ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆ ಕಾಣೆಯಾಗಿದ್ದಾರೆ

Share Below Link

ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ ೩ನೇ ಕ್ರಾಸ್, ಕರುಮಾರಿಯಮ್ಮ ದೇವಸ್ಥಾನದ ಹತ್ತಿರದ ವಾಸಿ ರಮೇಶಪ್ಪ ಎಂಬುವವರ ಪತ್ನಿ ೩೦ ವರ್ಷದ ಅನಿತಾ ಎಂಬ ಮಹಿಳೆ ಜೂ.೧೫ ರಂದು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ.
ಈಕೆಯ ಚಹರೆ ೫.೦ ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ, ಸಾಧಾರಣಾ ಮೈಕಟ್ಟು ಹೊಂದಿದ್ದು, ಬಲಗೈನಲ್ಲಿ ನವಿಲುಗರಿ ಟ್ಯಾಟು ಇರುತ್ತದೆ. ಕನ್ನಡ ಭಾಷೆ ಮಾತ ನಾಡುತ್ತಾಳೆ. ಮೆರೂನ್ ಕಲರ್ ಟಾಪ್ ಮತ್ತು ಗೋಲ್ಡ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ.
ಈಕೆಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಶಿವಮೊಗ್ಗ, ಜಿ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ ೧೦೦, ದೂ.ಸಂ: ೦೮೧೮೨-೨೬೧೪೧೪ /೨೬೧೪೧೬ ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.