ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಶ್ವಮಾನವ ಸಂದೇಶ ಮತ್ತು ಕನ್ನಡ ಭಾಷಾಭಿಮಾನ ಕುವೆಂಪು ಸಾಹಿತ್ಯದ ವಿಶೇಷತೆ….

Share Below Link

ಶಿವಮೊಗ್ಗ : ವಿಶ್ವಮಾನವ ಸಂದೇಶ, ವೈಚಾರಿಕತೆ ಮತ್ತು ಕನ್ನಡ ಭಾಷಾಭಿಮಾನ ಕುವೆಂಪುರವರ ಸಾಹಿತ್ಯದ ವಿಶೇಷತೆಯಾಗಿದೆ ಎಂದು ಜಿ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಬಣ್ಣಿಸಿದರು.
ತೀರ್ಥಹಳ್ಳಿ ಸಮೀಪದ ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ೧೨೧ನೇ ಜನ್ಮದಿನೋತ್ಸವದ ನಿಮಿತ್ತ ಆಚರಿಸಲಾಗುವ ವಿಶ್ವಮಾನದ ದಿನಾಚರಣೆಯಂದು ಖ್ಯಾತ ಕವಿಗಳಿಗೆ ನೀಡಲಾಗುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕನ್ನಡದ ಮೇರು ಕವಿ ಕುವೆಂಪು ರವರಿಗೆ ಹಾಗೂ ಹಿರಿಯ ನಟ ಡಾ ರಾಜಕುಮಾರ್ ಅವರಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್. ಬಂಗಾರಪ್ಪನವರು ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿಯಲ್ಲಿ ಪ್ರತಿ ವರ್ಷ ಸರ್ಕಾರದಿಂದ ನಡೆಸಲಾಗುತ್ತಿರುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನ ಇಚ್ಚಿಸಿದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿದ್ವತ್ ಜನರ ಸಮ್ಮುಖದಲ್ಲಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಆಚರಿಸಲು ಅಗತ್ಯವಿರುವ ಎ ರೀತಿಯ ಸಹಕಾರವನ್ನು ನೀಡಲಾಗುವುದು. ಕುವೆಂಪು ಅವರ ಸ್ಮರಣಾರ್ಥ ಏರ್ಪಡಿಸ ಲಾಗುವ ಎ ಕಾರ್ಯಕ್ರಮಗಳಿಗೆ ಆಡಳಿತಾರೂಢ ಸರ್ಕಾರಗಳು ಸಕಾಲಿಕವಾಗಿ ಸ್ಪಂದಿಸಿವೆ ಎಂದರು.
ಸಂಧ್ಯಾಕಾಲದಲ್ಲಿ ಮೈಸೂರಿನ ಲ್ಲಿದ್ದ ಕವಿ ಕುವೆಂಪು ಅವರು ತಮ್ಮ ಹುಟ್ಟೂರು ಹಿರೇಕೂಡಿಗೆಗೆ ಹೋಗುವ ಇಂಗಿತವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ| ಎಸ್. ಬಂಗಾರಪ್ಪ ಅವರಲ್ಲಿ ಅರುಹಿದರು. ಎಸ್.ಬಂಗಾರಪ್ಪ ಅವರು ಕೂಡಲೇ ವಿಶೇಷ ಹೆಲಿಕ್ಯಾಪ್ಟರ್ ಒಂದನ್ನು ಸಿದ್ಧಪಡಿಸಿ, ಹಿರೇಕೂಡಿಗೆಗೆ ಹೋಗಿಬರುವಂತೆ ಹಾಗೂ ತಮ್ಮ ಹೆಸರಿನಲ್ಲಿ ಶಂಕರಘಟ್ಟದಲ್ಲಿ ಆರಂಭಿಸಿರುವ ವಿಶ್ವವಿದ್ಯಾಲಯವನ್ನು ನೋಡಿಬರು ವಂತೆ ಮನವಿ ಮಾಡಿದ್ದರು ಎಂಬುದು ಕವಿಗಳ ಮೇಲೆ ಬಂಗಾರಪ್ಪ ಅವರಿಗೆ ಇದ್ದ ಕಾಳಜಿ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.


ಕುವೆಂಪು ಸಾಹಿತ್ಯದ ವಿಶೇಷ ಮಹತ್ವದ ಸಂಗತಿಗಳನ್ನು ಅವರ ಸಾಹಿತ್ಯ ಕೃತಿಗಳಲ್ಲಿ ಕಾಣಬಹು ದಾಗಿದೆ. ಕನ್ನಡ ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಮೊದಲ eನಪೀಠ ಹಾಗೂ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಮೂಲಕ ಕನ್ನಡಕ್ಕೆ ರಾಷ್ಟ್ರಕವಿ ಬಿರುದು ತಂದುಕೊಟ್ಟಿದ್ದು ಕುವೆಂಪು. ಅವರ ಅವಿರತ ಹಾಗೂ ಮಲಿಕ ಸಾಹಿತ್ಯಕೃಷಿಯಿಂದಾಗಿ ಕನ್ನಡ ಸಮೃದ್ಧ ಮತ್ತು ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ ಎಂದರು.
