ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಆಹ್ವಾನ ವಾಟ್ಸಾಪ್‌ನಲ್ಲಿ…!! ಮಾತು ಕಥೆ ನೇರ ಇಲ್ಲ…

Share Below Link

ಟಚ್‌ಸ್ಕ್ರೀನ್ ಮೊಬೈಲ್ ಬರುವ ತನಕ ಕಡೆ ಪಕ್ಷ ಬಟನ್ ಒತ್ತಿ ಮಾತಾಡುವ ಮೊಬೈಲ್‌ನಲ್ಲಿ ಮಾತಾಡಿ ನಮ್ಮಲ್ಲಿ ಇಂತಹ ಕಾರ್ಯಕ್ರಮ ಇದೆ, ದಯಮಾಡಿ ಬನ್ನಿ ಎಂದು ಹೇಳುವ ಅಥವಾ ಕಷ್ಟ ಸುಖ ಹಂಚಿಕೊಳ್ಳುವ ಸಮಯಾವಕಾಶವಿತ್ತು. ಅದಕ್ಕೂ ಹಿಂದೆ ಎಲ್ಲರೂ ಮನೆಗೆ ಬಂದು ಆಹ್ವಾನ ಪತ್ರಿಕೆಯನ್ನು ನೀಡಿ ಕಾಫಿ ಕುಡಿದು ಆತ್ಮೀಯತೆಯಿಂದ ಮಾತನಾಡಿ ತಪ್ಪದೇ ಕಾರ್ಯಕ್ರಮಕ್ಕೆ ಬರಬೇಕೆಂದು ಹೇಳುವ ಸಂಪ್ರದಾಯದ ಕಾಲವಿತ್ತು. ಜೊತೆಗೆ ದೂರದ ಊರಿನಲ್ಲಿದ್ದವರಿಗೆ ಕರೆಯೋಲೆ ಯೊಂದಿಗೆ ಪ್ರತ್ಯೇಕವಾಗಿ ಫೋನ್‌ನಲ್ಲಿ ಆತ್ಮೀಯತೆಯೊಂದಿಗೆ ಮಾತಾಡಿ ಕಾರ್ಯಕ್ರಮಕ್ಕೆ ಬರಬೇಕೆಂಬ ಆಪ್ಯಾಯಮಾನವಿರುತ್ತಿತ್ತು.
ಈಗ ಏನಾಗಿದೆ ಎಂದರೆ ಎಲ್ಲವೂ ವಾಟ್ಸಾಪ್‌ನಲ್ಲಿಯೇ! ಯಾರೋ ಅತ್ಯಂತ ದೊಡ್ಡವರು, ಗಣ್ಯರು, ತಮಗೆ ಅವರಿಂದ ಕೆಲಸ ಆಗಲೇಬೇಕು ಎನ್ನುವವರಿಗೆ ಮಾತ್ರ ನೇರವಾಗಿ ಮನೆಗೆ ಬಂದು ಹೇಳುವ ಒಂದಿಷ್ಟು ಸಂಪ್ರದಾಯ ಉಳಿದುಕೊಂಡಿದೆ. ಬಹಳ ವಿಚಿತ್ರವೆಂದರೆ ನಮ್ಮ ಹೆಣ್ಣು ಮಕ್ಕಳು, ಗೃಹಿಣಿಯರು, ತಾಯಿಂದರು, ಸಹ ಮನೆಯಲ್ಲಿ ನಡೆಯುವ ಪೂಜ ಕಾರ್ಯಕ್ರಮ ಗಳಿಂದ ಹಿಡಿದು ಮದುವೆ , ಮುಂಜಿ ಇತ್ಯಾದಿ ಶುಭ ಕಾರ್ಯಕ್ರಮಗಳಿಗೂ ಅಕ್ಕಪಕ್ಕದ ಮನೆಗಳಿದ್ದರೂ ಸಹ ವಾಟ್ಸಪ್‌ನಲ್ಲಿಯೇ ನಮ್ಮಲ್ಲಿ ಇಂತಹ ಕಾರ್ಯಕ್ರಮವಿದೆ. ತಾವೆಲ್ಲ ತಪ್ಪದೇ ಬರಬೇಕೆಂಬ ಮೆಸೇಜ್ ಕಳುಹಿಸುತ್ತಿzರೆ. ಬಾರದೇ ಇದ್ದರೆ ವಾಟ್ಸಾಪ್‌ನಲ್ಲಿ ಅವರಿಗೆ ಮೆಸೇಜ್ ಕಳುಹಿಸಿದರೂ ವಾಟ್ಸಾಪ್ ನೋಡದೇ ಇರುವಷ್ಟು ಅವರು ಬ್ಯುಸಿಯೇ? ಎಂದು ಕುಟುಕುತ್ತಾರೆ.


