ಜಿಲ್ಲಾ ಸುದ್ದಿತಾಜಾ ಸುದ್ದಿ

ಸಂವಿಧಾನವನ್ನು ಅಂತರ್ಗತಮಾಡಿಕೊಳ್ಳುವುದೇ ನಿಜವಾದ ಅಂಬೇಡ್ಕಾರವಾದ…

Share Below Link

ಶಂಕರಘಟ್ಟ : ಬಹುತೇಕ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಅವರ ಅಮಲನ್ನೇರಿಸಿ ಕೊಂಡಿಸಿzರೆ. ಆದರೆ ಭಾರತದ ಸಮಕಾಲೀನ ಸಂದರ್ಭಕ್ಕೆ ಅಗತ್ಯ ವಾಗಿರುವುದು ಅಂಬೇಡ್ಕರ್ ಅರಿವು. ಭಾರತೀಯ ಸಂವಿಧಾನ ವನ್ನು ಅಂತರ್ಗತ ಮಾಡಿಕೊಳ್ಳು ವುದೇ ಬಾಬಾ ಸಾಹೇಬರಿಗೆ ಸಲ್ಲಿಸಲಾಗುವ ನಿಜವಾದ ಗೌರವ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಮತ್ತು ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಪ್ರಾರಂಭವಾದ ಕನ್ನಡ ಸಂಸ್ಕೃತಿ ಮತ್ತು ಅಂಬೇಡ್ಕರ್ ಚಿಂತನೆಗಳು ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ಭಾರತ ದೇಶವನ್ನು ತಿಳಿಯುವುದೆಂದರೆ, ದೇಶದ ಇತಿಹಾಸ, ಧರ್ಮ, ಜತಿಗಳು, ಆರ್ಥಿಕ- ಸಾಮಾಜಿಕ ಸಂಬಂಧ ಗಳು, ಮಲ್ಯಗಳು, ಸಂಸ್ಕೃತಿ, ಭಾಷೆಗಳನ್ನು ಅರ್ಥೈಸಿಕೊಳ್ಳುವುದು. ಇವೆಲ್ಲವುಗಳನ್ನು ಒಳಗೊಂಡ ಸಂವಿಧಾನದ ಅರಿವು ದೇಶದ ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯಕ.
ಭಾರತದಲ್ಲಿ ಸುಮಾರು ೪೬೩೫ ಜತಿಗಳಿವೆ. ವಿವಿಧ ಜತಿ ಧರ್ಮ ಗಳಿವೆ. ಬುಡಕಟ್ಟು ಸಮುದಾಯ ಗಳಿವೆ. ಎಲ್ಲವೂ ಒಂದರೊಳ ಗೊಂದು ಸಮ್ಮಿಳಿತವಾಗಿವೆ. ದೇಶದಲ್ಲಿರುವ ಸುಮಾರು ೬೫೦೦ಕ್ಕೂ ಹೆಚ್ಚು ಹಳ್ಳಿಗಳು ಪ್ರತ್ಯೇಕ ಗಣರಾಜ್ಯಗಳಾಗಿವೆ. ಇಂಥಹಾ ಸಂಕೀರ್ಣ ಸಾಮಾಜಿಕ ಸಂದರ್ಭ ದಲ್ಲಿ ಜಗತೀಕರಣ ಮತ್ತು ಉದಾರೀಕರಣ ಅನುಷ್ಠಾನ ಗೊಂಡಿದ್ದು, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ ನಿರ್ಲಕ್ಷಿಸಲಾಗಿದೆ. ದೇಶದ ವಿವಿಧ ಸಮುದಾಯಗಳ ನಡುವೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆ ಈಗಲೂ ಮುಂದುವರೆದಿದೆ. ಬುದ್ದನ ದಮ್ಮಮಾರ್ಗ, ಬಸವಣ್ಣನ ಸಮಾನತೆಯ ಮಾರ್ಗ, ಗಾಂಧೀಜಿ ಅವರ ಅಹಿಂಸಾ ಮಾರ್ಗ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮಾರ್ಗ ಸಂವಿಧಾನದ ಮೂಲ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.


ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ. ಎಲ್. ಮಂಜುನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಾಬೀರ್ ಅಹ್ಮದ್ ಮು, ಡಾ. ಸಿ. ಜಿ. ಲಕ್ಷ್ಮೀಪತಿ,ಡಾ. ಸಬಿತಾ ಬನ್ನಾಡಿ, ಡಾ. ನೆಲ್ಲಿಕಟ್ಟೆ ಸಿzಶ್, ಡಾ. ಎಸ್. ಎಂ. ಮುತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.