ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಹೃದಯದ ಆರೋಗ್ಯ ಕಾಳಜಿಯಿಂದ ಹೆಜ್ಜೆ ಹಾಕಿದ ನಗರದ ಜನತೆ…

Share Below Link

ಶಿವಮೊಗ್ಗ : ವಿಶ್ವ ಹೃದಯ ದಿನದ ಅಂಗವಾಗಿ ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನರು ವಾಕಥಾನ್ ನಲ್ಲಿ ಹೆಜ್ಜೆ ಹಾಕಿದರು.


ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿ ಆರೋಗ್ಯಾಧಿಕಾರಿ ಡಾ. ಕೆ.ಎಸ್. ನಟರಾಜ್, ಹೃದಯವು ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಸತತವಾಗಿ ಬಡೆದುಕೊಳ್ಳುತ್ತದೆ, ಸತತವಾಗಿ ಕಾರ್ಯನಿರ್ವಹಿಸುವ ಈ ಅಂಗಕ್ಕೆ ನಾವು ಕಾಳಜಿ ವಹಿಸುವುದು ಅತ್ಯವಶ್ಯಕ. ಇಂದಿನ ದಿನಮಾನ ಗಳಲ್ಲಿ ಸಣ್ಣ ಯುವ ವಯಸ್ಸಿನ ಯುವಕರು ಸಹ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಹೃದಯದ ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡಿ, ಅದು ಎಷ್ಟು ಸರಿಯಾಗಿ ಕೆಲಸ ಮಾಡುತ್ತದೆಯೋ ಅಷ್ಟು ಜೀವನ ಆರೋಗ್ಯಕರವಾಗಿರುತ್ತದೆ. ಹೃದಯದ ಸಮಸ್ಯೆಗಳಿಗೆ ಒತ್ತಡಮಯ ಜೀವನವು ಒಂದು ಕಾರಣವಾಗಿದ್ದು ಒತ್ತಡದಿಂದ ಹೊರಬನ್ನಿ, ಆರೋಗ್ಯಕರ ಜೀವನ ರೂಡಿಸಿಕೊಳ್ಳಿ, ನಿತ್ಯವೂ ವ್ಯಾಯಾಮ ಮಾಡಿ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಿ ಇದೆಲ್ಲವೂ ಮಾಡುವುದರಿಂದ ಹೃದಯವು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸ ತಜ್ಞ ಡಾ. ಬಾಲಸುಬ್ರಮಣಿ ಆರ್ ಅವರು ಮಾತನಾಡಿ, ಹತ್ತು ವರ್ಷಗಳ ಹಿಂದೆ ೬೦ ವಯಸ್ಸಿನ ಹಿರಿಯರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರು, ಕೋವಿಡ್ ನಂತರ ೩೦ ವರ್ಷ ವಯಸ್ಸಿನ ವರಲ್ಲಿಯೂ ಸಹ ಬೈಪಾಸ್ ಚಿಕಿತ್ಸೆಗೆ ಆಗುತ್ತಿರುವುದನ್ನು ನೋಡುತ್ತಿzವೆ ಎಂದು ಆತಂಕ ವ್ಯಕ್ತಪಡಿಸಿದರು.


ಹೊಗೆ ಸೊಪ್ಪು ಸೇವನೆ, ಮದ್ಯಪಾನ, ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್‌ಗಳು ಹೃದಯ ಸಂಬಂಧಿ ಕಾಯಿಲೆ ಉಂಟು ಮಾಡುತ್ತವೆ, ಇದಲ್ಲದೆ ಇಂದಿನ ಒತ್ತಡದ ಜೀವನ ಶೈಲಿಯೂ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣ ಆದ್ದರಿಂದ ಧನಾತ್ಮಕವಾಗಿರುವ ಒತ್ತಡ ನಿರ್ವಹಣಾ ತಂತ್ರಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದಿನವೂ ಕನಿಷ್ಠ ೪೫ ನಿಮಿಷ ವ್ಯಾಯಾಮ ನಡಿಗೆ ಅಥವಾ ಜಿಮ್ ನಲ್ಲಿ ಕಸರತ್ತು ಮಾಡುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಪೌಷ್ಟಿಕ ಆಹಾರ ಸೇವನೆ, ಒಳ್ಳೆಯ ೬-೮ ತಾಸು ನಿzಈ ರೀತಿಯ ಒಳ್ಳೆಯ ಆರೋಗ್ಯಕರ ಒತ್ತಡ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡದಿಂದ ಹೊರಬರುವುದಲ್ಲದೆ ಹೃದಯ ಆರೋಗ್ಯವು ಸಹ ಉತ್ತಮವಾಗಿರುತ್ತದೆ ಎಂದರು.
ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ| ಶ್ರೀವತ್ಸ ಅವರು ಮಾತನಾಡಿ, ಪ್ರತಿ ವರ್ಷ ಸೆ.೨೯ ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ನಿಮ್ಮ ಹೃದಯದ ಬಡಿತವನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿದೆ ಇದರ ಅರ್ಥ ಹೃದಯ ಸಂಬಂಧಿ ಲಕ್ಷಣಗಳನ್ನು ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂಬುದಾಗಿದೆ. ಮೂರರಲ್ಲಿ ಒಂದು ಸಾವು ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುತ್ತಿದೆ. ನಾಲ್ಕನೇ ಒಂದು ಭಾಗ ಹೃದಯಾ ಘಾತ ೪೦ ವರ್ಷ ಒಳಗಿನವರಿಗೆ ಆಗುತ್ತಿದೆ ಎನ್ನಲಾಗುತ್ತದೆ, ಅರ್ಧದಷ್ಟು ಹೃದಯಾಘಾತ ೫೦ ವರ್ಷ ವಯಸ್ಸಿನವರಿಗೆ ಆಗುತ್ತೆ ಎನ್ನಲಾಗುತ್ತದೆ ಇದು ತುಂಬಾ ಕಳವಳಕಾರಿ ಸಂಗತಿ ಎಂದರು.


ಹೃದಯಾಘಾತದ ೫ ಲಕ್ಷಣ ಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಂತೆ ಡಾ. ಶ್ರೀವತ್ಸ ಅವರು ಸಲಹೆ ನೀಡಿದರು.
ಎದೆಯ ಮಧ್ಯ ಭಾಗದಲ್ಲಿ ಉರಿ, ಗಂಟಲು ನೋವು, ಎದೆ ಭಾರವಾಗಿರೋದು, ನೋವು ಎಡಗೈ ಅಥವಾ ಬಲಗೈಗೆ ಹಬ್ಬಿರುವುದು ನಿರ್ಲಕ್ಷಿಸಬೇಡಿ. ವಾಕಿಂಗ್ ಮಾಡುವಾಗ ಅಥವಾ ನಡೆಯುವಾಗ ಸುಸ್ತಾದರೆ ನಿರ್ಲಕ್ಷ ವಹಿಸದೇ ಅದನ್ನು ತುರ್ತಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದರು.
ತಾಲೂಕ ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ವರ್ಗೀಸ್ ಪಿ ಜನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶೈಲೇಶ್ ಪ್ರಮುಖರಾದ ರಾಜಪ್ಪ, ಡಾ.ಅಶ್ವಲ್, ಡಾ. ವಿಕ್ರಂ, ಡಾ. ಅಜಿತ್ ಶೆಟ್ಟಿ, ಡಾ.ಚಕ್ರವರ್ತಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.