ಅಕ್ಕಪಕ್ಕದ ಮನೆಗಳ ಗಂಡಸರಾಗಲೀ, ಹೆಂಗಸರಾಗಲೀ ಎದುರಿಗೆ ಸಿಕ್ಕಿದರೂ ಸಹ ಒಂದು ಮುಗುಳ್ನಗೆಯಾಗಲಿ ಒಂದಿಷ್ಟು ಮಾತುಕತೆಯಾಗಲಿ ಇರುವುದೇ ಇಲ್ಲ. ಆದರೆ ಪ್ರತಿದಿನ ಬೆಳಗ್ಗೆ ವಾಟ್ಸಾಪ್‌ನಲ್ಲಿ ಶುಭೋದಯ, ಗುಡ್ ಮಾರ್ನಿಂಗ್, ಗುಡ್ ಈವನಿಂಗ್, ಅಲ್ಲದೆ ಮಹಾತ್ಮರ ನುಡಿಮುತ್ತುಗಳನ್ನು ಕಳುಹಿಸುವುದ ರಲ್ಲಿ ಮಾತ್ರ ಒಂದು ದಿನವೂ ತಪ್ಪುವುದೇ ಇಲ್ಲ.
ವಾಟ್ಸಾಪ್‌ನಲ್ಲಿ ಕಳುಹಿಸುವ ಮಹಾತ್ಮರ ನುಡಿಮುತ್ತುಗಳನ್ನು ನೋಡಿದರೆ ಇವರು ಎಷ್ಟು ವಿಷಯಗಳನ್ನು ತಿಳಿದು ಕೊಂಡಿzರೆ. ಇವರ ವ್ಯಕ್ತಿತ್ವ ಎಷ್ಟು ದೊಡ್ಡದು ಎನ್ನುವಂತಿರುತ್ತದೆ.
ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರೀತಿ ವಿಶ್ವಾಸಗಳು, ಮಾತು ಕಥೆ ಎಲ್ಲವೂ ಮೊಬೈಲಿನಲ್ಲಿಯೇ ನಡೆಯುತ್ತದೆ. ಹೀಗಾಗಿ ಮೊಬೈಲ್ ಮಾತ್ರ ಅವರ ಅಚ್ಚುಮೆಚ್ಚಿನ ಸಂಗಾತಿ. ಸರ್ವಸ್ವ. ಅದು ಒಂದಿದ್ದರೆ ಬೇರೆ ಯಾರು ಬೇಡ. ಅದುವೇ ಅವರ ಕುಟುಂಬ ಜಗತ್ತು!!
ಮೊನ್ನೆ ನಮ್ಮ ನೆರೆಹೊರೆಯವರ ಮೊಬೈಲ್ ಆಕಸ್ಮಿಕವಾಗಿ ಕಳೆದುಕೊಂಡರು. ಅವರು ಎಷ್ಟು ರೋಧಿಸುತ್ತಿz ರೆಂದರೆ ಮನೆಯಲ್ಲಿಒಬ್ಬ ಸದಸ್ಯನನ್ನು ಕಳೆದುಕೊಂಡಂತೆ , ಮೃತರಾದಂತೆ ಬಾಯಿ ಬಾಯಿ ಬಡೆದುಕೊಳ್ಳುತ್ತಿದ್ದರು. ನೋಡಿದರೆ ಅವರ ಮೊಬೈಲ್ ಕಳೆದು ಹೋಗಿದೆಅಷ್ಟೇ. ಅದರಲ್ಲಿ ಆ ದಿನ ಬೆಳಗ್ಗೆಯೇ ಎಷ್ಟೋ ಜನರಿಗೆ ವಾಟ್ಸಾಪ್‌ನಲ್ಲಿ ಶುಭೋದಯವನ್ನು ಹಾಗೂ ಮೆಸೇಜನ್ನು ಕಳುಹಿಸಬೇಕಿತ್ತಂತೆ!!!
