ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಪ್ರಾಪ್ತಿ…
ಶಿವಮೊಗ್ಗ: ಗಾಯಗೊಂಡ ವರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದ ವರಿಗೆ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ಪರಿಸ್ಥಿತಿ ಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದರಿಂದ ದೇಹಕ್ಕೆ ವಿವಿಧ ಪ್ರಯೋಜನ ಗಳಿವೆ. ಅಲ್ಲದೆ ಜೀವವನ್ನು ಉಳಿ ಸಿದ ಸಾರ್ಥಕತೆ ದೊರೆಯುತ್ತದೆ. ಅಲ್ಲದೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹಸೂಡಿ ಗ್ರಾಪಂ ಅಧ್ಯಕ್ಷೆ ಚೈತ್ರ ಕೆ.ಆರ್. ಮೋಹನ್ ಹೇಳಿ ದರು.
ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಗೋಂಧಿಚಟ್ನಳ್ಳಿ ಪಿಹೆಚ್‌ಸಿ, ಹಸೂಡಿ ಗ್ರಾಪಂ, ಶಿವಮೊಗ್ಗ ರಕ್ತ ನಿಧಿ ಕೆಂದ್ರ, ಸಿಮ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ ಹಸೂಡಿಯ ರಂಗಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇವಲ ದೇವರ ಪೂಜೆ, ಧಾರ್ಮಿಕ ಕಾರ್ಯಗಳಿಂದಷ್ಟೇ ಪುಣ್ಯ ಪ್ರಾಪ್ತಿಯಾಗುವುದಿಲ್ಲ. ರಕ್ತದಾನದಂತಹ ಸತ್ಕಾರ್ಯ ಗಳಿಂದಲೂ ಪುಣ್ಯ ಲಭಿಸುತ್ತದೆ. ರಕ್ತದಾನ ಮಾಡುವುದರಿಂದ ಭಾವ ನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಇತರ ರಿಗೆ ಸಹಾಯ ಮಾಡುವುದರಿಂದ ಸಂತೃಪ್ತ ಭಾವ ಲಭಿಸಿ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಭಾವ ನಾತ್ಮಕ ಆರೋಗ್ಯ ಸುಧಾರಣೆ ಯಾಗುತ್ತದೆ. ನಕಾರಾತ್ಮಕ ಭಾವನೆ ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಪ್ರತ್ಯೇಕತೆ ಯನ್ನು ಕಡಿಮೆ ಮಾಡುತ್ತದೆ ಎಂದರು.
ಆರೋಗ್ಯವಂತ ವಯಸ್ಕರು ರಕ್ತದಾನ ಮಾಡುವುದರಿಂದ ಯಾವುದೇ ಕಾಯಿಲೆಗೆ ತುತ್ತಾಗುವ ಅಪಾಯವಿಲ್ಲ. ಕೆಲವರಿಗೆ ರಕ್ತ ದಾನ ಮಾಡಿದ ನಂತರ ವಾಕರಿಕೆ, ತಲೆ ನೋವು ಅಥವಾ ತಲೆ ತಿರುಗುವಿಕೆ ಸಂಭವಿಸಬಹುದು. ಕೆಲ ನಿಮಿಷಗಳ ವಿಶ್ರಾಂತಿ ಬಳಿಕ ದೇಹ ಯಥಾ ಸ್ಥಿತಿಗೆ ಮರಳುತ್ತದೆ. ರಕ್ತದಾನದಿಂದ ದೇಹ ದುರ್ಬಲ ವಾಗುತ್ತದೆ ಎಂಬ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿಶ್ವದ ಅತಿ ಹೆಚ್ಚು ರಕ್ತದ ಕೊರತೆಯಿಂದ ಬಳಲುತ್ತಿರುವ ವರು ಭಾರತದಲ್ಲಿzರೆ. ಸಮ ಯಕ್ಕೆ ಸರಿಯಾಗಿ ರಕ್ತ ಸಿಗದ ಕಾರಣ ಪ್ರತಿವಷ ವಿವಿಧ ಕಾಯಿಲೆ ಗಳಿಂದ ಬಳಲುತ್ತಿರುವ ರೋಗಿ ಗಳು ಸಾವನ್ನಪ್ಪುತ್ತಿzರೆ. ಆದ್ದ ರಿಂದ ಈ ಜೀವಗಳನ್ನು ಉಳಿಸಲು ರಕ್ತದಾನವನ್ನು ಪ್ರೋತ್ಸಾಹಿಸ ಬೇಕೆಂದು ಆಶಯ ವ್ಯಕ್ತಪಡಿಸಿ ದರು.
ಗ್ರಾಪಂ ಉಪಾಧ್ಯಕ್ಷರು, ಸದಸ್ಯರುಗಳು, ಪಿಡಿಓ ರಾಜಪ್ಪ ಹೆಚ್., ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್, ಶಿವಮೊಗ್ಗ ರಕ್ತ ನಿಧಿ ಕೆಂದ್ರದ ವೈದ್ಯರು, ಹನು ಮಂತಪ್ಪ, ರಮೇಶ್ ಗೋಂಧಿಚಟ್ನಳ್ಳಿ ಪಿಹೆಚ್‌ಸಿ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.