ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯಲೇಖನಗಳುಶಿಕ್ಷಣ

ಪೊಲೀಸ್ ಎಂದರೆ ಭಯ ಹುಟ್ಟಿಸುವ ಶಕ್ತಿಯಲ್ಲ ; ಭರವಸೆ ನೀಡುವ ವ್ಯವಸ್ಥೆ….

Share Below Link

ರಾಕೇಶ್ ಡಿಸೋಜ- ೯೪೮೨೪೮೨೧೮೨
ಶಿವಮೊಗ್ಗ, ಜ.೩: ೨೦೨೬ನೇ ನೂತನ ವರ್ಷವು ಭ್ರಷ್ಟಾಚಾರ ರಹಿತ ಪೊಲೀಸ್ ಆಡಳಿತದ ಹೊಸ ಆಶಾ ಭಾವನೆಯೊಂದಿಗೆ ಆರಂಭ ಗೊಂಡಿದೆ. ಈ ನೂತನ ವರ್ಷದ ಮೊದಲ ದಿನವೇ ಶಿವಮೊಗ್ಗ ಜಿಯ ರಕ್ಷಣಾ ವ್ಯವಸ್ಥೆಗೆ ಹೊಸ ದಿಕ್ಕು ನೀಡುವಂತೆ ಜಿ ರಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿ ಕೊಂಡಿರುವ ಉತ್ಸಾಹಿ ಯುವಕರಾಗಿರುವ ನೂತನ ಜಿ ರಕ್ಷಣಾಧಿಕಾರಿ ನಿಖಿಲ್ ಅವರ ಮೊದಲ ಘೋಷಣೆಯೇ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಅಧಿಕಾರ ವಹಿಸಿಕೊಂಡ ನೂತನ ಜಿ ರಕ್ಷಣಾಧಿಕಾರಿ ನಿಖಿಲ್ ಅವರು, ಜ.೨ರಂದು ಡಿಎಆರ್ ಸಭಾಂಗಣದಲ್ಲಿ ಕರೆದ ಮೊದಲ ಪತ್ರಿಕಾಗೋಷ್ಠಿಯ ನಶೆಮುಕ್ತ ಶಿವಮೊಗ್ಗ ಎಂಬ ಭರವಸೆಯ ಕನಸನ್ನು ಭಿತ್ತಿ ಗಮನ ಸೆಳೆದಿದ್ದಾರೆ. ಆದರೆ ಈ ಭರವಸೆಗಳು ಮುಂದಿನ ದಿನಗಳಲ್ಲಿ ಕೇವಲ ಘೋಷಣೆಗಳಾಗಿ ಉಳಿಯುತ್ತವೆಯೇ ಅಥವಾ ಕಾರ್ಯರೂಪಕ್ಕೆ ಬರುತ್ತ ವೆಯೇ ಎಂಬ ಪ್ರಶ್ನೆಗೆ ಉತ್ತರವನ್ನು ಕಾಲವೇ ನೀಡಬೇಕಿದೆ.
ನಾನೂ ಹೆಮ್ಮೆಯ ಕನ್ನಡಿಗ. ನನ್ನೂರು ಚಿತ್ರದುರ್ಗ. ಶಿವಮೊಗ್ಗಕ್ಕೆ ಬಂದಿರುವುದು ನನ್ನ ಭಾಗ್ಯ ಎಂದು ಮಾತು ಆರಂಭಿಸಿದ ಎಸ್‌ಪಿ ನಿಖಿಲ್ ಅವರು, ಕಾನೂನಿಗೆ ಗೌರವ ಕೊಡುವ ವರಿಗೆ ಸದಾ ಗೌರವ ನೀಡುವುದಾಗಿ, ರಾಜಕೀಯ ಒತ್ತಡ ಎಷ್ಟೇ ಇದ್ದರೂ ಕಾನೂನಾತ್ಮಕವಾಗಿಯೇ ಕೆಲಸ ಮಾಡು ವುದಾಗಿ ಖಡಕ್ ಆಗಿ ನುಡಿದರಲ್ಲದೇ, ಪೊಲೀಸ್ ಎಂದರೆ ಭಯ ಹುಟ್ಟಿಸುವ ಶಕ್ತಿಯಲ್ಲ, ಬದಲಾಗಿ ಸಮಾಜಕ್ಕೆ ಭರವಸೆ ನೀಡುವ ವ್ಯವಸ್ಥೆಯಾಗಬೇಕು ಎಂಬ ಅವರ ಚಿಂತನೆ, ಱumಛ್ಞಿ ಞಜ್ಞಿb Zb ಟmಛ್ಞಿ eಛಿZಠಿಱ ಎಂಬ ನುಡಿಗಳಲ್ಲಿ ಪ್ರತಿಬಿಂಬಿಸಿತು ಮಾತ್ರವಲ್ಲದೇ, ಈ ಮೂಲಕ ಅವರು ತಮ್ಮ ಕಾರ್ಯಶೈಲಿಯ ದಿಕ್ಕನ್ನು ಸ್ಪಷ್ಟವಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ೨೦೧೭ರಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆಗೆ ಪ್ರವೇಶಿಸಿದ ನಿಖಿಲ್ ಅವರು, ಬೆಂಗಳೂರು ಎಎನ್‌ಎಫ್, ಗಡಿಭಾಗದ ಜಿಗಳಾದ ರಾಯಚೂರು ಮತ್ತು ಕೋಲಾರದಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿ zರೆ. ಇದೀಗ ಮಧ್ಯ ಕರ್ನಾಟಕದ ಪ್ರಮುಖ ಜಿ ಶಿವಮೊಗ್ಗದ ಹೊಣೆಗಾರಿಕೆ ಅವರ ಕೈಯಲ್ಲಿದೆ. ಮಾಧ್ಯಮಗಳು ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಸೇತುವೆ ಯಾಗಬೇಕು ಎಂದು ಮನವಿ ಮಾಡಿದ ಅವರು, ಇಲಾಖೆಯ ಉತ್ತಮ ಕೆಲಸಗಳ ಜೊತೆಗೆ ನ್ಯೂನತೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದಿದ್ದಾರೆ.
ಕೋಮುಸೌಹಾರ್ದತೆ ಬಗ್ಗೆ ಮಾತನಾಡುತ್ತಾ, ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ. ಒಂದು ಕೈ ನಮ್ಮದು, ಇನ್ನೊಂದು ಸಾರ್ವಜನಿಕರದ್ದು ಎಂದು ಹೇಳಿದ್ದು ಕೇಳಲು ಸುಂದರವಾಗಿದೆ. ಆದರೆ ಈ ಮಾತುಗಳು ತಳಮಟ್ಟದಲ್ಲಿ ಎಷ್ಟು ಪರಿಣಾಮಕಾರಿ ಆಗುತ್ತವೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿ ಕೇವಲ ಗಾಂಜಾ ನಶೆಯಲ್ಲಿ ಮಾತ್ರ ತೇಲದೆ, ಇಸ್ಪೀಟ್ ಕ್ಲಬ್‌ಗಳ ಜಾಲ, ಅಕ್ರಮ ಮರಳು, ಮಣ್ಣು ಮತ್ತು ಕಲ್ಲು ಗಣಿಗಾರಿಕೆ, ಗಲ್ಲಿಗಲ್ಲಿಗಳಲ್ಲಿ ಬ್ಯೂಟಿ ಸ್ಪಾ ಹೆಸರಿನಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆ, ಗೂಂಡಾಗಿರಿ, ಕೋಮುದ್ವೇಷ ಉಕ್ಕಿಸುವ ಕೃತ್ಯಗಳು, ಸೈಬರ್ ಅಪರಾಧಗಳು, ಕಳ್ಳತನ, ಸಂಘಟನೆಗಳ ಹೆಸರಲ್ಲಿ ಬ್ಲಾಕ್‌ಮೇಲ್, ಪೊಲೀಸ್ ಠಾಣೆಗಳಲ್ಲಿ ಸುಳ್ಳು ದೂರುಗಳ ದಾಖಲೆ ಇಂತಹ ಅನೇಕ ಅಕ್ರಮಗಳು ಜಿಯಲ್ಲಿ ವಿಷವೃಕ್ಷವಾಗಿ ಬೆಳೆದು ನಿಂತಿವೆ. ಈ ಎಲ್ಲ ಅಪರಾಧ ಗಳೂ ಸಮಾಜದ ಆರೋಗ್ಯವನ್ನು ಹದಗೆಡಿಸುವ ನಶೆಗಳೇ ಆಗಿವೆ.
