ಡಿ. ೨ರಿಂದ ನಗರದಲ್ಲಿ ಕಗ್ಗ ಬೀರಿದ ಜ್ಞಾನದ ಬೆಳಕು ಉಪನ್ಯಾಸ
ಶಿವಮೊಗ್ಗ:-ಡಿವಿಜಿ ಕಗ್ಗ ಬಳಗ ಶಿವಮೊಗ್ಗ ಹಾಗೂ ಭಜನಾ ಪರಿಷತ್ ವತಿಯಿಂದ ಕಾರ್ತಿಕ ಮಾಸ ನಿಮಿತ್ತ ಡಿ. ೨ರಿಂದ ೮ರವರೆಗೆ ಪ್ರತಿನಿತ್ಯ ಸಂಜೆ ೬.೩೦ರಿಂದ ಕಗ್ಗ ಬೀರಿದ ಜ್ಞಾನದ ಬೆಳಕು ವಿಷಯ ಕುರಿತು ಪ್ರಸಿದ್ಧ ವಾಗ್ಮಿಗಳು ಹಾಗೂ ಮಂಕುತಿಮ್ಮನ ಕಗ್ಗ ಪ್ರವಚನ ಖ್ಯಾತಿಯ ವಿದ್ವಾನ್ ಜಿ.ಎಸ್. ನಟೇಶ್ ಅವರಿಂದ ಉಪನ್ಯಾಸ ಸಪ್ತಾಹ ಏರ್ಪಡಿಸಿದೆ.
ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಈ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸಂಜೆ ೬ರಿಂದ ಸಾಮೂಹಿಕ ಶ್ರೀರಾಮ ಜಯರಾಮ ಜಯಜಯ ರಾಮ ಜಪ ಯಜ್ಞ ನಡೆಯಲಿದೆ.
ಆಸಕ್ತರು ಹಾಗೂ ಭಕ್ತರು ಪಾಲ್ಗೊಳ್ಳುವಂತೆ ಆಯೋಜಕ ಸಂಸ್ಥೆಗಳ ಪರವಾಗಿ ಶಬರೀಶ್ ಕಣ್ಣನ್ ಅವರು ಕೋರಿದ್ದಾರೆ.