ಓವೆಲ್‌ನಲ್ಲಿ ವಿಜಯಧ್ವಜ ಹಾರಿದಾಗ ಭಾರತದ ಸಿಂಹಗಳ ಸಂಭ್ರಮದ ಗರ್ಜನೆ…
ರಾಕೇಶ್ ಡಿಸೋಜ – 9448343211
ಹಚ್ಚಹಸಿರಿನ ಇಂಗ್ಲಿಷ್ ನೆಲ ಓವಲ್ ಮೈದಾನ ದಲ್ಲಿ ಈಡೇರಿದ ಒಂದು ದೊಡ್ಡ ಕನಸು! ಇದು ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಘನ ಕ್ಷಣ. ಶುಭ್ಮನ್ ಗಿಲ್ ನೇತೃತ್ವದ ಯುವ ಟೀಂ ಇಂಡಿಯಾ, ಅನುಭವಿ ಇಂಗ್ಲೆಂಡ್ ತಂಡವನ್ನು ತನ್ನದೇ ನೆಲದಲ್ಲಿ ಮಣ್ಣುಮುಕ್ಕಿಸಿ ಗೆಲುವಿನ ಪತಾಕೆ ಹಾರಿಸಿತು. ಈ ಕ್ರಿಕೆಟ್ ಟೆಸ್ಟ್ ಕೇವಲ ಪಂದ್ಯವಲ್ಲ, ಇದು ಟೀಮ್ ಇಂಡಿಯಾದ ಶಿಸ್ತಿನ ಸಂಕೇತ, ತೀಕ್ಷ್ಣ ಸಂಕಲ್ಪದ ಪ್ರದರ್ಶನವಾಗಿತ್ತು..!

ಇದು ಕ್ರೀಡಾ ಕಣವಲ್ಲ ; ಇದೊಂದು ಕ್ರೀಡಾ ಪ್ರೇಮಿಗಳ ಯುದ್ಧದ ಕಣ..! ಓವಲ್ ಮೈದಾನ ಎಂಬ ಹಸಿರು ಹಾಸಿದ ಮಣ್ಣಿನಲ್ಲಿ ಭಾರತ ಎಂಬ ಸಿಂಹದ ಗರ್ಜನೆ ಇನ್ನೊಮ್ಮೆ ಕೇಳಿಸಿಬಂದಿತು. ಕ್ರಿಕೆಟ್ ಬಲಿಪೀಠದಂತೆ ಕಾಣುವ ಇಂಗ್ಲೆಂಡಿನ ನೆಲೆಯಲ್ಲಿ, ನಮ್ಮ ಸಿಂಹಗಳು ತಾವು ಯಾವ ಮಟ್ಟದ ಕ್ರೀಡಾ ಯೋಧರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಶುಭ್ಮನ್ ಗಿಲ್ ಎಂಬ ಯುವ ಸೈನಿಕನ ದಿಟ್ಟ ನಾಯಕತ್ವ ; ತನ್ನ ದನಿಯಲ್ಲಿ ಜೋರಿಲ್ಲ, ಆದರೆ ಕ್ರಿಯೆಯಲ್ಲಿ ಮಹಾಪ್ರಳಯ! ಆತನ ದೃಢ ಚಲನೆ, ಪ್ರತಿದಿನದ ತರ್ಕಬದ್ಧ ತೀರ್ಮಾನಗಳು ಟೀಂ ಇಂಡಿಯಾಗೆ ಶಕ್ತಿಯ ರಕ್ತಸಂಚಾರವಾಗಿದವು.
ಪ್ರತಿ ಬಾಲ್, ಪ್ರತಿ ಓವರ್ ರೋಮಾಂಚಕ!
