ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ದಿನ ಕಳೆದಂತೆ ಸಂವಿಧಾನದ ಆಯಸ್ಸು ಕ್ಷೀಣಿಸುತ್ತಿದೆ: ಮುಕುಂರಾಜ್

Share Below Link

ಶಿವಮೊಗ್ಗ: ಸಂವಿಧಾನದ ಆಯಸ್ಸು ಕ್ಷೀಣಿಸುತ್ತಿದೆ ಎಂದು ಸಾಹಿತಿ ಎಲ್.ಎನ್. ಮುಕುಂದರಾಜ್ ವಿಷಾಧಿಸಿದರು.
೧೮ನೇ ಜಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಸವಾಲುಗಳು ಕುರಿತ ವಿಚಾರ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಸಂವಿಧಾನಿಕ ಆಶಯಗಳು ಕುರಿತು ಮಾತನಾಡಿದರು.
ಜತ್ಯತೀತ ಮೌಲ್ಯಗಳನ್ನೇ ಇಂದು ಧಿಕ್ಕರಿಸುವ ಕಾಲ ಬಂದಿದೆ. ಧರ್ಮಗಳ ನಡುವೆ ಜಗಳ ತಂದು ಇದರ ಲಾಭವನ್ನು ರಾಜಕಾರಣಿ ಗಳು ಪಡೆಯತೊಡಗಿzರೆ. ಸಂವಿಧಾನವನ್ನು ಬದಲಾಯಿಸಲು ಹೊರಟವರನ್ನು ಗೌರವಿಸುವ ಕಾಲ ಬರುತ್ತಿದೆ. ಮೌಲ್ಯಗಳು ಸುಡುತ್ತಿ ದ್ದರೂ ನಾವು ಸುಮ್ಮನಿದ್ದೇವೆ. ಹಾಗಾಗಿ ಸಂವಿಧಾನದ ಆಶಯ ಕ್ಷೀಣಿಸುತ್ತಾ ಸಾಗುತ್ತಿದೆ ಎಂದರು.
ನಾಮ ಹಾಕಿಕೊಂಡು ವಿಜೃಂಭಿಸುವ ದೃಶ್ಯಗಳನ್ನು ನಾವು ನೋಡುತ್ತಿದ್ದೇವೆ. ದೇಶ ಕೇವಲ ಭೂಪಟವಲ್ಲ, ಮನುಷ್ಯರು ಎಂಬುದನ್ನು ನಾವು ಮರೆತಿದ್ದೇವೆ. ಸಾವಿರಾರು ವರ್ಷಗಳ ಕಾಲ ಕನಸು ಕಂಡಿದ್ದ ಬುದ್ಧ, ಬಸವಣ್ಣನ ಸಂವಿಧಾನವನ್ನು ನಾವಿಂದು ಕಡೆಗಾಣಿಸುತ್ತಿದ್ದೇವೆ. ಆದರೆ ಕನ್ನಡ ಸಾಹಿತ್ಯ ಎಂದಿಗೂ ಸಂವಿಧಾನದ ಪರ ಇದೆ. ಪ್ರಭುತ್ವವನ್ನು ವಿರೋಧಿಸುತ್ತಿದ್ದವರು ಅಂದಿಗೂ ಇದ್ದರು. ಇಂದಿಗೂ ಇzರೆ. ಆದರೆ ಪ್ರಭುತ್ವದ ವಿರುದ್ಧ ಮಾತನಾಡು ವುದೇ ಕಷ್ಟವಾಗುತ್ತಿದೆ ಎಂದರು.
