ಶಿಕ್ಷಣ ಇಲಾಖೆಯಲ್ಲಿನ ಸೇವೆ ತೃಪ್ತಿ ತಂದಿದೆ:ಷಣ್ಮುಖಯ್ಯ
ಹೊನ್ನಾಳಿ: ಶಿಕ್ಷಣ ಇಲಾಖೆ ನನಗೆ ಎಲ್ಲ ಸೌಲಭ್ಯಗಳನ್ನು ನೀಡಿದ್ದು ಅದನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂಪಿಎಂ ಶಣ್ಮುಖಯ್ಯ ಹೇಳಿದರು.
ಹೊನ್ನಾಳಿಯ ಗುರುಭವನ ದಲ್ಲಿ ತಾಲೂಕು ಮುಖ್ಯೋಪಾಧ್ಯಾಯರ ಸಂಘ ಮತ್ತು ಶಾಲಾ ಮತ್ತು ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾವು ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಇಲಾಖೆ ತಮ್ಮ ಸೇವೆಗೆ ಬೇಕಾದಂತಹ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಿದೆ ಎಂದ ಷಣ್ಮುಖಯ್ಯ ಅವರು, ತಮ್ಮ ಸೇವಾವಧಿಯಲ್ಲಿ ತಮಗೆ ಸಹಕಾರ ನೀಡಿದ ಸಹ ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ ಅವರು ಮಾತನಾಡಿ, ಹೊನ್ನಾಳಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸುವ ದೃಷ್ಟಿಯಿಂದ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸು ತ್ತಿದ್ದು ಅದರಂತೆ ಮಕ್ಕಳು ಆಟೋಟ ಸ್ಪರ್ಧೆಯಲ್ಲೂ ಸಹ ಹೆಚ್ಚು ಹೆಚ್ಚು ಭಾಗವಹಿಸುವಂತೆ ಮುಖ್ಯೋ ಪಾಧ್ಯಾಯರಾದ ತಾವುಗಳು ತಮ್ಮ ಶಾಲೆಗಳಲ್ಲಿ ಇಲಾಖೆ ಸೂಚಿಸಿದಂತೆ ಮಕ್ಕಳಲ್ಲಿ ಕ್ರೀಡಾಭಾವನೆ ಬೆಳೆಸುವಂತಹ ರೀತಿಯಲ್ಲಿ ಕಾರ್ಯಕ್ರಮ ಯೋಜಿಸಬೇಕು ಎಂದರು.
ಮಕ್ಕಳಿಗೆ ಪ್ರತಿವರ್ಷ ತಪ್ಪದೇ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಮಕ್ಕಳ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಪುಸ್ತಕದಲ್ಲಿ ಬರೆಸುವ ಮೂಲಕ ನ್ಯೂನತೆ ಕಂಡುಬರುವ ಮಕ್ಕಳನ್ನು ವೈದ್ಯರ ಸಲಹೆಯಂತೆ ತಾಲೂಕು ಹಾಗೂ ಜಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರವಲ್ಲಿ ಸಹಕರಿಸಬೇಕು ಎಂದ ಅವರು, ಮಕ್ಕಳು ಚೆನ್ನಾಗಿ ಓದಿ ಬರೆಯಬೇಕಾದರೆ ಆರೋಗ್ಯ ಮುಖ್ಯ ಎಂಬುದು ತಮ್ಮ ಗಮನದಲ್ಲಿರಲಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಶಪ್ಪ ಮಾತನಾಡಿ, ಖಅSಖ ನಲ್ಲಿ ಮಕ್ಕಳ ನೋಂದಣಿ ಕಡ್ಡಾಯವಾಗಿದ್ದು, ಶಾಲಾ ಖಿಈಐಉಖನಲ್ಲಿ ದಾಖಲೆ ಮಾಡುವಲ್ಲಿ ನಮ್ಮ ತಾಲೂಕು ಹಿಂದೆ ಇರುವುದರಿಂದ ಶೀಘ್ರವೇ ದಾಖಲೆ ಪರಿಪೂರ್ಣಗೊಳಿಸು ವಂತೆ ತಿಳಿಸಿದರು.
