ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಬದುಕಿನಲ್ಲಿ ಎದುರಾಗುವ ಸೋಲು ಗೆಲುವಿನ ವಾಸ್ತವತೆ ನಿರ್ವಹಿಸುವ ಕೌಶಲ್ಯ ಕ್ರೀಡೆಯಿಂದ ಲಭ್ಯ…

Share Below Link

ಶಿವಮೊಗ್ಗ : ಬದುಕಿ ನಲ್ಲಿ ಎದುರಾಗುವ ಸೋಲು- ಗೆಲುವಿನ ವಾಸ್ತವತೆಯನ್ನು ನಿರ್ವಹಿಸುವ ಕೌಶಲ್ಯತೆಯನ್ನು ಕ್ರೀಡೆ ನೀಡಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಇಂದು ಎನ್‌ಇಎಸ್ ಕ್ರೀಡಾಂಗಣ ದಲ್ಲಿ ಏರ್ಪಡಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷ- ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಬ್ಯಾಡ್ಮಿಂಟನ್ ಜನಪ್ರಿಯ ವಾದ ಬಳಿಕ ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ಸ್ವಲ್ಪ ಮಟ್ಟಿಗೆ ಹಿಂದೆ ಸರಿದಿದ್ದರೂ, ಇಂದಿಗೂ ಕಾಲೇಜು ವಿದ್ಯಾರ್ಥಿಗಳ ನಡುವೆ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ವಿಶೇಷ ವಾಗಿ ೧೯೭೦ರ ದಶಕದಲ್ಲಿ ಈ ಕ್ರೀಡೆ ಬಹು ಜನಪ್ರಿಯವಾಗಿದ್ದು, ಒಂದೇ ತಂಡದಲ್ಲಿ ಐದು ಮಂದಿ ಆಟಗಾರರು ಭಾಗವಹಿಸುತ್ತಿದ್ದರು.


ಮಹಿಳೆಯರು ಸೀರೆ ಧರಿಸಿ ಹಾಗೂ ಅನೇಕ ಪುರುಷರು ಪಂಚೆ ಧರಿಸಿಯೇ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಕಾರಣ, ಈ ಆಟದಲ್ಲಿ ಹೆಚ್ಚು ಓಡಾಟ ಅಗತ್ಯ ವಿರದೆ, ಕೈಮಣಿಯ ನಿಯಂತ್ರಣ ಮತ್ತು ಕೌಶಲ್ಯವೇ ಮುಖ್ಯವಾಗಿ ರುತ್ತದೆ. ಇಂತಹ ಅಪ್ಪಟ ಭಾರತೀಯ ಮೂಲ ಕ್ರೀಡೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸಿ ಪ್ರೋತ್ಸಾಹಿಸುತ್ತಿರುವ ವಿಶ್ವವಿದ್ಯಾನಿಲಯದ ಕ್ರಮ ಶ್ಲಾಘನೀಯವಾಗಿದೆ. ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ, ಕ್ರೀಡಾ ಮನೋಭಾವ ಬೆಳೆಸಿ ಕೊಳ್ಳುವುದು ಮುಖ್ಯ. ಶಿಸ್ತು, ಸೌಹಾರ್ದ ಮತ್ತು ಕ್ರೀಡಾ ಮನೋಭಾವದೊಂದಿಗೆ ಸಕ್ರಿಯ ವಾಗಿ ಭಾಗವಹಿ ಎಂದರು.
ಜಿ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಸಾಗರ್ ಮಾತನಾಡಿ, ಕ್ರೀಡಾಕೂಟ ಬಂದಾಗ ಮಾತ್ರ ಕ್ರೀಡಾ ತರಬೇತಿ ಯಲ್ಲಿ ಭಾಗವಹಿಸುವ ಸಕ್ರಿಯತೆ ತೋರದೆ, ಅಭ್ಯಾಸ ನಿರಂತರ ವಾಗಿರಲಿ ಎಂದು ಹೇಳಿದರು.
ವಿಶ್ವವಿದ್ಯಾಲಯ ವ್ಯಾಪ್ತಿಯ ಪುರುಷ ಮತ್ತು ಮಹಿಳೆಯರ ೨೫ ತಂಡಗಳು ಭಾಗವಹಿಸಿದ್ದವು.