ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಕನ್ನಡದ ಪ್ರತಿಭಾವಂತ ಗಾಯಕರಿಗೆ ಕನ್ನಡದ ಕಡೆಗಣನೆ ವಿಷಾಧನೀಯ…

Share Below Link

ಶಿವಮೊಗ್ಗ : ಕನ್ನಡದ ಪ್ರತಿಭಾವಂತ ಗಾಯಕರಿಗೆ ಕನ್ನಡ ದ ಅವಕಾಶಗಳು ಸಿಗುವುದಿಲ್ಲ ಎಂದು ಖ್ಯಾತ ಗಾಯಕ ರಮೇಶ್ಚಂದ್ರ ಹೇಳಿದರು.
ನಗರದ ಕುವೆಂಪು ರಂಗ ಮಂದಿರದಲ್ಲಿ ಸಂಗೀತ ಸಮರ್ಪಣ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹಳೆಯ ಸುಮಧುರ ಕನ್ನಡ , ಹಿಂದಿ ಚಲನಚಿತ್ರ ಗೀತ ಗಾಯನದ ಜೀವ ಜೀವದ ಸ್ವರ ಸಂಚಾರ' ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು. ಕನ್ನಡದ ಸಿನಿಮಾಗಳಲ್ಲಿ ಕನ್ನಡದ ಗಾಯಕರು, ಗಾಯಕಿ ಯರಿಗೆ ಅವಕಾಶಗಳು ಸಿಗುವುದಿಲ್ಲ. ಕನ್ನಡ ಸಿನಿಮಾಗಳಲ್ಲಿ ಹಾಡಬೇಕು ಎಂದರೆ ಅವರಿಗೆ ಕನ್ನಡವೇ ಬರಬಾರದು ಎಂಬ ಧೋರಣೆ ಉಂಟಾಗುತ್ತಿದೆ. ಕನ್ನಡದಲ್ಲಿ ಪ್ರತಿಭಾವಂತ ಗಾಯಕರು, ಗಾಯಕಿಯರಿzರೆ. ಆದರೆ, ಅದೆಕೋ ನಮ್ಮ ನಿರ್ಮಾಪಕರು, ನಿರ್ದೇಶಕರು ಅವರಿಗೆ ಅವಕಾಶ ಕಲ್ಪಿಸದಿರುವುದು ವಿಷಾದನೀಯ ವಾಗಿದೆ. ಇನ್ನು ಮುಂದಾದರೂ ಈ ಧೋರಣೆ ಬದಲಾಗಬೇಕು. ಕನ್ನಡಿಗರಿಗೆ ಅವಕಾಶ ಸಿಗಬೇಕು ಎಂದರು. ಇತ್ತೀಚೆಗೆ ಬರುವ ಸಿನಿಮಾ ಹಾಡುಗಳಿಗೆ ಸಂಬಂಧಿಸಿದಂತೆ ಇರುವ ರಿಯಾಲಿಟಿ ಶೋಗಳು ತಮ್ಮ ನೈಜತೆಯನ್ನು ಕಳೆದು ಕೊಳ್ಳುತ್ತಿವೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಎದೆ ತುಂಬಿ ಹಾಡಿದೆನು’ ಶೋ ಬಂದ ನಂತರ ರಿಯಾಲಿಟಿ ಶೋಗಳು ತಮ್ಮ ರಿಯಲ್ ಅನ್ನು ಕಳೆದುಕೊಳ್ಳುತ್ತಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಹಳೆದ ಹಾಡುಗಳು ಶಾಶ್ವತವಾಗಿ ಮನಸ್ಸಲ್ಲಿ ಉಳಿದುಕೊಂಡಿವೆ. ಮೆಲುಕು ಹಾಕಿದಾಗಲೆಲ್ಲ ಅವು ಮುದ ಕೊಡುತ್ತವೆ. ಸಂಗೀತವೇ ಹಾಗೆ. ಅದು ಎ ವಯೋಮಾನದ ವರನ್ನು ಆಕರ್ಷಿಸುತ್ತದೆ. ಪ್ರತಿಭಾವಂತ ಗಾಯಕಿ ಸುರೇಖಾ ಹೆಗಡೆ ಇಂತಹ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಕ್ಷರಿ, ಸಂಗೀತವೇ ಸ್ವರ್ಗ ಎಂಬ ಮಾತು ನಿಜ. ಅದರಲ್ಲೂ ಹಳೆಯ ಹಾಡುಗಳು ರೋಮಾಂಚನ ತರುತ್ತವೆ. ಮೈಸೂರು ಬಿಟ್ಟರೆ ಶಿವಮೊಗ್ಗವೇ ಸಾಂಸ್ಕೃತಿಕ ಮತ್ತು ಸಂಗೀತದ ತವರುಮನೆಯಾಗಿದೆ. ಶಬ್ಧ ಮನವಾದಾಗ ಸಂಗೀತ ಮಾತಾ ಡುತ್ತದೆ ಎಂದರು.
ಕಾರ್ಯಕ್ರಮ ಸಂಯೋಜಕಿ, ಖ್ಯಾತ ಗಾಯಕಿ ಹಾಗೂ ಸಂಗೀತ ಸಮರ್ಪಣ್ ಟ್ರಸ್ಟ್ ಅಧ್ಯಕ್ಷೆ ಸುರೇಖಾ ಹೆಗಡೆ ಮಾತನಾಡಿ, ಗಾಯಕ ರಮೇಶ್ ಚಂದ್ರ ಅವರು ನಮ್ಮ ಗುರುಗಳು. ಅವರನ್ನು ಗೌರವಿಸಿದ್ದು ನಮ್ಮ ಹೆಮ್ಮೆ, ಶಿವಮೊಗ್ಗದಲ್ಲಿಯೇ ಇದ್ದುಕೊಂಡು ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದು ನನ್ನ ಹೆಬ್ಬಯಕೆ ಈ ಕಾರ್ಯಕ್ರಮಕ್ಕೆ ಹಲವರು ಸಹಕಾರ ನೀಡಿzರೆ. ಎಲ್ಲರಿಗೂ ಕೃತಜ್ಞತೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಗೋಪಾಲ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹನಾ ಚೇತನ್ ನಿರೂಪಿಸಿದರು, ಸಿನಿಮಾ ಹಾಡುಗಳ ಕುರಿತು ವಿನಯ್ ನಿರೂಪಣೆ ಮಾಡಿದರು.