ಸಾಂವಿಧಾನಿಕ ಆಶಯಗಳು ಬಸವಣ್ಣನವರ ಕಾಲದಿಂದಲೇ ಜರಿಗೊಂಡಿದ್ದವು. ನಮ್ಮ ಜನಪದರು ರಾಜನನ್ನು ರಾಕ್ಷಸ ಎಂದು ಕರೆದಿದ್ದರು. ಕುಮಾರವ್ಯಾಸನು ತನ್ನ ಕೃತಿಗಳಲ್ಲಿ ಗಟ್ಟಿಯಾಗಿ ಇದನ್ನು ವಿರೋಧಿಸಿzನೆ. ಚಾತುವರ್ಣ ಒಪ್ಪಿದವರು ಮಾನವೀಯತೆ ಮರೆತಿರುತ್ತಾರೆ. ಈ ಎ ತಲ್ಲಣಗಳ ನಡುವೆ ನಾವು ಪ್ರಜಪ್ರಭುತ್ವವನ್ನು ಸಂವಿಧಾನ ವನ್ನು ಗೌರವಿಸಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಜೀವ ವಿರೋಧಿ ನಿಲುವು ಕುರಿತು ಮಾತನಾಡಿದ ಸಾಹಿತಿ ಬಿ. ಚಂದ್ರೇಗೌಡ ಅವರು, ಪುರಾಣ ಕತೆಗಳು ಜೀವ ವಿರೋಧಿಯಾಗಿದ್ದರೂ ನಾವು ಪ್ರಶ್ನೆ ಮಾಡಲಿಲ್ಲ. ಪುರೋಹಿತಶಾಹಿಗಳ ತಂತ್ರಗಳಿಗೆ ಬಲಿಯಾಗಿ ಮಂತ್ರಗಳನ್ನೇ ಶ್ರೇಷ್ಟ ಎಂದು ನಂಬಿದೆವು. ಶೂದ್ರ ತಪಸ್ಸು ಮಾಡಿದ ಎಂಬ ಕಾರಣಕ್ಕೆ ಶಂಭೂಕ ನನ್ನು ಶ್ರೀರಾಮ ಕೊಂದರೂ ಕೂಡ ನಾವು ಸುಮ್ಮನಿzವು ಎಂದರು.
ಕುವೆಂಪು ಅವರ ರಾಮಾಯಣ ದರ್ಶನಂ ಬರುವವರೆಗೂ ರಾಮಾಯಣದ ಜೀವ ವಿರೋಧಿ ನಿಲುವುಗಳು ನಮಗೆ ಅರ್ಥವಾಗಲೇ ಇಲ್ಲ. ಭಾರತದಲ್ಲಿ ಮತೀಯ ಕ್ಷೆಭೆ ಹೆಚ್ಚುತ್ತಿದೆ. ಮತ್ತೆ ಮತ್ತೆ ಪುರೋಹಿತಶಾಹಿಗಳು ವಿಜೃಂಭಿಸುತ್ತಲೇ ಇzರೆ. ಪುರಾಣ ಮತ್ತು ಇತಿಹಾಸಗಳು ನಮ್ಮನ್ನು ಸರ್ವನಾಶ ಮಾಡಿವೆ. ಇವೆಲ್ಲವೂ ಜೀವವಿರೋಧಿಯೇ ಆಗಿವೆ. ಎಸ್.ಎಲ್. ಬೈರಪ್ಪ, ಮಾಸ್ತಿ ಯಂತಹ ಸಾಹಿತಿಗಳು ಒಂದು ಧರ್ಮದ ಪರವಾಗಿ ಧರ್ಮದ ಆಚರಣೆಗಳು ಸಮರ್ಥಿಸಿಕೊಳ್ಳುತ್ತಾ ಜೀವ ವಿರೋಧಿ ಸಾಹಿತ್ಯ ರಚಿಸಿದರೂ ಅವರನ್ನೇ ಶ್ರೇಷ್ಟ ಸಾಹಿತಿ ಎಂದು ನಂಬಿಸಲಾಗುತ್ತಿದೆ ಎಂದರು.
