ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಡವರ ಬದುಕಿಗೆ ಬೆಲೆ ನೀಡದೇ ಶ್ರೀಮಂತರಿಗೆ ಆಶ್ರಯತಾಣವಾದ ಮೋದಿ ಸರ್ಕಾರ…

Share Below Link

ಶಿವಮೊಗ್ಗ: ಬಡವರ ಬದುಕಿಗೆ ಭದ್ರತೆ ನೀಡದ ಬಿಜೆಪಿ ಅತ್ಯಂತ ಕ್ರೂರ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಬಿಜೆಪಿ ಬಡವರ ಬದುಕಿಗೆ ಬೆಲೆ ನೀಡುವುದಿಲ್ಲ. ಶ್ರೀಮಂತರನ್ನು ಸಾಕುವ ಆಶ್ರಯತಾಣವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಶ್ರೀಮಂತರೇ ಶ್ರೀಮಂತರಾಗುತ್ತ ಹೋಗುತ್ತಿದ್ದಾರೆ. ಬಹುಸಂಖ್ಯಾತರ ಪರವಾಗಿ ಬಿಜೆಪಿ ಸರ್ಕಾರ ಇರಲಿಲ್ಲ. ಬಿಜೆಪಿ ಕ್ರೌರ್ಯದ ಸರ್ಕಾರ ಎಂದು ದೂರಿದರು.


ಕಳೆದ ೧೦ ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದ ಬಡವರ, ಆದಿವಾಸಿಗಳ, ದಲಿತರ ಪರವಾದ ಒಂದೇ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಕೊಟ್ಟಿಲ್ಲ. ಎಲೆಕ್ಟ್ರೋಲ್ ಬಾಂಡ್ ಜಗತ್ತಿನ ದೊಡ್ಡ ಹಗರಣ, ಐಟಿ, ಇಡಿ, ಸಿಬಿಐನಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟರಿಂದ ಕೋಟ್ಯಾಂತರ ರೂ.ಗಳ ಹಫ್ತಾವಸೂಲಿ ಮಾಡಿಕೊಳ್ಳುವ ಹಫ್ತಾವಸೂಲಿ ರಾಜಕಾರಣವನ್ನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ಅವರು ಹೇಳುತ್ತಿರುವಾಗಲೆ ಅತ್ತ ಉತ್ತರ ಭಾರತದಲ್ಲಿ ಅವರದ್ದೇ ಪಕ್ಷದ ಅಭ್ಯರ್ಥಿಯೊಬ್ಬರು ಬಿಜೆಪಿಗೆ ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುತ್ತೇವೆಂದು ಹೇಳುತ್ತಾರೆ. ಅವರ ವಿರುದ್ದ ಯಾಕೆ ಮೋದಿ ಕ್ರಮ ಕೈಗೊಳ್ಳುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಇಂತಹ ನಾಯಕನನ್ನು ಎದುರಿಸಲು ಬಿಜೆಪಿಗಾಗಲಿ, ಮೋದಿ ಗಾಗಲಿ ಸಾಧ್ಯವಾಗುವುದಿಲ್ಲ. ಸಿದ್ದರಾಮಯ ನವರಂತಹ ಗಟ್ಟಿ ನಾಯಕರಿರುವವರೆಗೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳ ಮುಖ್ಯಮಂತ್ರಿಗಳನ್ನು , ಸಚಿವರನ್ನು ಜೈಲಿನಲ್ಲಿಡಲಾಗುತ್ತದೆ. ಪಾರದರ್ಶಕ ಮತ್ತು ನಿರ್ಭೀತ ಚುನಾವಣೆ ನಡೆಯುತ್ತಿಲ್ಲ. ಇವಿಎಂ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಪಕ್ಷಗಳ ಖಾತೆಗಳನ್ನು ರದ್ದುಗೊಳಿಸಲಾ ಗುತ್ತಿದೆ. ಮೋದಿ ಸರ್ಕಾರ ದೇಶದಲ್ಲಿ ಪ್ರಜಪ್ರಭುತ್ವ ವ್ಯವಸ್ಥೆಯನ್ನೆ ಹಾಳು ಗೆಡುವುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಬಂಗಾರಪ್ಪ ಈ ನಾಡು ಕಂಡ ಅಪ್ರತಿಮ ನಾಯಕ, ಅವರು ಕೊಟ್ಟ ಯೋಜನಗೆಳು ಬಡವರು, ದಲಿತರು, ಹಿಂದುಳಿದವರ್ಗಗಳ ಪಾಲಿಗೆ ವರದಾನವಾಗಿದ್ದವು ಅಂತಹ ನಾಯಕರ ಮಗಳು ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಬೇಕೆಂದು ಮನವಿ ಮಾಡಿಕೊಂಡರು.
ಪ್ರಮುಖರಾದ ಎಂ.ಶ್ರೀಕಾಂತ್, ಚಂದ್ರಭೂಪಾಲ್, ಜಿ.ಡಿ ಮಂಜುನಾಥ್, ಚಿನ್ನಪ್ಪ, ಶಿವಣ್ಣ, ರಮೇಶ್ ಹೆಗ್ಡೆ, ಎಲ್. ಪದ್ಮ ಭ್, ಶಿವಾನಂದ, ಮತ್ತಿತರರಿದ್ದರು.