ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಾಲಯ …
ಲೇಖನ: ಮಾರ್ಪಳ್ಳಿ ಆರ್ ಮಂಜುನಾಥ್
ಶಿವಮೊಗ್ಗದ ತುಂಗಾ ನದಿಯ ತೀರದ ಕೋಟೆಯ ಬಳಿ ಇರುವ ಮಾರಿಕಾಂಬಾ ಗದ್ದುಗೆಯು ಬಹಳ ಪುರಾತನವಾಗಿದ್ದು ಈ ಗದ್ದುಗೆಗೆ ಕೆಳದಿಯ ಅರಸರು ಭಯ ಭಕ್ತಿಗಳಿಂದ ನಡೆದುಕೊಳ್ಳುತ್ತಿದ್ದರೆಂಬ ಐತಿಹ್ಯವಿದೆ. ಹಿಂದೆ ಈ ಸ್ಥಳದಲ್ಲಿ ದೊಡ್ಡದಾದ ಕಾಂಪೌಂಡ್ ಹಾಗೂ ಮದ್ಯ ದಲ್ಲಿ ಮಾರಿಯಮ್ಮನ ಗದ್ದುಗೆ ಮಾತ್ರವಿತ್ತು.
೧೯೭೮ರಲ್ಲಿ ಶಿವಮೊಗ್ಗ ನಗರಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ಈ ಗದ್ದುಗೆಯ ಸ್ಥಳದಲ್ಲಿ ನಡೆಯುತ್ತಿದ್ದ ಪೂಜೆ ಹಾಗೂ ಜಾತ್ರೆಗಳಿಗೆ ಒಂದು ಸಮಿತಿಯನ್ನು ರಚಿಸಿ ಇದರಲ್ಲಿ ಎ ಜನಾಂಗದವರು ಒಳಗೊಳ್ಳುವಂತೆ ಮಾಡಿ ೧೯೯೧ರಲ್ಲಿ ಗದ್ದುಗೆಯ ಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿ ಮಾರಿಕಾಂಬಾ ಸ್ಥಿರ ಮೂರ್ತಿಯನ್ನು ಶೃಂಗೇರಿ ಮಠದ ಶ್ರೀ ಭಾರತಿ ತೀರ್ಥ ಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸ ಲಾಯಿತು. ನಂತರ ಈ ಸಾನಿಧ್ಯದಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದಂತೆ ಗದ್ದುಗೆಯ ಬಳಿ ಕೋಳಿ ಕುರಿ ಬಲಿ ಕೊಡುವುದನ್ನು ನಿಲ್ಲಿಸಲಾಯಿತು.
ಹಿಂದಿನ ಸಂಪ್ರದಾಯದೊಂದಿಗೆ ಹೊಸ ಧಾರ್ಮಿಕ ವಿಧಿ ವಿಧಾನಗಳ ರೀತ್ಯಾ ಮಾರಿಕಾಂಬಾ ದೇವಿಗೆ ಪ್ರತಿನಿತ್ಯವೂ ಇಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜ ಕೈಂಕರ್ಯಗಳು ನಡೆಯುತ್ತಾ ಬಂದಿದೆ.
ಇಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಮಾರಿಕಾಂಬಾ ಜಾತ್ರೆಯನ್ನು ಮೂರು ದಿನಗಳ ಬದಲಿಗೆ ಐದು ದಿನಗಳಿಗೆ ಏರಿಸಿ ಇಡೀ ರಾಜ್ಯದಲ್ಲಿಯೇ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯು ಅದ್ದೂರಿ ಹಾಗೂ ವಿಜೃಂಭಣೆಯಿಂದ ನಡೆಯುವಂತೆ ಮಾಡಲಾಗಿದೆ .

ಮಾರಿಕಾಂಬ ಜಾತ್ರೆಯ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಯುವ ಈ ಮಹೋತ್ಸವದಲ್ಲಿ ತಲಾತಲಾಂತರ ದಿಂದ ಬಂದಿರುವ ಪರಂಪರೆಯಂತೆ ೮ ಸಮುದಾಯದವರು ಒಂದೊಂದು ದಿನ ಇಲ್ಲಿ ಪೂಜ ವಿಧಿ ವಿಧಾನಗಳನ್ನು ನಡೆಸುತ್ತಾರೆ.
ಸಾಗರದ ಹಾಗೂ ಶಿರಸಿಯ ಮಾರಿಕಾಂಬಾ ಜಾತ್ರೆಯಂತೆ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯು ಜಗತ್ಪ್ರಸಿದ್ಧವಾಗಿದೆ.
ಮಾರಿಕಾಂಬ ದೇವಾಲಯದಲ್ಲಿ ಸುಂದರವಾದ ಸ್ಥಿರಮೂರ್ತಿ ಅತ್ಯಂತ ಪ್ರಭಾವ ಯುಕ್ತವಾಗಿದೆ. ದೇವಿಯ ಎದುರಿಗೆ ಗದ್ದುಗೆ ಇದೆ .ಗದ್ದುಗೆಯ ಮೇಲೆ ದೇವಿಯ ಪಾದಗಳನ್ನು ಇರಿಸಲಾಗಿದೆ .
