ಶಿವಮೊಗ್ಗದ ಮನೆ ಮನೆಯಲ್ಲೀಗ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಸಿಹಿಯ ಪರಂಪರೆ…
ವಿಶೇಷ ಲೇಖನ: ರಾಕೇಶ್ ಡಿಸೋಜ – ಮೊ: 9448343211
ಪರಿಶುದ್ಧ ತುಪ್ಪದ ಸುವಾಸನೆ ಯೊಂದಿಗೆ, ರುಚಿ, ಗುಣಮಟ್ಟ, ಪಾರಂಪರ್ಯಕ್ಕೆ ಸಮಾನಾರ್ಥಕ ವಾಗಿರುವ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಿಂದ ನೇರವಾಗಿ ಮಲೆನಾಡಿನ ಹೆಮ್ಮೆಯ ಶಿವಮೊಗ್ಗಕ್ಕೆ ತನ್ನ ಸಿಹಿ ಪಯಣವನ್ನು ವಿಸ್ತರಿಸಿದೆ.
ರಾಜ್ಯದಾದ್ಯಂತ ತಾಜಾ ಹಾಗೂ ಶುದ್ಧ ಸಿಹಿ ತಿನಿಸುಗಳಿಗೆ ಅಪಾರ ಹೆಸರುವಾಸಿಯಾಗಿರುವ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಕರುನಾಡಿನ ಜನತೆಯ ಮನೆ- ಮನಸ್ಸು ಗೆದ್ದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅದೇ ನಂಬಿಕೆ, ಅದೇ ರುಚಿ ಮತ್ತು ಅದೇ ಶುದ್ಧತೆಯನ್ನು ಮುಂದುವರೆಸುತ್ತಾ, ಶಿವಮೊಗ್ಗ ನಗರದ ಹೃದಯ ಭಾಗವಾದ ನೆಹರೂ ರಸ್ತೆಯಲ್ಲಿ ತನ್ನ ೪೮ನೇ ಶಾಖೆಯನ್ನು ಭರ್ಜರಿಯಾಗಿ ಇಂದು ಶುಭಾರಂಭಿಸುತ್ತಿದೆ.
ಸಿಹಿ ತಿನಿಸು ಎಂದರೆ ಕೇವಲ ನಾಲಿಗೆಯ ರುಚಿಯಲ್ಲ, ಅದು ಸಂಭ್ರಮದ ಅನುಭವ. ಇಂತಹ ಸಂಭ್ರಮದ ಸಿಹಿ ಪರಂಪರೆಯನ್ನು ಮೂರು ದಶಕಗಳಿಗೂ ಅಧಿಕ ಕಾಲದಿಂದ ನಿರಂತರವಾಗಿ ಉಳಿಸಿ ಕೊಂಡಿರುವ ಮೈಸೂರಿನ ಸುಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಇದೀಗ ಶಿವಮೊಗ್ಗ ನಗರಕ್ಕೆ ಕಾಲಿಟ್ಟು ಸಿಹಿ ಪ್ರಿಯರ ಮನ ಗೆಲ್ಲಲು ಸಜ್ಜಾಗಿದೆ.