ಜಾತಿ, ಮತ, ಧರ್ಮ, ಭೇದಗಳಿಲ್ಲದ ಸರ್ವೋದಯದ ಮಾನವತಾವಾದವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದವರು ಕುವೆಂಪು. ಅವರ ‘ವಿಶ್ವಮಾನವ’ ಕಲ್ಪನೆ ಸರ್ವೋತ್ಕೃಷ್ಟವಾದುದು. ಅವರು ಸಾಮಾಜಿಕ ಮೂಢ ನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಮಲ್ಯಗಳನ್ನು ಮರು- ವ್ಯಾಖ್ಯಾನಿಸಲು ಪ್ರೇರೇಪಿಸಿದರು. ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ವಿದ್ದರೂ, ಕನ್ನಡತನವನ್ನು ಉಳಿಸಿದ ವರಲ್ಲಿ ಕುವೆಂಪು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು.
ಕುವೆಂಪುರವರ ಸಾಹಿತ್ಯವು ಆಧುನಿಕತೆ, ಮಾನವೀಯತೆ ಮತ್ತು ಕನ್ನಡದ ಭಾಷಾ ಸೌಂದರ್ಯದ ಮಹಾನ್ ಸಂಗಮವಾಗಿದೆ ಮಾತ್ರವಲ್ಲ ಕನ್ನಡ ಸಾಹಿತ್ಯವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದಿದೆ. ಇಂತಹ ಜಗದಕವಿ, ಯುಗದ ಕವಿ, ಕನ್ನಡದ ಮೇರುಕವಿ ಪುಟ್ಟಪ್ಪ ನವರು ಜನಿಸಿದ ನೆಲದಲ್ಲಿ ನಾವಿzವೆ ಎಂಬುದೇ ಸಂಭ್ರಮದ ಸಂಗತಿ ಎಂದರು.
ಕನ್ನಡ ಭಾಷೆಯ ಉಳಿವು- ವಿಕಾಸ, ಶಿಕ್ಷಣಕ್ಕೆ ಒತ್ತು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಪ್ರಸಕ್ತ ಆಡಳಿತಾರೂಢ ಸರ್ಕಾರ ಶಿಕ್ಷಣಕ್ಕಾಗಿ ಪ್ರತಿ ವರ್ಷ ೫೦೦೦೦ಕೋಟಿ ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದ ಅವರು, ೧ರಿಂದ ೧೦ನೇ ತರಗತಿ ಯವರೆಗಿನ ಎ ಪಠ್ಯಪುಸ್ತಕಗಳಲ್ಲಿ ಕುವೆಂಪು ವಿರಚಿತ ನಾಡಗೀತೆ ಯನ್ನು, ಗಾಂಧೀಜಿಯವರ ಸಪ್ತಪಾತಕಗಳು ಮತ್ತು ಧ್ಯಾನಸ್ಥ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ. ಅಂತೆಯೇ ಜಾತ್ಯಾತೀತ ಭಾವವನ್ನು ಪ್ರತಿಬಿಂಬಿಸುವ ಸಂವಿಧಾನದ ಪೀಠಿಕೆಯನ್ನು ಅಚ್ಚು ಹಾಕಿಸಲು ಉzಶಿಸಲಾಗಿದೆ ಎಂದರು.
ಪ್ರತಿಷ್ಟಾನದಿಂದ ನೀಡಲಾಗುವ ೨೦೨೫ರ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ ಬಾಜನರಾದ ಕೊಂಕಣಿ ಮತ್ತು ಮರಾಠಿ ದ್ವಿಭಾಷಾ ಕವಿ ಮಹಾಬಳೇಶ್ವರ ಸೈಲ್‌ಅವರು ಕೃತಜ್ಞತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸಿzನೆ. ಕುವೆಂಪು ಅವರು ಎಲ್ಲರಿಗೂ ಆದರ್ಶಪ್ರಾಯರಾಗಿ zರೆ. ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕವಾಗಿದೆ ಎಂದರು.
