ಜಿಲ್ಲಾ ಸುದ್ದಿತಾಜಾ ಸುದ್ದಿ

ಆಹಾರ ಇಲಾಖೆ ಕಛೇರಿಯನ್ನು ಸೂಡಾ ಕಟ್ಟಡಕ್ಕೆ ಸ್ಥಳಾಂತರಿಸಿ….

Share Below Link

ಶಿವಮೊಗ್ಗ: ಗೋಪಾಳ ದಲ್ಲಿರುವ ಆಹಾರ ಇಲಾಖೆಯ ಕಛೇರಿಯನ್ನು ಸೂಡಾ ಆವರಣಕ್ಕೆ ವರ್ಗಾಯಿಸಬೇಕು ಎಂದು ಶಾಂತಾವೇರಿಗೋಪಾಲಗೌಡ ಸಮಾಜದವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿತು.
ಆಹಾರ ಇಲಾಖೆಯ ಕಛೇರಿಯು ನಗರದ ಹೊರಭಾಗ ದಲ್ಲಿದೆ. ಇದು ದೂರವಿರುವು ದರಿಂದ ಹಿರಿಯರು, ನಾಗರೀಕರು, ಮಹಿಳೆಯರು, ಓಡಾಡುವುದು ಕಷ್ಟವಾಗುತ್ತದೆ. ಅದರಲ್ಲೂ ಬಡವರು ಈ ಕಛೇರಿಗೆ ಹೋಗ ಬೇಕು ಎಂದರೆ ಆಟೋಗಳಿಗೆ ಸುಮಾರು ೨೫೦ ರೂ.ಗಳನ್ನು ಭರಿಸಬೇಕಾಗುತ್ತದೆ. ಇದು ಕಷ್ಟಸಾಧ್ಯವಾಗುತ್ತದೆ ಎಂದು ಮನವಿದಾರರು ತಿಳಿಸಿದರು.
ಈಗ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ಮಾಡಬೇಕಾಗುತ್ತದೆ. ಹಾಗಾಗಿ ಆಹಾರ ಇಲಾಖೆಗೆ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಈ ಕಛೇರಿಗೆ ಅಲೆದಾಡಿ ಬಡಜನರು ಹೈರಾಣಾಗಿzರೆ. ಹೇಗಿದ್ದರೂ ಸೂಡಾ ಕಛೇರಿ ಆವರಣದಲ್ಲಿದ್ದ ಸಬ್ ರಿಜಿಸ್ಟ್ರರ್ ಆಫೀಸ್ ಈಗ ಖಾಲಿಇದೆ. ಈ ಖಾಲಿ ಇರುವ ಕಛೇರಿಗೆ ಅಥವಾ ಜಿಧಿಕಾರಿಗಳ ಪಕ್ಕದಲ್ಲಿರುವ ಹಳೇ ಡಿಸಿ ಕಛೇರಿ ನೆಲ ಮಹಡಿಗಾದರೂ ವರ್ಗಾಯಿಸ ಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಸಂಕ್ರಾನಾಯ್ಕ, ಆಲೀಂಖಾನ್, ಜನಮೇಜಿರಾವ್, ಜೀವನ್‌ಗೌಡ, ಚಿರಾಗ್, ಎಸ್.ಪಿ. ಶಿವಣ್ಣ ಸೇರಿದಂತೆ ಹಲವರಿದ್ದರು.