ತಾಲೂಕು ಮುಕ್ತ ಉಪಾಧ್ಯಾಯರ ಸಂಘದ ಅಧ್ಯಕ್ಷ ರಂಗನಾಥ್ ಅವರು ಮಾತನಾಡಿ, ಶಿಕ್ಷಕರ ಕೊರತೆ ಇರುವ ಕಾರಣ ಮತ್ತು ಮುಖ್ಯೋಪಾಧ್ಯಾಯರು ಗಳಿಗೆ ಶಾಲೆಯ ಎ ಜವಾಬ್ದಾರಿ ಇರುವುದರಿಂದ ಆದಷ್ಟು ಶಿಕ್ಷಕರುಗಳನ್ನು ಎ ಶಾಲೆಗಳಿಗೂ ವ್ಯವಸ್ಥೆ ಮಾಡುವಂತೆ ಕೋರಿದರು.
ಅಕ್ಷರ ದಾಸೋಹ ನಿರ್ದೇಶಕ ರುದ್ರಪ್ಪ ಅವರು ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಜೂನ್ ತಿಂಗಳ ಪಡಿತರ ವಿತರಣೆ ತಡವಾಗಿದೆ . ಇದು ರಾಜ್ಯಮಟ್ಟದ ಕಚೇರಿಯಿಂದ ಆಗಬೇಕಾಗಿದ್ದು ಇನ್ನು ಮುಂದೆ ಆ ರೀತಿ ಆಗದಂತೆ ಸಮಯಕ್ಕೆ ಸರಿಯಾಗಿ ಪಡಿತರವನ್ನು ಎ ಶಾಲೆಗಳಿಗೆ ತಲುಪಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್ ಅವರು ಎಸ್ ಎಸ್ ಎಲ್ ಸಿ ಫಲಿತಾಂಶದ ವಿಷಯದಲ್ಲಿ ನಾನು ಯಾರೊಂದಿಗೂ ರಾಜಿ ಯಾಗಲಾರೆ. ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಆ ಪರೀಕ್ಷೆಯ ಉಸ್ತುವಾರಿಯಲ್ಲಿ ಎ ಶಾಲೆಗಳಿಗೂ ಭೇಟಿ ನೀಡಲು ಸಾಧ್ಯವಾಗದಿರುವುದರಿಂದ ಫಲಿತಾಂಶ ಸ್ವಲ್ಪ ಕೆಳಮಟ್ಟಕ್ಕೆ ಬಂದಿದ್ದು ಈಗಾಗಲೇ ನಾನು ದಿನಕ್ಕೆ ಐದರಿಂದ ಆರು ಶಾಲೆಗಳ ಭೇಟಿ ಮಾಡುತ್ತಿದ್ದೇನೆ. ಈ ಸಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಯಲ್ಲಿ ಮೊದಲ ಸ್ಥಾನವನ್ನು ಪಡೆಯಬೇಕಾಗಿರುವುದು ನನ್ನ ಗುರಿಯಾಗಿದ್ದು ಅದಕ್ಕೆ ನೀವು ನಿಮ್ಮ ಶಾಲೆಯಲ್ಲಿ ಸಹ ಶಿಕ್ಷಕರುಗಳೊಡನೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಉತ್ತಮವಾದ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ನಿಮ್ಮ ಪಾತ್ರ ಅತಿ ಮುಖ್ಯವಾದದ್ದು, ಈ ವರ್ಷ ರಾಜ್ಯದಾದ್ಯಂತ ಏಕ ರೀತಿಯ ಟೈಮ್ ಟೇಬಲ್ ಇಲಾಖೆ ಯಿಂದಲೇ ನಿಗದಿಯಾಗಿದ್ದು ಯಾವುದೇ ಅಧಿಕಾರಿ ನಿಮ್ಮ ಶಾಲೆಗೆ ಬಂದಾಗ ಟೈಮ್ ಟೇಬಲ್ ಪ್ರಕಾರವೇ ತರಗತಿ ಕೋಣೆಯಲ್ಲಿ ಸಂಬಂಧಿಸಿದ ಶಿಕ್ಷಕರು ಅದೇ ತರಗತಿಯಲ್ಲಿ ಇರಬೇಕಾಗಿದ್ದು ಕಡ್ಡಾಯ. ಅದರಂತೆ ನಿಮ್ಮ ಶಾಲೆಯಲ್ಲಿ ಅದೇ ಟೈಮ್ ಟೇಬಲ್ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿರಬೇಕು ಎಂದು ಸೂಚಿಸಿದರು.
ಸಂಘದ ತಾಲೂಕ ಕಾರ್ಯದರ್ಶಿ ದುರ್ಗೇಶಪ್ಪ ಮತ್ತು ಬಿ ಆರ್ ಪಿ ಚಂದ್ರಶೇಖರ್ ಅವರು ಮಾತನಾಡಿದರು. ಸಭೆಯಲ್ಲಿ ತಾಲೂಕಿನ ಎ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.