ಮಹಾನ್ ಶಿಕ್ಷಕ ಬೆಳೆದು ಬಂದ ದಾರಿ…
ಪರಿಚಯ : ಶಿಕ್ಷಕರಾಗಿದ್ದ ‘ಡಾ| ಸರ್ವಪಲ್ಲಿ ರಾಧಾಕೃಷ್ಣನ್ ೧೯೬೨ರಲ್ಲಿ ಭಾರತದ ರಾಷ್ಟ್ರಪತಿ ಯಾಗಿದ್ದರು. ಇವರು ಒಬ್ಬ ಶಿಕ್ಷಕ ರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.
ಜನನ/ ಬಾಲ್ಯ ಹಾಗೂ ವಿದ್ಯಾಭ್ಯಾಸ : ‘ಸರ್ವಪಲ್ಲಿ ರಾಧಾಕೃಷ್ಣನ್’ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ‘ತಿರುತ್ತಣಿ’ ಎಂಬಲ್ಲಿ ಸೆಪ್ಟೆಂಬರ್ ೫, ೧೮೮೮ರಲ್ಲಿ.(ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುತ್ರ ಸರ್ವಪಲ್ಲಿ ಗೋಪಾಲ್ ಅವರು ತಮ್ಮ ತಂದೆಯ ಬಗ್ಗೆ ಬರೆದ ಜೀವನ ಚರಿತ್ರೆಯಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಂಕ ೨೦-೦೯-೧೮೮೭ ಎಂದಿದೆ) ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ‘ರಾಧಾಕೃಷ್ಣನ್’ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ, ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟ ಪಡುವ ಸಂದರ್ಭದಲ್ಲಿ ‘ರಾಧಾಕೃಷ್ಣನ್’ಗೆ ಓದಬೇಕೆನ್ನುವ ಅಪಾರ ಹಂಬಲ!
‘ಸ್ಕಾಲರ್‌ಶಿಪ್ ಹಣ’ ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ನಲ್ಲಿ ‘ತತ್ವeನ’ ವಿಷಯದ ಮೇಲೆ ‘ಬಿ.ಎ’ ಮತ್ತು ‘ಎಂ.ಎ. ಪದವಿ’ಗಳನ್ನು ಪಡೆದು ಕೊಂಡರು.
‘ಸ್ನಾತಕೋತ್ತರ ಪದವಿ’ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ ‘ದಿ ಎಥಿಕ್ಸ್ ಆಫ್ ವೇದಾಂತ’ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ ‘ ಹಲವು ಬಗೆಯ ಸಿದ್ಧಾಂತಗಳು’, ‘ವೇದಾಂತ ವಿಚಾರಗಳು’ ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.
ವಿವಾಹ : ವೆಲ್ಲೂರಿನಲ್ಲಿರು ವಾಗಲೇ ಕೇವಲ ೧೬ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿ ಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಮಹಾ ಶಿಕ್ಷಕನಾಗಿ : ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವeನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವeನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು.
ರಾಧಾಕೃಷ್ಣನ್ ೧೯೧೮ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವeನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾ ದರು. ದೇಶ ವಿದೇಶಗಳ ವಿವಿಧ ತತ್ವeನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು ರಾಧಾಕ್ರಿಶ್ಣಯ್ಯಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.
ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ : ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ ‘ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಮತ್ತು ‘ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಎನ್ನುವ ಪುಸ್ತಕಗಳನ್ನು ಸಹ ಬರೆದಿzರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶ ಗಳಲ್ಲಿ ಮನೆ ಮಾತಾಗಿದ್ದರು. ಇವರ ತತ್ವeನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ‘ಧರ್ಮ ಮತ್ತು ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು.
ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವeನ ಕುರಿತು ವಿದೇಶಿಯರಿಗೆ ಮನ ಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಗಳು : ೧೯೩೧ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿ ಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. ೧೯೩೯ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು.
ಅಲ್ಲಿಯೂ ತಮ್ಮ ಅನುಭವ ವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು ೧೯೪೮ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ೧೯೪೯ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕ ಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
ಮೊಟ್ಟ ಮೊದಲ ಉಪರಾಷ್ಟ್ರಪತಿಯಾಗಿ : ೧೯೬೨ ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿ ಯಾಗಿ ನೇಮಕಗೊಂಡ ‘ರಾಧಾಕೃಷ್ಣನ್’, ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯು ತ್ತಿದ್ದರು. ‘ರಾಧಾಕೃಷ್ಣನ್’ ಅವರ ಅಪಾರ ಸೇ ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುzಯಲ್ಲಿದಾಗಲೇ ಅವರಿಗೆ ೧೯೫೪ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿತು.
ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವ ವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು.
ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ ‘ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್’ ಪುಸ್ತಕ ಬಿಡುಗಡೆಗೊಂಡಿತು. ‘ಡಾ. ರಾಜೇಂದ್ರ ಪ್ರಸಾದ್’ ನಂತರ, ೧೯೬೨ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ ‘ಡಾ.ರಾಧಾಕೃಷ್ಣನ್’ ಅವರಿಗೆ ಸಲ್ಲುತ್ತದೆ.
ಶಿಕ್ಷಕರ ದಿನಾಚರಣೆಯ ದಿನ : ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವeನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿzರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ ೫ ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಬಿರುದುಗಳು : ಬ್ರಿಟನ್ ಆಕ್ಸ್ ಫರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೨ ), ಅಮೇರಿಕ ಹಾರ್ವರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೩ ), ಲಂಡನ್ ಪ್ರವಾಸದಲ್ಲಿzಗ ಆರ್ಡರ್ ಆಫ್ ಮೆರಿನ್‌ಪ್ರಶಸ್ತಿ, ಕ್ರೈಸ್ತರ ಪರಮೋಚ್ಚ ವಿಶ್ವಗುರು ಪರಮಪೂಜ್ಯ ಪೋಪ್ ಜನ್‌ಪಾಲ್ ಅವರಿಂದ ನೈಟ್ ಆಫ್ ದ ಆರ್ಮಿ. ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ -೧೯೬೮ , ಭಾರತೀಯ ವಿದ್ಯಾಭವನ ಬ್ರಹ್ಮ ವಿದ್ಯಾ ಭಾಸ್ಕರ ಬಿರುದು, ಟೆಂಪಲ್ಟನ್‌ಪ್ರಶಸ್ತಿ ೧೯೭೩. ೧೯೫೪ ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ಗೌರವಗಳು ಸಂದಿವೆ.
ನಿಧನ : ತಮ್ಮ ‘ರಾಷ್ಟ್ರಪತಿ ಹುz’ಯ ಅಧಿಕಾರಾವಧಿ ಮುಗಿದ ನಂತರ ೧೯೬೭ರಲ್ಲಿ ತಮ್ಮ ‘ನಿವೃತ್ತಿ ಜೀವನ’ವನ್ನು ಮದ್ರಾಸಿನ ‘ಮೈಲಾಪುರ’ದಲ್ಲಿರುವ ತಮ್ಮ ಅಧಿಕೃತ ನಿವಾಸ ‘ಗಿರಿಜ’ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ರ ಏಪ್ರಿಲ್ ೧೭ ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.
- ಮುರುಳೀಧರ್ ಹೆಚ್.ಸಿ. ಪತ್ರಕರ್ತರು, ಶಿವಮೊಗ್ಗ.