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಒಂದು ಕ್ಷಣವೂ ತಲೆತಗ್ಗಿಸಲಿಲ್ಲ. ಆರಂಭದಲ್ಲಿ ಗಿಲ್‌ನ ಶಾಂತ ನಾಯಕತ್ವ, ಗಂಭೀರ ಬ್ಯಾಟಿಂಗ್ ಮತ್ತು ಕ್ರೀಸ್‌ನಲ್ಲಿ ಧೈರ್ಯ ವಂತಿಕೆಯ ಪ್ರದರ್ಶನ ತಂಡದ ಮೊಟ್ಟಮೊದಲ ಗೆಲುವಿನ ಇಂಧನವಾಯಿತು ಎಂದರೆ ತಪ್ಪಾಗಲಾರದು.
ಮೊದಲ ದಿನದ ಮೊದಲ ಓವರ್‌ನಿಂದಲೇ ಇಂಗ್ಲೆಂಡ್‌ಗೆ ಟ್ರಿಗರ್ ಸಿಗುತ್ತಿತ್ತು. ಸಿರಾಜ್ ಬರೆದ ಮೊದಲ ಓವರ್‌ನ ರಣಕಥೆಯೇ ಇಡೀ ಪಂದ್ಯದ ದಿಕ್ಕು ನಿರ್ಧರಿಸಿತು. ಪಿಚ್ ನಿಬ್ಬೆರಗಾಗುವಷ್ಟು ಪೇಸ್, ಬೇಸರವಾಗಿ ಹಿಂದಿರುಗುವ ಇಂಗ್ಲಿಷ್ ಆಟಗಾರರು. ಅಲ್ಲಿ ಕೇವಲ ಬೌಲಿಂಗ್ ಅಲ್ಲ, ಅದು ಭಾರತವೇ ಇಂಗ್ಲೆಂಡನ್ನು ರಣರಂಗದಲ್ಲಿ ಬೆತ್ತಲೆ ಮಾಡಿದಂತಿತ್ತು.
ಆದರೆ, ಅಸಲಿ ರಣಧೀರರು ಯಾರು ಅಂದ್ರೆ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಎಂಬ ಯುವ ಜೋಡಿ. ಇವರು ಎಳೆ ಮಾಡಿದ ಆಟವನ್ನು ನುಂಗಿದ ಕೊಳದ ನಗ್ನ ಸಿಂಹಗಳು! ಒಂದು ಕಡೆ ಸಿರಾಜ್‌ನ ಆಕ್ರಮಣಕಾರಿ ಹಾರ್ಡ್‌ಲ್ಯಾಂಗ್ ಡೆಲಿವರಿಗಳು ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳ ಮೆದುಳಿಗೆ ನುಗ್ಗಿದರೆ, ಇನ್ನೊಂದು ಕಡೆ ಪ್ರಸಿದ್ಧ ಕೃಷ್ಣನ ಸ್ಲಿಂಗ್ ಆರ್ಮ್, ಸ್ವಿಂಗ್ ಮತ್ತು ವೈವಿಧ್ಯಮಯ ಬೌಲಿಂಗ್ ಇಡೀ ಇಂಗ್ಲೆಂಡ್ ತಂಡವನ್ನು ತತ್ತರಗೊಳಿಸಿತು. ಒಬ್ಬ ಸಿಡಿಲು, ಇನ್ನೊಬ್ಬ ಬಿರುಗಾಳಿಯಂತೆ ಅಬ್ಬರಿಸಿದರು.
ಕಣ್ಮುಚ್ಚಿ ಆಕ್ರೋಶ ಹೊರಹಾಕುವ ನಕ್ಷತ್ರ ಸಿರಾಜ್ :
ಒಂದೆಡೆ ಆತನ ದರ್ಪದ ಬೌನ್ಸರ್‌ಗಳು, ಇನ್ನೊಂದೆಡೆ ಪ್ರಸಿದ್ಧ ಕೃಷ್ಣನ ಜವರ್ದಸ್ತ್ ಲೈನ್ ಅಂಡ್ ಲೆನ್ತ್, ಪಿಚ್‌ನಲ್ಲಿ ಪ್ರತಿಬಾರಿ ಸೊಕ್ಕಿನಿಂದ ಮೆರೆಯುತ್ತಿದ್ದ ಇಂಗ್ಲೆಂಡ್ ಆಟಗಾರರು ಕೊನೆಯ ದಿನದಲ್ಲಿ ತತ್ತರಿಸಿ ಬಿದ್ದು ಹೈರಾಣಾದರು. ಕ್ರಿಕೆಟ್‌ನ ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುತ್ತಿದ್ದ ಇಂಗ್ಲೆಂಡ್ ತಂಡ ಇಂದು ಟೀಂ ಇಂಡಿಯಾದ ಸಿಂಹಗಳಾದ ಮಹಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣನ ಕಾಲಡಿಯಲ್ಲಿ ತತ್ತರಿಸಿದ ಸಿಪಾಯಿ ಆಗಿ ಮಾರ್ಪಟ್ಟಿತು.

ಅಂತಿಮ ಕದನ ಬಾಕಿ ಇರುವ ೧೫೦ ರನ್ ಗುರಿ, ಇಂಗ್ಲೆಂಡ್ ಬೌಲರ್‌ಗಳ ಸವಾಲು, ಮಳೆಯ ಅಡ್ಡಿ ಇದನ್ನು ಓವರ್ ಒಂದೊಂದು ರೂಪಕಾಲಾಗಿಸಿದಾಗ, ಶುಭ್ಮನ್ ಗಿಲ್ ಮತ್ತು ಇತರರು ಅದನ್ನು ತಿರಸ್ಕಾರವಾಗಿ, ಚುಟುಕು ಶಬ್ದದಲ್ಲಿ ಹೇಳಿದರು ಱSeಜಿo ಜಿo ಐbಜಿZ!ಱ
ಈ ಬಾರಿ ಟೀಂ ಇಂಡಿಯಾದಲ್ಲಿ ಯಾವುದೋ ಬದಲಾವಣೆ ಕಂಡುಬಂದಿತು. ಆದರೆ ಅದು ಆಟಗಾರರಲ್ಲ, ಬದಲಿಗೆ ಅದು ಆಟಗಾರರ ಮನೋಭಾವದಲ್ಲಿ. ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ, ಬೆನ್ನುನೋವು ಹೇಳದೇ ಬ್ಯಾಟಿಂಗ್ ಮಾಡಿದ ಪುರುಷಾರ್ಥ ಟೀಂ ಸ್ಪಿರಿಟ್ ಎಂತಹುದು ಎಂಬುದಕ್ಕೆ ಈ ತಂಡ ತಾಜಾ ಉದಾಹರಣೆ.
ಟೀಂ ಇಂಡಿಯಾದ ಶಾಂತಸ್ವಭಾವದ ಹಿರಿಯ ಆಟಗಾರ ವಾಲ್ ಖ್ಯಾತಿಯ ರಾಹಲ್ ದ್ರಾವಿಡ್ ಪ್ರಭಾವದಿಂದ ರೂಪುಗೊಂಡ ಶಿಸ್ತಿನ ಆಟ, ಶುಭ್‌ಮನ್‌ಗಿಲ್‌ನ ಯುವರಕ್ತದ ಹೆಜ್ಜೆಗಳಲ್ಲಿ ಪರಾಕ್ರಮವಂತಿಕೆ, ಕೊನೆಗೆ ಎಲ್ಲರ ಒಗ್ಗಟ್ಟಿನಿಂದ ರೂಪುಗೊಂಡ ಈ ಮಹತ್ವದ ಗೆಲುವು ಇದು ನ್ಯೂ ಇಂಡಿಯಾ ಕ್ರಿಕೆಟ್‌ನ ಘೋಷಣೆಯಂತೆ ಧ್ವನಿಸುತ್ತಿದೆ.
