ಜಿಲ್ಲಾ ಸುದ್ದಿತಾಜಾ ಸುದ್ದಿ

ಭಗವದ್ಗೀತಾ ಅಭಿಯಾನದಲ್ಲಿ ಸಾವಿರ ಉಪನ್ಯಾಸಗಳ ಗುರಿ…

Share Below Link

ಶಿವಮೊಗ್ಗ : ಈ ಬಾರಿಯ ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ ೨೦೨೫ರಲ್ಲಿ ರಾಜದ್ಯಂತ ೧,೦೦೦ ಉಪನ್ಯಾಸ ಗಳನ್ನು ಏರ್ಪಡಿಸುವ ಗುರಿ ಹೊಂದಲಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತಿಳಿಸಿದರು.
ಅವರು ಇಂದು ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಅಭಿಯಾನಕ್ಕೆ ಶಿವಮೊಗ್ಗ ಸೇರಿ ದಂತೆ ಉತ್ತಮ ಸ್ಪಂದನೆ ದೊರೆ ಯುತ್ತಿದೆ. ಶಿವಮೊಗ್ಗ ಜಿಯಲ್ಲಿ ೫೦೦ ಕಾರ್ಯಕ್ರಮಗಳು, ರಾಜ್ಯದ ಇತರೆಡೆ ೫೦೦ ಕಾರ್ಯ ಕ್ರಮಗಳನ್ನು ಆಯೋಜಿಸಲಾ ಗುತ್ತಿವೆ ಎಂದು ಪೂಜ್ಯರು ಮಾಹಿತಿ ನೀಡಿದರು.
ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಎ ಸಮಾಜದವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಈ ಬಾರಿಯ ಭಗವದ್ಗೀತೆಯ ೧೧ನೇ ಅಧ್ಯಾಯವನ್ನು ಅಧ್ಯಯನ ಮಾಡುತ್ತಿzರೆ. ಅ.೨೫ ರಂದು ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಅಭಿಯಾನದ ಉದ್ಘಾಟನೆ ಆಗು ತ್ತಿದ್ದು, ನ.೩೦ರಂದು ಅಲ್ಲಮಪ್ರಭು ಮೈದಾನದಲ್ಲಿ ರಾಜ್ಯಮಟ್ಟದ ಮಹಾಸಮರ್ಪಣೆ ನಡೆಯುತ್ತದೆ ಎಂದ ಅವರು ವಿಶ್ವವಿದ್ಯಾಲಯ ಗಳಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕಾಯ್ದೆಗಳ ಕುರಿತ ವಿಚಾರಸಂಕಿರಣ ಹಮ್ಮಿಕೊಳ್ಳಲಾ ಗುವುದು. ವಿಶ್ವವಿದ್ಯಾಲಯದ ಆಡಳಿತಗಳು ಸಂತೋಷದಿಂದ ಈ ವಿಚಾರಸಂಕಿರಣಗಳನ್ನು ಆಯೋಜಿಸುತ್ತಾರೆ ಎಂದರು.
ಇಂದಿನಿಂದ ಅ.೧೮ರ ವರೆಗೆ ಶಿವಮೊಗ್ಗದ ವಿವಿಧ ತಾಲೂಕುಗಳು, ಹೋಬಳಿಗಳಲ್ಲಿ ಅಭಿಯಾನದ ಕುರಿತು ಸಭೆ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರಮುಖರಾದ ಈಶ್ವರಪ್ಪ, ಡಿ.ಎಸ್.ಅರುಣ್, ಅಶೋಕ್ ಜಿ.ಭಟ್, ಪ್ರಸನ್ನಕುಮಾರ್, ಡಾ. ಬಾಲಕೃಷ್ಣ ಹೆಗಡೆ, ಪಿ.ಪಿ.ಹೆಗಡೆ, ಸಂದೇಶ್ ಉಪಾಧ್ಯ, ಜಿಎಸ್‌ಬಿ ಸಮಾಜದ ಪ್ರಮುಖರಾದ ಭಾಸ್ಕರ ಕಾಮತ್, ರಮೇಶ್ ಶೆಣೈ, ಅನಂತ ಶಾನಭಾಗ ಮೊದಲಾದವರಿದ್ದರು.