ತುರ್ತು ಸಂದರ್ಭಗಳಲ್ಲಿ ರಕ್ತದ ಮಹತ್ವ ಅರಿವಾಗುತ್ತದೆ..
ನ್ಯಾಮತಿ: ನ್ಯಾಮತಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿ ಆರೋಗ್ಯ ಇಲಾಖೆ ದಾವಣಗೆರೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ ನ್ಯಾಮತಿ , ಆರೋಗ್ಯ ರಕ್ಷಾ ಸಮಿತಿ, ಚಿಗಟೇರಿ ಜಿ ಆಸ್ಪತ್ರೆ ರಕ್ತ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿ ಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ್‍ನ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಕಲಾ, ವಾಣಿಜ್ಯ, ಬಿಬಿಎ ವಿಭಾಗದ ಒಟ್ಟು ೧೩ ವಿದ್ಯಾರ್ಥಿಗಳು ದಾವಣಗೆರೆ ಚಿಗಟೇರಿ ಜಿ ಆಸ್ಪತ್ರೆಯ ರಕ್ತ ಭಂಡಾರಕ್ಕೆ ರಕ್ತದಾನ ಮಾಡಿದರು.
ಕಾಲೇಜಿನ ಉಪನ್ಯಾಸಕ ಎಂ.ಬಿ. ರೇವಣಸಿದ್ದಪ್ಪ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿ, ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯು ತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಒಬ್ಬರ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸ ಬಹುದಾಗಿದೆ ಎಂದು ಹೇಳಿ ರಕ್ತ ದಾನದ ಮಹತ್ವ ವಿವರಿಸಿದರು.
ಸ್ವಯಂ ಪ್ರೇರಿತ ರಕ್ತದಾನ ಕುರಿತು ಕಾಲೇಜಿನ ಉಪನ್ಯಾಶಕರಾದ ಸಂಗಪ್ಫ ಔರಸಂಗ, ಡಾ. ಜಿ.ಆರ್. ರಾಜಶೇಖರ್, ಜ್ಯೋತಿ ಎನ್. ಹೊನ್ನಾಳಿ ಆರೋಗ್ಯ ಕೇಂದ್ರದ ಬಾಗಮ್ಮ , ಆರೋಗ್ಯ ನಿರೀಕ್ಷಕ ನಿಂಗಪ್ಪ, ಪರಮೇಶ್ವರಪ್ಪ ಮಾತನಾಡಿದರು.
ಪ್ರಾಂಶುಪಾಲರಾದ ಟಿ.ಸಿ. ಭಾರತಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯರಾದ ಹೊಸಮನೆ ಮಲ್ಲಿಕಾರ್ಜುನ ಕುಂಬಾರ, ಸೋಮಶೇಖರ, ಗೀತನಾಗಪ್ಪ, ಆಸ್ಪತ್ರೆಯ ಕುಸುಮ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕ ಇಮ್ರಾನ್, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿ ಗಳು, ಆಶಾ ಕಾರ್ಯಕರ್ತೆರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.