ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಪೂಜ್ಯ ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಸಲ್ಲದು…

Share Below Link

ಹೊನ್ನಾಳಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮೆಸ್ಕಾಂ ಮಾಜಿ ನಿರ್ದೇಶಕ ಎಸ್.ರುದ್ರೇಶ್ ಅವರು ರಾಜ್ಯ ಸರ್ಕಾರವನ್ನು ಆಗ್ರಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮಸ್ಥಳದ ಬಗ್ಗೆ ಮತ್ತು ಡಾ|ವೀರೇಂದ್ರ ಹೆಗ್ಗಡೆಯವರಿಗೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿರುವ ಧರ್ಮದ್ರೋಹಿಗಳನ್ನು ತಕ್ಷಣ ಬಂಧಿಸಬೇಕೆಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಧರ್ಮಸ್ಥಳವು ಶ್ರz-ಭಕ್ತಿಗೆ ವಿಶ್ವದ ಭೂಪಟದಲ್ಲಿ ಗುರುತಿಸು ವಂತಾಗಲು ಹೆಗ್ಗಡೆಯವರ ಶ್ರಮ ಅಪಾರವಾಗಿದ್ದು, ಕೆಲವರು ಶ್ರೀ ಕ್ಷೇತ್ರದ ಬಗ್ಗೆ ಮಾಡುತ್ತಿರುವ ಇಲ್ಲ-ಸಲ್ಲದ ಆರೋಪಗಳು ನಾಡಿನಾದ್ಯಂತ ಇರುವ ಶ್ರೀ ಕ್ಷೇತ್ರದ ಭಕ್ತರ ಮನಸ್ಸಿಗೆ ತೀವ್ರ ಘಾಸಿಯನ್ನುಂಟು ಮಾಡಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಡಾ| ಹೆಗ್ಗಡೆ ಅವರ ಸೇವಾಪರತೆಯನ್ನು ಗುರುತಿಸಿ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ನೇಮಿಸಿದ್ದರೂ ಸಹ ಅವರು ಪಕ್ಷಾತೀತ, ಧರ್ಮಾತೀತ ವ್ಯಕ್ತಿಯಾಗಿದ್ದು ಸಮಾಜವು ಅವರನ್ನು ಪೂಜ್ಯನೀಯ ಸ್ಥಾನದಲ್ಲಿ ಆರಾಧಿಸುತ್ತಿದೆ ಎಂದಿದ್ದಾರೆ.
ಇತ್ತೀಚಿಗೆ ಡಾ| ಹೆಗ್ಗಡೆಯವರು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ನೀಡಿದ ೫ ಗ್ಯಾರಂಟಿಗಳ ಬಗ್ಗೆ ಮುಕ್ತವಾಗಿ ಹೊಗಳಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಶಕ್ತಿ ಯೋಜನೆ ಜರಿ ಬಗ್ಗೆ ಮತ್ತು ಇತ್ತೀಚಿಗೆ ಮಂಡಿಸಿದ ಬಜೆಟ್ ಬಗ್ಗೆಯೂ ಶ್ಲಾಸಿzರೆ ಇದು ಅವರ ಪಕ್ಷಾತೀತ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಅವರ ಕನಸಿನ ಕೂಸಾದ ಗ್ರಾಮೀಣಾಭಿವೃದ್ಧಿ ಯೋಜನೆಯು ಇಂದು ಕರ್ನಾಟಕದ ಹಳ್ಳಿ- ಹಳ್ಳಿಗಳಲ್ಲೂ ತಲೆಯೆತ್ತಿದೆ. ಗ್ರಾಮೀಣಾಭಿವೃದ್ದಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ. ಮಹಾತ್ಮಾ ಗಾಂಧೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆಯು ಈ ಯೋಜನೆ ಯಿಂದ ಸಾಕಾರಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕೃಷಿ ಮೇಳ, ಮಾನವ ಸಂಪನ್ಮೂಲಗಳ ಸದ್ಭಳಕೆ, ಮದ್ಯವರ್ಜನ ಶಿಬಿರ, ವಿವಿಧ ತರಬೇತಿ ಕಾರ್ಯಾಗಾರಗಳನ್ನು ಆಯೋಜನೆ ಮಾಡಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿzರೆ ಎಂದು ಮಾಹಿತಿ ನೀಡಿದ ಅವರು, ಇಂತಹ ಪೂಜ್ಯ ವ್ಯಕ್ತಿತ್ವದ ಡಾ| ವೀರೇಂದ್ರ ಹೆಗ್ಗಡೆಯವರ ಕುರಿತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ಖಂಡಿಸಿದ್ದಾರಲ್ಲದೆ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.