ| ಬಸವಲಿಂಗೇಶ್ವರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿ, ಧರ್ಮದ ಕಾರ್ಯಗಳಿಗೆ ದಾನಿಗಳ ಸಹಕಾರ ಅವಶ್ಯ, ಕೊಡುವವರು ಇದ್ದರೆ ಮಾತ್ರ ದೊಡ್ಡ ದೊಡ್ಡ ಕಾರ್ಯಗಳನ್ನ ಮಾಡಲು ಸಾಧ್ಯ ಮತ್ತು ಅಕ್ಕನ ಬಳಗದ ಸದಸ್ಯರು ಒಗ್ಗಟ್ಟಾಗಿ ನಿಂತು ಇಂತಹ ಕಾರ್ಯ ಗಳಿಗೆ ಸೇವೆ ಮಾಡುತ್ತಿರುವುದು ಅತ್ಯಂತ್ಯ ಸಂತೋಷ ತಂದಿದೆ ಎಂದರು.
ಶ್ರೀ| ಮ| ನಿ| ಪ್ರ| ಡಾ| ಮಹಾದೇವ ಸ್ವಾಮೀಜಿ ಅವರು ಮಾತನಾಡಿ, ಮಳೆಯಲ್ಲೂ ಕೂಡ ಕಾರ್ಯಕ್ರಮ ಯಶಸ್ವಿಗೆ ದುಡಿದ ಶ್ರೀಮಠದ ಭಕ್ತರ ಸೇವೆ ವರ್ಣಿಸಲು ಅಸಾಧ್ಯ, ವೀಶೇಷವಾಗಿ ಅಡುಗೆ ತಯಾರು ಮಾಡಿದ ಅಡುಗೆ ಭಟ್ಟರಾದ ನಾಗರಾಜ ಚರಂತಿಮಠ ಮತ್ತು ಮಲ್ಲಯ್ಯ ಮುಳಗುಂದ ಮಠ ಅವರ ಸೇವೆ ಅನನ್ಯವಾದದ್ದು, ಸುರಿಯುವ ಮಳೆಯನ್ನ ಲೆಕ್ಕಿಸಿದೆ ಸಾವಿರಾರು ಜನರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದು ಮತ್ತು ಭಕ್ತರು ಒಳ್ಳೆಯ ಕಾರ್ಯಗಳಿಗೆ ಸೇವೆ ಮಾಡುವುದನ್ನ ಕಂಡಾಗ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ಪೂಜ್ಯ ಚಿದಾನಂದ ಮಹಾಸ್ವಾಮಿಗಳು ಹಿರೇಸಿಂದೋಗಿ, ಪೂಜ್ಯ ಪ್ರಭು ಸ್ವಾಮಿಗಳು ಕಂಪ್ಲಿ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಮಂಗಳೂರು, ವೀರಯ್ಯ ತೋಂಟದಾರ್ಯಮಠ, ಗದಿಗೆಪ್ಪ ಪವಾಡಶೆಟ್ಟಿ, ಕರಬಸಯ್ಯ ಬಿನ್ನಾಳ, ಸಿದ್ದಲಿಂಗಯ್ಯ ಬಂಡಿಮಠ, ಪ್ರಭು ಶಿವಸಿಂಪರ, ಮೇಘರಾಜ ಜಿಡಗಿ, ಪಪಂ ಸದಸ್ಯ ಪ್ರಶಾಂತ ಆರ್, ಮಂಜು ಮ್ಯಾದಾರ, ನಿಂಗಪ್ಪ ಗೋರ್ಲೆಕೊಪ್ಪ, ಪ್ರಕಾಶ ಶಾಸಿ ಬಂಡಿ, ಶರಣು ಗಂಗಾವತಿ, ವೀರಯ್ಯ ಉಳಾಗಡ್ಡಿಮಠ, ಮ್ಯಾಳಿ ಈರಪ್ಪ, ಚಂದ್ರು ಹಿರೇಮಠ, ನಿರ್ಮಲ ಕಳ್ಳಿಮಠ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಇದ್ದರು.