ಕುವೆಂಫು ನಾಡುನುಡಿಯನ್ನು ಪ್ರೀತಿಸಿದವರು, ಅವರ ಕೃತಿ ನಮ್ಮೆಲ್ಲರ ಕಿರೀಟಪ್ರಾಯವಾಗಿದೆ. ರಾಮಾಯಣ ಕೃತಿಯಲ್ಲಿ ಊರ್ಮಿಳೆಯ ಪಾತ್ರದ ಕುರಿತು ಕವಿ ಕುವೆಂಪು ಅವರು ವಿಶೇಷ ಬೆಳಕು ಚೆಲ್ಲಿzರೆ. ತಮ್ಮ ಸಾಹಿತ್ಯದ ಮೂಲಕ ಎಲ್ಲರಲ್ಲೂ ವಿಶ್ವಪ್ರೇಮ, ಪ್ರಕೃತಿ ಪ್ರೇಮವನ್ನು ಬೆಳೆಸಿzರೆ. ರಾಮಾಯಣ ದರ್ಶನಂ ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡಿತಿ ಅವು ಗದ್ಯಮಹಾಕಾವ್ಯಗಳೇ ಆಗಿವೆ. ಅವರ ವೈಚಾರಿಕ ನಿಲುವು ನಮಗೆ ಲ್ಲರಿಗೂ ಜೀವನ ವಿಧಾನಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುವೆಂಪು ಪ್ರತಿಷ್ಟಾನದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಕವಿಶೈಲ, ಕುಪ್ಪಳಿಯ ವಿಕಾಸಕ್ಕೆ ಮಾಜಿ ಮುಖ್ಯಮಂತ್ರಿ ದಿ| ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ. ವರ್ಷಕ್ಕೆ ಮೂರ್ನಾಲ್ಕು ಲಕ್ಷ ಜನ ಭೇಟಿ ನೀಡುವ ಪ್ರವಾಸಿ ತಾಣವಾಗಿ ಕವಿಮನೆ ಪ್ರಸಿದ್ಧಿ ಪಡೆದಿದೆ. ಪೂರ್ಣಚಂದ್ರ ತೇಜಸ್ವಿ ಯವರ ಸಲಹೆಯಂತೆ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರು ಕವಿಮನೆಯ ಸುತ್ತಮುತ್ತಲ ಪ್ರದೇಶವನ್ನು ಕುವೆಂಪು ಜೈವಿಕ ಅರಣ್ಯ ಪ್ರದೇಶ ಎಂದು ಘೋಷಿಸಿದರು. ಈ ಸ್ಥಳ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತದಂತೆ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂದರು.


ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಲು ಉzಶಿಸಿರುವ ಕುವೆಂಪು ಕಲಾಕ್ಷೇತ್ರದ ನಿರ್ಮಾಣಕ್ಕೆ ಅನೇಕ ಜನ ದಾನಿಗಳು ಮುಂದಾಗಿzರೆ. ಆದಾಗ್ಯೂ ಇನ್ನೂ ೮-೯ಕೋಟಿ. ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರದಿಂದ ಬಿಡುಗಡೆ ಗೊಳಿಸಲು ಸಹಕಾರ ನೀಡಬೇಕು. ಕುವೆಂಪು ವಿರಚಿತ ನಾಡಗೀತೆ ಯನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಬೇಕು. ರಾಜ್ಯದ ಎ ವಿಶ್ವವಿದ್ಯಾನಿಲಯ ಗಳಲ್ಲಿ ಕುವೆಂಪು ಸಾಹಿತ್ಯದ ಕುರಿತು ಚರ್ಚೆ, ಕಮ್ಮಟಗಳು, ಪ್ರಬಂಧ ಸ್ಪರ್ಧೆಗಳು ನಡೆಯುವಂತಾಗ ಬೇಕೆಂದವರು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಆರಗ eನೇಂದ್ರ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶಯದಂತೆ ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡ ಲಾಗಿದೆ. ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ನೀಡಿದ ಮಾನವೀಯತೆಯ ಸಂದೇಶ ಎಲ್ಲರಿಗೂ ಎ ಕಾಲಕ್ಕೂ ಪ್ರೇರಣದಾಯಿಯಾಗಿದೆ ಎಂದರು.
ಜಾತಿ ಇಂದು ಎ ನಾಯಕರ ಊರುಗೋಲಾಗಿದೆ. ತತ್ವ ಸಿದ್ಧಾಂತಗಳ ಬದಲಾಗಿ ಜಾತಿ ವ್ಯವಸ್ಥೆ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕುವೆಂಪು ಅವರ ಸಾಹಿತ್ಯವನ್ನು ಅರಿತು ನಡೆಯುವ ಅಗತ್ಯವಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಷ್ ಬಾನು ಅವರು ಕುವೆಂಪು ಕೃತಿ ಬೊಮ್ಮನಹಳ್ಳಿಯ ಕಿಂದರಿಜೋಗಿ ಕೃತಿ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೃತಿಯಿಂದಾದ ಭಾಗಗಳ ಚಿತ್ರಗಳನ್ನು ಮುದ್ರಿಸಿದ ೨೦೨೬ರ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕುವೆಂಪು ವಿವಿ ಕುಲಪತಿ ಡಾ. ಶರತ್ ಅನಂತಮೂರ್ತಿ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ರಾಷ್ಟ್ರಕವಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ, ದೇವಂಗಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗಿರಿಜಾ ಕುಮಾರ್, ಸದಸ್ಯರಾದ ಶ್ರೀಮತಿ ಹೆಚ್.ಪಿ. ಸರೋಜ, ನಾಗರಾಜ ಟಿ.ಎಸ್., ಪ್ರತಿಷ್ಟಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸೇರಿದಂತೆ ನಾಡಿನ ಹಿರಿಯ ಕವಿ-ಕಲಾವಿದರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.