ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಮಹತ್ವ…
ಶಿವಮೊಗ್ಗ : ಮಕ್ಕಳ ಬೆಳವಣಿಗೆಗೆ ಮತ್ತು ವಿಕಾಸ ದಲ್ಲಿ ಪೋಷಕರ ಪಾತ್ರ ಮಹತ್ವ ಎಂದು ಮಕ್ಕಳ ಸಮಾಲೋಚನ ಗಾರರಾದ ಡಾ. ಐಶ್ವರ್ಯ ಹೇಳಿ ದರು.
ಅವರು ನಗರದ ಡೆಲ್ಲಿ ವರ್ಡ್ ಶಾಲೆಯಲ್ಲಿ ಆಯೋಜಿಸಿದ್ದ ಪೋಷ ಕರ ಕೇಂದ್ರ ಸಭೆಯನ್ನು ಉzಶಿಸಿ ಮಾತನಾಡುತ್ತಾ, ಬದಲಾದ ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಯಿಂದಾಗಿ ಮಕ್ಕಳು, ವಿದ್ಯಾರ್ಥಿ ಗಳು ನಾನಾ ಕಾರಣಗಳಿಂದ ಒತ್ತಡಕ್ಕೆ ಸಿಲುಕುತ್ತಿದ್ದು, ಸಮಸ್ಯೆ ಎದುರಿಸುವ ಮನೋಧೈರ್ಯವಿಲ್ಲದೇ ದು ಡುಕು ತೀರ್ಮಾನ ಕೈಗೊಳ್ಳುವುದು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೋಷಕರೇ ಮಕ್ಕಳ ಮೇಲೆ ಓದುವಿಕೆಯ ಒತ್ತಡ ಹೇರುವುದು ಸಲ್ಲದು. ಮಕ್ಕಳ ಸರ್ವಾಂಗೀಣ ಅಭಿ ವೃದ್ಧಿ ಮತ್ತು ಅದೋಪತನಕ್ಕೆ ಪೋಷಕರೇ ಕಾರಣ. ಮಕ್ಕಳ ಮೇಲಿ ನ ಅತಿಯಾದ ಪ್ರೀತಿ ಮಕ್ಕಳನ್ನು ದಾರಿ ತಪ್ಪಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶು ಪಾಲೆ ದಿವ್ಯ ಶೆಟ್ಟಿಯವರು ಮಾತನಾ ಡಿ ಮಕ್ಕಳಲ್ಲಿ ಮೊಬೈಲ್ ಗೀಳನ್ನು ತಪ್ಪಿಸಿ ಕಲಿಕೆಯ ಉತ್ಸಾಹ ಹೆಚ್ಚಿಸಿ ಎಂದು ಪೋಷಕರಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಂಥೋನಿ ಕ್ಲೈಂಟೇನ್, ಸಹನಾ, ಶಾಲೆಯ ಶಿಕ್ಷಕರು, ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