ಇಂತಹ ಸವಾಲಿನ ಸಂದರ್ಭದಲ್ಲಿ ನಶೆಮುಕ್ತ ಶಿವಮೊಗ್ಗದ ಸಂಕಲ್ಪ ಸ್ವಾಗತಾರ್ಹ. ಆದರೆ ಅದು ಕೇವಲ ಘೋಷಣೆಯ ಮಟ್ಟದ ನಿಂತು ಬಿಡದೆ, ಸಮಗ್ರ ಕಾರ್ಯಯೋಜನೆ ಯಾಗಿ ರೂಪುಗೊಳ್ಳ ಬೇಕಿದೆ. ಡ್ರಗ್ಸ್ ವಿರುದ್ಧ ಕಠಿಣ ಕ್ರಮಗಳೊಂದಿಗೆ ಅಕ್ರಮ ಜೂಜು, ಗಣಿಗಾರಿಕೆ, ಮಾನವ ಸಾಗಣೆ, ಸೈಬರ್ ವಂಚನೆಗಳ ವಿರುದ್ಧ ಸಮನ್ವಯಿತ ದಾಳಿ ನಡೆಯಕಿದೆ. ಕಾನೂನು ಸುವ್ಯವಸ್ಥೆಯ ಅನುಷ್ಠಾನ ದಲ್ಲಿ ರಾಜಕೀಯ ಒತ್ತಡ, ಪ್ರಭಾವಶಾಲಿಗಳ ಹಸ್ತಕ್ಷೇಪಗಳಿಗೆ ಜಾಗ ನೀಡದೇ, ಕಾನೂನು ಎಲ್ಲರಿಗೂ ಸಮಾನ ಎಂಬ ತತ್ವವನ್ನು ಕಾರ್ಯರೂಪಕ್ಕೆ ತರಬೇಕಿದೆ.
ಸ್ಮಾರ್ಟ್ ಪೊಲೀಸ್ ವ್ಯವಸ್ಥೆ ಎಂದರೆ ಕೇವಲ ತಂತ್ರeನವಲ್ಲ; ಅದು ಪಾರದರ್ಶಕತೆ, ಜನಸ್ನೇಹಿ ಧೋರಣೆ, ವೇಗದ ತನಿಖೆ, ನಿಖರ ಶಿಕ್ಷೆ ಈ ನಾಲ್ಕು ಆಧಾರಸ್ತಂಭಗಳ ಮೇಲೆ ನಿಂತಿರಬೇಕು. ಬೀಟ್ ಮಟ್ಟದ ಗುಪ್ತಚರ ವ್ಯವಸ್ಥೆ ಬಲಪಡಿಸುವುದು, ಸಾರ್ವಜನಿಕರ ಸಹಭಾಗಿತ್ವದಿಂದ ಅಪರಾಧ ತಡೆಗೆ ಒತ್ತು ನೀಡುವುದು, ಪೊಲೀಸ್ ಠಾಣೆ ಗಳಲ್ಲಿನ ಪ್ರಕ್ರಿಯೆಗಳನ್ನು ಪಾರದರ್ಶಕ ಗೊಳಿಸುವುದು ಇವೆಲ್ಲವೂ ಜಿಲ್ಲೆಯಲ್ಲಿ ಇಂದಿನ ತುರ್ತು ಅತ್ಯಗತ್ಯವಾಗಿದೆ.
ಇವುಗಳ ಜೊತೆಗೆ ಶಿವಮೊಗ್ಗ ಜಿಯ ಪೊಲೀಸ್ ವ್ಯವಸ್ಥೆಯಲ್ಲಿ ಇಂದು ಹಲವು ಕಹಿ ಪ್ರಶ್ನೆಗಳು ಮನ ವಾಗಿ ಕಾಡುತ್ತಿವೆ. ಕೆಲ ಸಂಘಟನೆಗಳು ಪೊಲೀಸ್ ಠಾಣೆಗಳಲ್ಲಿ ಏಜೆಂಟರಂತೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸು ತ್ತಿದ್ದು, ಸುಳ್ಳು ದೂರು ದಾಖಲಿಸಿ ಕಿರುಕುಳ ನೀಡುವುದು ಕೂಡ ಗಮನಿಸ ಬೇಕಾದ ಅಂಶವಾಗಿದೆ. ಇಂತಹ ಹೈಟೆಕ್ ಕ್ರಿಮಿನಲ್‌ಗಳಿಗೆ ಪೊಲೀಸರೇ ಗೋಡೆಯಾಗಿ ನಿಂತು ಬೆಂಬಲಿಸುತ್ತಿ ರುವುದು ವಿಪರ್ಯಾಸದ ಸಂಗತಿಯಾಗಿದೆ.