ಸಾಮಾನ್ಯವಾಗಿ ಮಾರಿಕಾಂಬಾ ದೇವಿಯ ಬಗ್ಗೆ ಇರುವ ಜಾನಪದ ಕಥೆಯಂತೆ ಬ್ರಾಹ್ಮಣ ಯುವತಿಯನ್ನು ಮೋಸದಿಂದ ಚಮ್ಮಾರ ಸಮುದಾಯ ದವನು ಮದುವೆಯಾಗುತ್ತಾನೆ. ಅವರಿಗೆ ಒಬ್ಬ ಮಗನು ಹುಟ್ಟುತ್ತಾನೆ. ಒಂದು ದಿನ ಬ್ರಾಹ್ಮಣ ಹೆಂಗಸಿಗೆ ತನ್ನ ಮಗ ಚಪ್ಪಲಿ ಮಾಡುತ್ತಿದ್ದನ್ನು ನೋಡಿ ವಿಚಾರಿಸಿದಾಗ ಅವನು ನನ್ನ ತಂದೆಯು ಸಹ ಈ ಕೆಲಸವನ್ನು ಮಾಡುತ್ತಿzನೆ ಎಂದು ಹೇಳುತ್ತಾನೆ. ಅದನ್ನು ಕೇಳಿದ ಬ್ರಾಹ್ಮಣ ಸ್ತ್ರೀಯು ಕೋಪ ರೌದ್ರತೆಯಿಂದ ಗಂಡನನ್ನು ಅಟ್ಟಿಸಿಕೊಂಡು ಹೋಗುತ್ತಾಳೆ. ಆಗ ಗಂಡನು ಕೋಣ ಒಂದರಲ್ಲಿ ಸೇರಿ ಕೊಳ್ಳುತ್ತಾನೆ . ಮಗನು ಓಡಿಹೋಗಿ ಕುರಿಯೊಂದರಲ್ಲಿ ಸೇರಿಕೊಳ್ಳುತ್ತಾನೆ. ಅಟ್ಟಿಸಿಕೊಂಡು ಬಂದ ಆಕೆಯ ಕೋಪ ಶಮನವಾಗದಿzಗ ಕೋಣ ಮತ್ತು ಕುರಿಯನ್ನು ಕಡೆಯುತ್ತಾಳೆ ಎಂಬ ಪರಂಪರೆ ಬೆಳೆದು ಬಂದಿದೆ.
ಆದರೆ ಸರ್ಕಾರದ ಆದೇಶದಂತೆ ಕೋಣವನ್ನು ಕಡಿಯುವುದನ್ನು ನಿಷೇಧಿಸುವುದರಿಂದ ಅದನ್ನು ನಿಲ್ಲಿಸಲಾಗಿದೆ.
ಇದರ ರೀತಿಯ ಇಲ್ಲಿ ಮಾರಿಕಾಂಬಾ ದೇವಿಯ ಎದುರುಗಡೆ ಕೋಣನ ಮೂರ್ತಿ ಅದರ ಕೆಳಗೆ ನೀರು ತುಂಬಿದ ಕಲ್ಲಿನ ಪಾತ್ರ ಇದೆ. ಇದನ್ನು ಕರಿಬಾನಿ ಸನ್ನಿಧಿ ಎಂದು ಅದರ ಪಕ್ಕದಲ್ಲಿ ಮಾತಂಗಮ್ಮ ಸನ್ನಿಧಿಯ ಸುಂದರ ಗುಡಿಯಿದೆ .
ಮಾರಿಕಾಂಬ ದೇವಾಲಯದ ಎದುರುಗಡೆ ಸುಮಾರು ನೂರಾರು ವರ್ಷಗಳ ಹಳೆಯದಾದ ಪವಿತ್ರವೆನಿಸಿದ ಅರಳಿ ವೃಕ್ಷ ಅದರ ಕೆಳಗೆ ನಾಗರಕಲ್ಲುಗಳು ಹಾಗೂ ವೃತ್ತಾಕಾರದ ಗೋಳದ ಕಲ್ಲುಗಳು ಇವೆ . ಅದನ್ನ ಭಕ್ತ ಜನರು ತಮ್ಮ ಇಷ್ಟಗಳನ್ನು ನೆರವೇರಿಸುವಂತಿದ್ದರೆ ಅದನ್ನು ಸುಲಭ ವಾಗಿ ಎತ್ತದಿರುವಂತಹ ರೀತಿಯ ನಂಬಿಕೆ ಇದೆ .
ಶಿವಮೊಗ್ಗದ ಗ್ರಾಮ ದೇವತೆ ಹಾಗೂ ಪುರಾತನ ಕಾಲದ ಪರಂಪರೆ ಹೊಂದಿದ ಈ ಮಾರಿಕಾಂಬಾ ದೇವಾಲಯ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ಬಂದಿರುವುದಲ್ಲದೇ ಇಲ್ಲಿ ನಡೆಯುವ ಶ್ರೀ ಕೋಟೆ ಮಾರಿಕಾಂಬಾ ಜತ್ರೆಯು ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಇಲ್ಲಿರುವ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಕಾರಣವೆನ್ನುವುದರಲ್ಲಿ ಎರಡು ಮಾತಿಲ್ಲ .