ಈ ವಿಜಯ ಕೇವಲ ಆಟದ ಗೇಮ್ ಅಲ್ಲ; ಇದು ೧೪೦ ಕೋಟಿ ಭಾರತೀಯರ ಹೃದಯದಲ್ಲಿ ಹುಟ್ಟಿ, ತಿರುಗಾಟದ ಪ್ರತೀ ಕ್ಷಣದಲ್ಲಿ ತೂಗಾಡಿದ ರಾಷ್ಟ್ರಧ್ವಜದ ಪ್ರತೀ ಛಾಯೆಯ ಗೆಲುವು! ಆಟದ ನಂತರ ಮೈದಾನದಲ್ಲಿ ಪ್ರತಿಧ್ವನಿಸಿದ ಭಾರತ್ ಮಾತಾ ಕೀ ಜೈ! ಗರ್ಜನೆಯು ಕೇವಲ ಜೋಶ್ ಅಲ್ಲ ; ಅದು ನಮ್ಮ ಹುಟ್ಟಿನ, ನಮ್ಮ ಧೈರ್ಯದ, ನಮ್ಮ ರಾಷ್ಟ್ರ ಪ್ರೇಮದ ಘೋಷಣೆಯೆಂದೇ ಕೇಳಿಸಿತು.
ನಾಯಕತ್ವದ ಶಕ್ತಿ; ಗಿಲ್‌ನ ತಾಳ್ಮೆಗೂ ತೀಕ್ಷ್ಣತೆಗೂ ನಾನಾ ಕಾಲದ ನಾಯಕರು ಕೈಮುಗಿಯುತ್ತಾರೆ. ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಸಂಯೋಜನೆಯು ಇಂಗ್ಲೆಂಡ್‌ನ ಬೇಸಾಯ ಕತ್ತಲಾದಂತೆ ಮಾಡಿತು. ತಂಡದ ಪ್ರತಿಯೊಬ್ಬ ಆಟಗಾರ ಕಣದ ಯೋಧನಂತೆ ಆಟವಾಡಿದ ಸಂದರ್ಭದಲ್ಲಿ ಕ್ರೀಡಾ ಭಾರತ ಎಂಬ ಒಂದು ಪರಿಪೂರ್ಣ ಸೇನೆ ರೂಪುಗೊಂಡಂತಾಯಿತು.
ಇದು ಗೆಲುವು ಅಲ್ಲ… ಘೋಷಣೆ!
ಇದು ಓವಲ್ ವಿಜಯವಲ್ಲ ; ಇದು ಇಂಗ್ಲೆಂಡ್‌ನಲ್ಲಿ ಭಾರತ ಇನ್ನು ಮುಂದೆ ದಾಸತ್ವವಲ್ಲ, ದಡದೊಳಗಿನ ಚಿರಪರಿಚಿತ ಶಕ್ತಿ ಎಂಬುದರ ಘೋಷಣೆ. ಇದು ಕ್ರಿಕೆಟ್‌ಗಿಂತಲೂ ದೊಡ್ಡದು. ಇದು ರಾಷ್ಟ್ರ ಭಕ್ತಿಯ ಉಬ್ಬರದ ಕಥೆ! ಇದು ಕೇವಲ ಒಂದು ಕ್ರಿಕೆಟ್ ಟೆಸ್ಟ್ ಗೆಲುವು ಅಲ್ಲ, ಇದು ಕ್ರೀಡಾ ಲೋಕಕ್ಕೆ ಒಂದು ಸ್ಪಷ್ಟ ಸಂದೇಶ!
ಭಯವಿಲ್ಲ, ಭ್ರಮೆ ಇಲ್ಲ, ಸವಾಲು ಎದುರಿಸಲು ಸಿದ್ಧ ಟೀಂ ಇಂಡಿಯಾ, ಈಗ ಮತ್ತೆ ಮತ್ತೆ ತಾನೇ ಬರೆಯುತ್ತಿದೆ ಇತಿಹಾಸವನ್ನು. ಒಟ್ಟಾರೆ, ಶುಭ್ಮನ್ ಗಿಲ್ ಅವರು ಶಾಂತ ನಾಯಕತ್ವದ ಗೆಲುವಿನ ನಾಯಕರಾಗಿದ್ದರೆ, ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಹೊತ್ತಿರುವ ಹುಲಿ ಪಂಗಡ, ಟೀಂ ಇಂಡಿಯಾ ನವ ಭಾರತದ ಟೀಂ ಸ್ಪಿರಿಟ್!