ಜನಪದ ಜಗತೀಕರಣ ಕುರಿತು ಮಾತನಾಡಿದ ಸಾಹಿತಿ ಮೋಹನ್ ಚಂದ್ರಗುತ್ತಿ, ಜಗತೀಕರಣ ಮನುಷ್ಯನ ಸಂವೇದನೆಗಳನ್ನು ನಾಶ ಮಾಡುತ್ತಿದೆ. ಮಾರ್ಕೇಟ್ ಸಂಸ್ಕೃತಿಯನ್ನು ಹುಟ್ಟಿಸಿ ವ್ಯಾಪಾರೀಕರಣದ ಹುನ್ನಾರದ ಕಬಂಧಬಾಹುಗಳನ್ನು ಚಾಚಿಕೊಂಡಿದೆ. ನಮ್ಮ ಜನಪದರು ಈ ಜಗತೀಕರಣವನ್ನು ಅತ್ಯಂತ ಜಣತನದಿಂದ ವಿರೋಧಿಸಿದ್ದರು. ಮನುಷ್ಯನ ಅವಲಂಬನೆಗಳನ್ನು ಕಸಿದುಕೊಳ್ಳುವ ಜಗತೀಕರಣ ಮನುಷ್ಯ ಪ್ರೇಮವನ್ನೇ ಮತ್ತು ಸೂಕ್ಷ್ಮತೆಯನ್ನೇ ಕೊನೆಗಾಣಿಸಿದೆ. ಲಾಭಕೋರತನ ಪ್ರವೇಶ ಮಾಡಿ ಮನುಷ್ಯನ ವಿವೇಕ ಕಸಿದು ಕೊಂಡಿದೆ. ಆದರೂ ೧೧ ಕೋಟಿ ಜನರು ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಕಾಲದಲ್ಲಿಯೂ ನಾವು ಮತ್ತೆ ಮತ್ತೆ ಹೆಮ್ಮೆಯಿಂದ ಜಗತೀಕರಣವನ್ನು ಸಮರ್ಥಿಸಿ ಕೊಳ್ಳುತ್ತಿದ್ದೇವೆ. ಪ್ರಭುತ್ವ ಜಗತೀಕರಣದೊಂದಿಗೆ ಶಾಮೀಲಾಗಿ ಮನುಷ್ಯ ಪ್ರೀತಿ ಯನ್ನು ಮರೆ ಮಾಡಿದೆ ಎಂದರು.
ನಮ್ಮ ಜನಪದರು ಬಹುಹಿಂದಿನ ಕಾಲದಿಂದಲೂ ಪ್ರಭುತ್ವದ ವಿರುದ್ಧ ಮತ್ತು ಇಂತಹ ಜಗತೀಕರಣದ ವಿರುದ್ಧ ಅತ್ಯಂತ ಜಣ್ಮೆಯಿಂದ ವಿರೋಧಿಸುತ್ತಲೇ ಬಂದಿzರೆ. ಕತೆ, ಕವಿತೆ, ಒಗಟು, ಕ್ರೀಡೆಗಳು, ವಾದ್ಯಗಳ ಮೂಲಕ ಶ್ರೀಮಂತರ ಮತ್ತು ಬಂಡವಾಳ ಶಾಹಿಗಳ ವಿರುದ್ಧ ಧ್ವನಿ ಎತ್ತಿzರೆ. ಶ್ರೀಮಂತರ ಸೊಕ್ಕು ಪ್ರಶ್ನಿಸುವ ಮತ್ತು ಅವರ ವಿರುದ್ಧ ಸೆಟೆದು ನಿಲ್ಲುವಂತ ಡೊಳ್ಳು ವಾದ್ಯ ಹುಟ್ಟಿಕೊಂಡಿತು. ಕೋಲಾಟ ಕೂಡ ಒಂದು ಸಂಘಟನಾತ್ಮಕ ಶಕ್ತಿಗೆ ಉದಾಹರಣೆಯಾಯಿತು. ಧರ್ಮ, ಜತಿ, ಕೋಮಿನ ವಿರುದ್ಧ ಮತ್ತು ಇದನ್ನು ಸಮರ್ಥಿಸಿಕೊಳ್ಳುವ ಪ್ರಭುತ್ವದ ವಿರುದ್ಧ ನಮ್ಮ ಜನಪದರು ದಂಗೆ ಏಳುವ ಕಾಲ ದೂರ ಇಲ್ಲ ಎಂದರು.
ವಿಶ್ರಾಂತ ಪ್ರಾಂಶುಪಾಲ ಡಾ. ಮಾರ್ಷಲ್ ಶರಾವ್ ಅಧ್ಯಕ್ಷತೆ ವಹಿಸಿದ್ದರು. ಅನಿತಾ ನಿರೂಪಿಸಿದರು, ಭಾರತಿ ರಾಮಕೃಷ್ಣ ಸ್ವಾಗತಿಸಿದರು. ಸುಧಾಮಣಿ ವಂದಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್, ಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಉಪಸ್ಥಿತರಿದ್ದರು. ನಂತರ ಸುವರ್ಣ ಸ್ವರ ಸಂಭ್ರಮ ಸಂಗೀತ ಕಾರ್ಯಕ್ರಮ ನಡೆಯಿತು.