ಜಿಲ್ಲಾ ಸುದ್ದಿತಾಜಾ ಸುದ್ದಿ

ಅ.೩ರ ನಾಳೆಯಿಂದ ಅದ್ದೂರಿ ಶಿವಮೊಗ್ಗ ದಸರಾ…

Share Below Link

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ. ೩ರಿಂದ ೧೨ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮ ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಅ.೩ರ ನಾಳೆ ಬೆಳಿಗ್ಗೆ ೧೧ ಗಂಟೆಗೆ ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ನೆರವೇರಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿರುತ್ತಾರೆ.
ಮಧ್ಯಾಹ್ನ ೨.೩೦ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ದಸರಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರುಗಲಿದ್ದು, ಕರ್ನಾಟಕ ಸಂಘದ ಪೂರ್ವಾಧ್ಯಕ್ಷ ಎಂ.ಎನ್. ಸುಂದರರಾಜ್ ಉದ್ಘಾಟಿಸಲಿದ್ದು, ಹಲವು ಗಣ್ಯರು ಉಪಸ್ಥಿತರಿರು ವರು. ನಂತರ ಕವಿಗೋಷ್ಟಿ, ಪುಟಾಣಿ ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು ದಾಕ್ಷಾಯಣಿ ರಾಜ್ ಕುಮಾರ್, ಶ್ರೀಮತಿ ವಿದ್ಯಾ ಸಂಘಡಿಗರಿಂದ ಸುಗಮ ಸಂಗೀತ ವಿದೆ. ವಿಶೇಷ ಆಕರ್ಷಣೆಯಾಗಿ ಜ್ಯೂ. ವಿಷ್ಣುವರ್ಧನ್ ಖ್ಯಾತಿಯ ಡಾ| ಅಪೇಕ್ಷಾ ಮಂಜುನಾಥ್‌ರಿಂದ ನೃತ್ಯ ಕಾರ್ಯಕ್ರಮ ಇರುತ್ತದೆ.
ಅ.೩ರ ನಾಳೆ ಸಂಜೆ ೫.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಯಕ್ಷ ದಸರಾ ಕಾರ್ಯಕ್ರಮವಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಂ.ಕೆ. ರಮೇಶಾಚಾರ್ಯ ಉದ್ಘಾಟಿಸ ಲಿದ್ದಾರೆ. ಶಾಸಕ ಚನ್ನಬಸಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು. ನಂತರ ಶ್ರೀಮತಿ ಸಹನಾ ಪಿ.ಜಿ. ಮತ್ತು ಸಂಗಡಿಗರಿಂದ ಸುಗಮ ಸಂಗೀತ ನಾಟ್ಯಶ್ರೀ ಕಲಾತಂಡ ಮತ್ತು ಬಡಗುತಿಟ್ಟಿನ ಕಲಾವಿದರಿಂದ ಲಂಕಾದಹನ ಯಕ್ಷಗಾನ, ಶ್ರೀ ಮಹಾಗಣಪತಿ ಯಕ್ಷಕಲಾ ಬಳಗದಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನವಿರುತ್ತದೆ.
ಅ.೪ರ ಶುಕ್ರವಾರ ಸಂಜೆ ೪.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಸರಾ, ಅದೇ ದಿನ ಬೆಳಿಗ್ಗೆ ೯.೩೦ಕ್ಕೆ ಅಂಬೇಡ್ಕರ್ ಭವನದಲ್ಲಿ ದಸರಾ ಚಿತ್ರೋತ್ಸವ ಹಾಗೂ ಸಂಜೆ ೪.೩೦ರಿಂದ ಅಂಬೇಡ್ಕರ್ ಭವನ ದಲ್ಲಿ ಪತ್ರಕರ್ತರ ದಸರಾ ಕಾರ್ಯಕ್ರಮ ಜರುಗಲಿದೆ.
ಅ.೫ರ ಶನಿವಾರ ಸಂಜೆ ೫ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಮಕ್ಕಳ ದಸರಾ ಸಮಾರೋಪ ಜರುಗಲಿದೆ. ಅದೇ ದಿನ ಬೆಳಿಗ್ಗೆ ೯ ಗಂಟೆಗೆ ಸೈನ್ಸ್ ಮೈದಾನದಲ್ಲಿ ರೈತ ದಸರಾ ಕಾರ್ಯಕ್ರಮವಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ. ಅಂದೇ ದಿನ ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಚಲನ ಚಿತ್ರ ರಸಗ್ರಹಣ ಕಾರ್ಯಕ್ರಮ ಹಾಗೂ ಅಂದು ಸಂಜೆ ೫ರಿಂದ ಕುವೆಂಪು ರಂಗದಸರಾ ಜರುಗಲಿದೆ. ಸಂಜೆ ೭.೩೦ರಿಂದ ರಂಗಗೀತೆ ಗಾಯನ ತರಬೇತಿ ಮತ್ತು ಪ್ರಸ್ತುತಿ ಕಾರ್ಯಕ್ರಮ ಜರುಗಲಿದೆ.
ಅ. ೬ರ ಭಾನುವಾರ ಬೆಳಿಗ್ಗೆ ೬ಕ್ಕೆ ಕುವೆಂಪು ರಂಗಮಂದಿರದಲ್ಲಿ ಯೋಗ ದಸರಾ ಜರುಗಲಿದ್ದು, ಅಂದು ಸಂಜೆ ೬ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಯುವ ದಸರಾ ಜರುಗಲಿದೆ. ಅದೇ ದಿನ ಬೆಳಿಗ್ಗೆ ೧೦.೧೫ರಿಂದ ಕುವೆಂಪು ರಂಗಮಂದಿರದಲ್ಲಿ ಮಕ್ಕಳ ರಂಗದಸರಾ ಕಾರ್ಯಕ್ರಮವಿದೆ. ಅಂದೇ ದಿನ ಸಂಜೆ ೭ರಿಂದ ಕುವೆಂಪು ರಂಗಮಂದಿರದಲ್ಲಿ ಮಹಿಳಾ ನಿರ್ದೇಶನದ ನಾಟಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೯ರಿಂದ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಗಮಕ ದಸರಾ, ಬೆಳಿಗ್ಗೆ ೭ ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಪರಿಸರ ದಸರಾ ನಿಮಿತ್ತ ಸೈಕಲ್ ಜಾಥಾ ಜರುಗಲಿದೆ.

Leave a Reply

Your email address will not be published. Required fields are marked *