ಕೇವಲ ಟ್ರಾಫಿಕ್ ಫೈನ್ ಹಾಕುವು ದಕ್ಕೇ ಸೀಮಿತವಾದ ಪೊಲೀಸ್ ಕಾರ್ಯಾಚರಣೆ, ಬಲವಾಗಿ ಬೇರು ಬಿಟ್ಟಿರುವ ಮಾದಕ ವಸ್ತು ಜಾಲದ ಬೇರುಗಳು, ಕೋಮುದ್ವೇಷದ ಬೆಂಕಿಗೆ ಗಾಳಿ ಹಾಕುವ ದುಷ್ಟಶಕ್ತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ದ್ವೇಷ ಹರಡುವ ಅರಾಜಕತೆ ಎಬ್ಬಿಸುವ ಮೂಲಕ ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿ ರುವ ಕೆಲ ಸೋಕಾಲ್ಡ್ ನಾಯಕರು, ನಿಯಂತ್ರಣ ತಪ್ಪುತ್ತಿರುವ ಸೈಬರ್ ಕ್ರೈಂ ಸೇರಿದಂತೆ ಇನ್ನಿತರ ಸಮಸ್ಯೆಗಳ ಮಧ್ಯೆ ನೂತನ ಎಸ್ಪಿ ನಿಖಿಲ್ ತಾವು ಬಿತ್ತಿರುವ ಭರವಸೆಯ ಕನಸುಗಳನ್ನು ನನಸಾಗಿರಬೇಕಿದೆ.
ವಿಶೇಷವಾಗಿ ಶಿವಮೊಗ್ಗ ಜಿಯು ಈ ಹಿಂದೆ ಕೆಲ ನಿಷ್ಠಾವಂತ, ದಕ್ಷ ಹಾಗೂ ಜನಸ್ನೇಹಿ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಕಂಡಿದೆ. ಅದೇ ವೇಳೆ ಅಧಿಕಾರಿಗಳ ಭ್ರಷ್ಟತೆ, ನಿರ್ಲಕ್ಷ್ಯ ಮತ್ತು ನಿರುಪಯುಕ್ತತೆಯ ಉದಾಹರಣೆ ಗಳನ್ನೂ ಕಂಡಿದೆ. ಉತ್ಸಾಹಿ ಯುವಕ ರಾಗಿರುವ ನೂತನ ಎಸ್ಪಿ ನಿಖಿಲ್ ಅವರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಜಿಯ ಜನತೆ ಮಾತ್ರವಲ್ಲ, ಪೊಲೀಸ್ ಇಲಾಖೆಯೂ ಉತ್ಸಾಹದ ಕಣ್ಣುಗಳಿಂದ ಎದುರು ನೋಡುತ್ತಿದೆ. ಮೊದಲ ದಿನದ ಮಾತುಗಳು ಭರವಸೆಯ ಬೀಜ ಗಳಾಗದೆ, ಆ ಬೀಜಗಳಿಗೆ ನೀರು ಹಾಕಿ, ಬೆಳೆಸಿ, ಫಲ ಕೊಯ್ಯುವ ಕೆಲಸವೇ ನಿಜವಾದ ಆಡಳಿತ. ಶಿವಮೊಗ್ಗ ಜಿಲ್ಲೆ ಭರವಸೆಯ ಮಾತುಗಳಿಗಿಂತ ದೃಢ ಆಡಳಿತ ನಿರೀಕ್ಷಿಸುತ್ತಿದೆ. ಭರವಸೆ ಗಳಿಗಿಂತ ಫಲಿತಾಂಶವನ್ನು ಬಯಸು ತ್ತಿದೆ. ಕಾನೂನು ಪುಸ್ತಕ ಗಳಿಗಿಂತ ಕಾನೂನು ಅನುಷ್ಠಾನವನ್ನು ಕಾಯುತ್ತಿದೆ. ನೂತನ ವರ್ಷದ ಮೊದಲ ದಿನ ಬಿತ್ತಿದ ಈ ಕನಸುಗಳು ನಾಳೆಯ ಶಿವಮೊಗ್ಗದ ವಾಸ್ತವವಾಗಲಿ. ಶಿವಮೊಗ್ಗದಲ್ಲಿ ಸ್ಮಾರ್ಟ್, ಸುರಕ್ಷಿತ ಮತ್ತು ವಿಶ್ವಾಸಾರ್ಹ ಪೊಲೀಸ್ ವ್ಯವಸ್ಥೆ ಹೊರಹೊಮ್ಮಲಿ ಎಂಬುದೇ ಜಿಯ ಜನರ ನಿರೀಕ್ಷೆ.
ತಮ್ಮ ನೇತೃತ್ವದಲ್ಲಿ ೨೦೨೬ನೇ ವರ್ಷ ನಿಜಕ್ಕೂ ಪೊಲೀಸ್ ಆಡಳಿತದ ಪಾವಿತ್ರ್ಯ ಮತ್ತು ಕಾನೂನಿನ ಗೌರವ ಪುನರ್‌ಸ್ಥಾಪನೆಯ ವರ್ಷವಾಗಿ ಇತಿಹಾಸದಲ್ಲಿ ದಾಖಲೆಯಾಗಲಿ.