ಆದರೆ ಬೆಳಗ್ಗೆಯೇ ಮೊಬೈಲ್ ಕಳೆದು ಹೋಗಿರಬೇಕೇ? ಅವತ್ತೇ ನೋಡಿ , ಅವರು ನೇರವಾಗಿ ನಮ್ಮ ಹತ್ತಿರ ಮಾತಾಡಿದ್ದು !! ಮೊಬೈಲ್ ಇzಗ ಒಂದು ದಿವಸವೂ ನಮ್ಮ ಕಡೆ ನೋಡಿದದಾಗಲೀ ಮಾತಾಡಿzಗಲೀ ಇರಲೇ ಇಲ್ಲ.
ಆಗ ನಮಗನಿಸಿದ್ದು ಒಂದೇ. ಇವರದ್ದು ಪ್ರತಿದಿನ ಮೊಬೈಲು ಏಕೆ ಕಳೆದುಹೋಗಬಾರದು? ಆಗಲಾದರೂ ಮನ ಬಿಚ್ಚಿ ನಮ್ಮ ಹತ್ತಿರ ಮಾತಾಡಿಸುತ್ತಾರಲ್ಲ ಎಂದೆನಿಸಿತ್ತು.


ವಿಚಿತ್ರ ಆದರೂ ಸತ್ಯ ಅಂತಾರಲ್ಲ ನೋಡಿ ಮೊಬೈಲ್ ನಲ್ಲಿ ಎಷ್ಟು ಹೊತ್ತು ಬೇಕಾದರೂ ಮಾತನಾಡುತ್ತಾರೆ. ಆದರೆ ನೇರವಾಗಿ ಸಿಕ್ಕಿದಾಗ ಆತ್ಮೀಯತೆ ಇಲ್ಲ. ಮಾತು ಇಲ್ಲ, ಒಂದು ಚಿಕ್ಕ ಮುಗುಳ್ನಗೆ ಇಲ್ಲ. ಏನೋ ಅಪರಿಚಿತರಂತೆ ನೋಡಿ ಒಂದೆರಡು ಮಾತಾಡುವ ಅಥವಾ ಬೇಡವಾ ಎನ್ನುವಂತೆ ಮಾತಾಡಿ ಹೋಗುವ ಪರಿಸ್ಥಿತಿಗೆ ಬಂದಿzವೆ ಎನ್ನುವಂತಾಗಿದೆ . ನಾವು ಮಾತ್ರ ಅಲ್ಲ . ಎಲ್ಲರೂ ಹೆಚ್ಚು ಕಡಿಮೆ ಇದೇ ರೀತಿಯಾಗಿ ಬಿಟ್ಟಿzರೆ.
ನಿಮ್ಮ ಕಡೆ ಅಕ್ಕಪಕ್ಕದವರು ಕೇರಿಯವರು ಮೊಬೈಲ್‌ನ ವಾಟ್ಸಾಪ್ ಚಾಟ್‌ಗಿಂತ ಹೆಚ್ಚಾಗಿ ನಿಮ್ಮ ಜೊತೆಗೆ ನೇರವಾಗಿ ಸಿಕ್ಕಿದಾಗಲೂ ಪ್ರೀತಿ ವಿಶ್ವಾಸಗಳಿಂದ ಸ್ವಲ್ಪ ಹೊತ್ತಾದರೂ ಮಾತಾಡುತ್ತಿದ್ದರೆ ಅಥವಾ ಅವರ ಕಾರ್ಯಕ್ರಮಗಳಿಗೆ ನಿಮ್ಮ ಮನೆಗೆ ಬಂದು ಆಹ್ವಾನ ನೀಡಿ ಆತ್ಮೀಯತೆಯಿಂದ ಮಾತನಾಡು ತ್ತಿದ್ದರೇ ನಿಮ್ಮಕಡೆಯಲ್ಲಂತೂ ಇನ್ನೂ ಪರಂಪರೆ ಸಂಪ್ರದಾಯ ಉಳಿದಿದೆ. ನೀವೇ ಅದೃಷ್ಟವಂತರು ಎನ್ನಬಹುದು.
ಮಾರ್ಪಳ್ಳಿ ಆರ್. ಮಂಜುನಾಥ್