ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸರ್ಕಾರ ಮೊದಲಿಗೆ ರಾಜ್ಯದ ಜನರ ಕ್ಷಮೆ ಕೇಳಿ ಬಳಿಕ ವಾಲ್ಮೀಕಿ ಜಯಂತಿ ಆಚರಿಸಬೇಕಿತು…

Share Below Link

ಶಿವಮೊಗ್ಗ: ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿ ಈ ಬಾರಿ ಅದ್ಧೂರಿಯಾಗಿ ಆಚರಿಸಿದೆ. ವಿಶೇಷವಾಗಿ ಜಹಿರಾತು ನೀಡಿದ್ದು, ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ ಸರ್ಕಾರ ಯಾವ ಮುಖ ಇಟ್ಟು ಈ ಜಯಂತಿ ಆಚರಿಸು ತ್ತಿದೆ ಎಂದು ಮಾಜಿ ಗೃಹಮಂತ್ರಿ ಆರಗಜನೇಂದ್ರ ಪ್ರಶ್ನಿಸಿದ್ದಾರೆ.


ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್, ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಈ ನಿಗಮದ ಅವ್ಯವಹಾರ ಬೆಳಕಿಗೆ ಬಂದಿದೆ. ಆದ್ದರಿಂದ ಸರ್ಕಾರ ಮೊದಲು ರಾಜ್ಯದ ಜನರ ಕ್ಷಮೆ ಕೇಳಿ ಬಳಿಕ ವಾಲ್ಮೀಕಿ ಜಯಂತಿ ಆಚರಣೆ ಮಾಡಬೇಕಿತ್ತು ಎಂದರಲ್ಲದೇ, ಮೊದಲು ಮುಖ್ಯಮಂತ್ರಿಗಳು ಹಗರಣವೇ ನಡೆದಿಲ್ಲ,ಮಂತ್ರಿಗಳು ಭಾಗಿಯಾಗಿಲ್ಲ ಎಂದರು. ಚಂದ್ರಶೇಖರ್ ಅವರ ಡೆತ್ ನೋಟ್‌ನಲ್ಲಿ ಮಂತ್ರಿಗಳ ಹೆಸರು ಇತ್ತು, ಆದರೂ ತನಿಖೆಗೆ ಎಸ್‌ಐಟಿ ನೇಮಕ ಮಾಡಿ ಎಫ್‌ಐಆರ್‌ನಲ್ಲಿ ಮಂತ್ರಿಗಳ ಹೆಸರು ಕೈಬಿಡಲಾಗಿತ್ತು. ಇಡಿ ಈ ಪ್ರಕರಣಕ್ಕೆ ಕೈಹಾಕಿದ ಮೇಲೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಸಚಿವ ನಾಗೇಂದ್ರರೇ ಈ ಪ್ರಕರಣದ ಕಿಂಗ್‌ಪಿನ್ ಎಂದು ಹೇಳಿದೆ. ೮೭ಕೋಟಿ ಹಗರಣ ಆಗಿದ್ದು ನಿಜ ಎಂದು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಇಡಿ ಚಾರ್ಜ್‌ಶೀಟ್‌ನಲ್ಲಿ ೧೪.೮ ಕೋಟಿ ರೂ., ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕೂಡ್ಲಿಗೆ ಶಾಸಕ ಶ್ರೀನಿವಾಸ್ ಅವರ ಮೂಲಕ ಮತದಾರರಿಗೆ ಹಂಚಲಾಗಿದೆ ಎಂದು ದಾಖಲೆ ಸಹಿತ ಇಡಿಹೇಳಿದೆ. ಆದರೆ, ಎಸ್.ಐ.ಟಿ., ಚಾರ್ಜ್‌ಶೀಟ್‌ನಲ್ಲಿ ಯಾವುದೇ ಅಂಶಗಳಿಲ್ಲದೆ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಅದಕ್ಕಾಗಿಯೇ ಬಿಜೆಪಿ ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದೆ ಅಲ್ಲದೆ, ತೆಲಂಗಾಣದ ಹಲವು ಬೇನಾಮಿ ಖಾತೆಗಳಿಗೆ ನಿಗಮದ ಹಣ ಜಮಾ ಯಾಗಿದೆ ಎಂದರು.
ಮೃತ ಚಂದ್ರಶೇಖರ್ ಪತ್ನಿ, ಹೇಳಿಕೆ ಯನ್ನು ಮೂರು ಬಾರಿ ಬದಲಾಯಿಸ ಲಾಗಿದೆ. ಶಿವಮೊಗ್ಗದ ಡಿ.ವೈ.ಎಸ್.ಪಿ. ಅವರು ತಾವೇ ಹೇಳಿಕೆ ಬರೆದು ಚಂದ್ರಶೇಖರ್ ಪತ್ನಿಯ ಸಹಿ ಹಾಕಿಸಿ ಕೊಂಡಿದ್ದಾರೆ. ಡೆತ್‌ನೋಟ್ ಅನ್ವಯ ಎಫ್.ಐ.ಆರ್. ದಾಖಲಿಸಿಲ್ಲ ಎಂದರು.
ವಾಲ್ಮೀಕಿ ಸಮುದಾಯದ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ವೇತನ, ಭೂಮಿ ಖರೀದಿಗೆ ಸಹಾಯ ಧನ, ಮಾರ್ಚ್ ಅಂತ್ಯದೊಳಗೆ ನೀಡ ಬೇಕಿತ್ತು. ಅದನ್ನು ನಿಗಮದಿಂದ ನೀಡದೆ ಆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ . ಈ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಗುತ್ತಿಗೆದಾ ರರಿಗೆ ಹಣ ನೀಡದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ವೇತನ ಬಿಡುಗಡೆಯಾಗಿಲ್ಲ. ಗ್ಯಾರಂಟಿ ಕೂಡ ವಿಫಲವಾಗಿದೆ ಎಂದರು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಪ್ರಮುಖರಾದ ಎಸ್.ದತ್ತಾತ್ರಿ, ಜನೇಶ್ವರ್, ಶಿವರಾಜ್, ಚಂದ್ರ ಶೇಖರ್, ಅಣ್ಣಪ್ಪ ಇದ್ದರು.