೧೯೯೧ರಲ್ಲಿ ಮೈಸೂರಿನ ಮಣ್ಣಿನಲ್ಲಿ ಮೊಳಕೆಯೊಡೆದ ಈ ಸಂಸ್ಥೆ, ಆರಂಭದಿಂದಲೂ ಗುಣಮಟ್ಟವೇ ಪ್ರಥಮ ಆದ್ಯತೆ ಎಂಬ ತತ್ವವನ್ನು ಅಪ್ಪಿಕೊಂಡು, ಗುಣಮಟ್ಟದ ನಂಬಿಕೆ ಎಂಬ ಮಲ್ಯವನ್ನು ಇಟ್ಟುಕೊಂಡು ಸಾಗುತ್ತಿದೆ. ಕೃತಕ ವಸ್ತುಗಳಿಗೆ ಇಲ್ಲಿ ಜಾಗವಿಲ್ಲ, ರಾಸಾಯನಿಕ ರುಚಿಕಾರಕಗಳಿಗೆ ಪ್ರವೇಶವಿಲ್ಲ. ಪರಿಶುದ್ಧ ತುಪ್ಪ, ಆಯ್ದ ಪದಾರ್ಥಗಳು ಹಾಗೂ ಪರಂಪರ ವಿಧಾನಗಳೇ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್‌ನ ಶಕ್ತಿ. ಇದೇ ಕಾರಣಕ್ಕೆ ಇಲ್ಲಿನ ಸಿಹಿ ತಿನಿಸುಗಳು ಮಕ್ಕಳಿಂದ ಹಿಡಿದು ಹಿರಿಯರತನಕ ಎಲ್ಲರ ಮನ ಗೆದ್ದಿವೆ. ಎಂದಿನಂತೆ ಅಮ್ಮನ ಕೈಚುರಿಯುಳ್ಳ ಪರಿಶುದ್ಧ ತುಪ್ಪ, ಆಯ್ದ ಕಚ್ಚಾ ಪದಾರ್ಥಗಳು ಮತ್ತು ಪರಂಪರ ತಯಾರಿಕಾ ವಿಧಾನಗಳು ಸಂಸ್ಥೆಯನ್ನು ಸಿಹಿ ತಿನಿಸುಗಳ ಲೋಕದಲ್ಲಿ ವಿಭಿನ್ನ ಸ್ಥಾನಕ್ಕೆ ಕೊಂಡೊಯ್ದಿವೆ.
ಇಲ್ಲಿನ ಮೈಸೂರು ಪಾಕ್, ಕಾಜು ಕಟ್ಲಿ, ಲಡ್ಡುಗಳು, ಮಿಲ್ಕ್ ಸ್ವೀಟ್ಸ್ ಹಾಗೂ ಸಾಂಪ್ರದಾಯಿಕ ತಿನಿಸುಗಳು ಮನೆಯಲ್ಲಿ ಅಮ್ಮ ತಯಾರಿಸಿದಂತೆ ಶುದ್ಧವಾಗಿದ್ದು, ತಿನ್ನುವವರನ್ನು ಬಾಲ್ಯದ ಸಿಹಿ ನೆನಪುಗಳತ್ತ ಕರೆದೊಯ್ಯುತ್ತವೆ. ಇದೇ ಶ್ರೀ ಮಹಾಲಕ್ಷಿ ಸ್ವೀಟ್ಸ್‌ನ ಹೆಗ್ಗುರುತು.
ಇಂತಹ ವಿಶ್ವಾಸದ ಬ್ರಾಂಡ್ ಇದೀಗ ಮಲೆನಾಡಿನ ಹೃದಯ ಭಾಗಕ್ಕೆ ಕಾಲಿಟ್ಟಿದ್ದು, ಡಿ.೨೨ರ ಇಂದಿನಿಂದ (ಸೋಮವಾರ) ಶಿವಮೊಗ್ಗದ ಹೃದಯ ಭಾಗವಾದ ನೆಹರೂ ರಸ್ತೆಯ ಸುಸಜ್ಜಿತ ಹವಾನಿಯಂತ್ರಿತ ಮಳಿಗೆಯಲ್ಲಿ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್‌ನ ೪೮ನೇ ಶಾಖೆ ಶುಭಾಂಭವಾಗುತ್ತಿರುವುದು ಸಿಹಿ ಪ್ರಿಯರಿಗೆ ದೊರೆತಿರುವ ವಿಶೇಷ ಉಡುಗೊರೆ. ವ್ಯಾಪಾರ ಮಾತ್ರವಲ್ಲ, ಗ್ರಾಹಕರೊಂದಿಗೆ ಭಾವನಾತ್ಮಕ ಸಂಬಂಧ ಕಟ್ಟಿಕೊಂಡು ಬೆಳೆದ ಸಂಸ್ಥೆಯೊಂದು ಮಲೆನಾಡಿನ ಹೆಬ್ಬಾಗಿಲಿಗೆ ಬಂದಿರುವುದು ಸ್ಥಳೀಯರಿಗೆ ಮತ್ತೊಂದು ಹೆಮ್ಮೆ. ಈ ರೀತಿಯಲ್ಲಿ ಗ್ರಾಹಕರ ವಿಶ್ವಾಸವನ್ನೇ ಬಂಡವಾಳವಾಗಿಸಿಕೊಂಡು ಬೆಳೆಯುತ್ತಿರುವ ಸಂಸ್ಥೆಯೊಂದು ಶಿವಮೊಗ್ಗ ನಗರ ಪ್ರವೇಶಿಸಿರುವುದು ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದ್ದು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಹಬ್ಬಗಳು, ಮದುವೆಗಳು, ಶುಭ ಸಮಾರಂಭಗಳು ಎಂದರೆ ಶ್ರೀ ಮಹಾಲಕ್ಷಿ ಸ್ವೀಟ್ಸ್ ಸಿಹಿ ತಿನಿಸುಗಳು ಅನಿವಾರ್ಯ. ಒಮ್ಮೆ ಸವಿದರೆ ಮರೆಯಲಾಗದ ರುಚಿ ಎಂಬ ಮಾತಿಗೆ ಸಾಕ್ಷಿಯಾಗಿರುವ ಈ ಸಂಸ್ಥೆ, ಮುಂದಿನ ದಿನಗಳಲ್ಲಿ ಶಿವಮೊಗ್ಗದ ಮನೆಮಾತಾಗಲಿದೆ ಎಂಬ ವಿಶ್ವಾಸ ಮೂಡಿಸಿದೆ.
ಪರಿಶುದ್ಧ ತುಪ್ಪದ ರುಚಿ, ಪರಂಪರೆಯ ಶುದ್ಧತೆ ಮತ್ತು ೩೪ ವರ್ಷಗಳ ವಿಶ್ವಾಸ ಈ ಮೂರು ಅಂಶಗಳ ಸಂಗಮವೇ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್. ಸಿಹಿಯೊಂದಿಗೆ ಸಂತಸ ಹಂಚುವ ಈ ಸಂಸ್ಥೆ ಶಿವಮೊಗ್ಗದ ಸಿಹಿ ಸಂಸ್ಕೃತಿಗೆ ಹೊಸ ಅಧ್ಯಾಯ ಸೇರಿಸುತ್ತಿದೆ.
ಇದೀಗ ಶಿವಮೊಗ್ಗೆಯ ಹೃದಯವಂತ ಜನತೆಗೆ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಹಾರ್ದಿಕ ಸ್ವಾಗತ ಕೋರುತ್ತಿದ್ದು, ಕುಟುಂಬ ಸಮೇತರಾಗಿ ಬಂದು ನೈಜ ಸಿಹಿ ತಿನಿಸುಗಳ ಸವಿಯನ್ನು ಅನುಭವಿಸುವಂತೆ ಆಹ್ವಾನ ನೀಡುತ್ತಿದೆ. ನಗರಕ್ಕೆ ಹೊಸ ಉತ್ಸಾಹ, ಹೊಸ ರುಚಿ ಮತ್ತು ಹೊಸ ಸಿಹಿ ಸಂಭ್ರಮವನ್ನು ತಂದಿರುವ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್‌ನ ಈ ನೂತನ ಶಾಖೆ, ಶಿವಮೊಗ್ಗದ ಜನತೆಯ ಪ್ರೀತಿಗೆ ಪಾತ್ರವಾಗಲಿದೆ ಎಂಬ ವಿಶ್ವಾಸ ಸಂಸ್ಥೆಗೆ ಇದೆ. ಬನ್ನಿ, ಸಿಹಿಯ ಸುವಾಸನೆ ಸವಿಯೋಣ ಮೈಸೂರಿನ ಸಿಹಿ ಪರಂಪರೆಯನ್ನು ಈಗ ಶಿವಮೊಗ್ಗದಲ್ಲಿ ಕುಟುಂಬ ಸಮೇತರಾಗಿ ಎಲ್ಲರೂ ಅನುಭವಿಸೋಣ.
